ಡಿ. 26: ಕೆ.ಸಿ ರೋಡ್ನಲ್ಲಿ ಸಾಮೂಹಿಕ ವಿವಾಹ
ಮಂಗಳೂರು, ಡಿ.23: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಕೆ.ಸಿ ರೋಡ್ ಸೆಂಟರ್ ವತಿಯಿಂದ 10ನೇ ವರ್ಷದ 10 ಜೋಡಿಗಳ ಸಾಮೂಹಿಕ ವಿವಾಹವು ಡಿ.26ರಂದು ಬೆಳಗ್ಗೆ 10ಕ್ಕೆ ಎಸ್. ಉಚ್ಚಿಲ ಕೆನ್ ಝಾ ಗಾರ್ಡನ್ನಲ್ಲಿ ನಡೆಯಲಿದೆ.
ಎಸ್ವೈಎಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ ಹುಸೈನ್ ಸಅದಿ ಕೆ.ಸಿ.ರೋಡ್ ಅಧ್ಯಕ್ಷತೆ ಮತ್ತು ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹೀಂ ಖಲೀಲ್ ಅಲ್-ಬುಖಾರಿ ಕಡಲುಂಡಿ ಮತ್ತು ಕರ್ನಾಟಕ ಸುನ್ನಿ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನೇತೃತ್ವ ವಹಿಸಲಿದ್ದಾರೆ ಎಂದು ಮ್ಯಾರೇಜ್ ಸೆಲ್ ಕನ್ವೀನರ್ ಎ.ಎಸ್ ಉಮರ್ ಮಾಸ್ಟರ್ ತಿಳಿಸಿದ್ದಾರೆ.
Next Story