ಉಡುಪಿ: ಮಹಿಳೆ ನಾಪತ್ತೆ
ಉಡುಪಿ, ಡಿ.24: ಜಿಲ್ಲೆಯ ಮುದೂರು ಗ್ರಾಮದ ಹಾಲಬೇರು ನಿವಾಸಿ ಜ್ಯೋತಿ (35) ಎಂಬ ಮಹಿಳೆ ಡಿ.19ರಂದು ರಾತ್ರಿ 8 ಗಂಟೆಯ ಸುಮಾರಿಗೆ ಮನೆಯಿಂದ ಹೊರ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ
135 ಸೆಂ.ಮೀ. ಎತ್ತರ, ಗೋಧಿ ಮೈಬಣ್ಣ, ದಪ್ಪ ಶರೀರ, ದುಂಡು ಮುಖ ಹೊಂದಿದ್ದು, ಕನ್ನಡ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-258233, ಬೈಂದೂರು ವೃತ್ತ ನಿರೀಕ್ಷಕರು ದೂರವಾಣಿ ಸಂಖ್ಯೆ: 08254-232338 ಸಂಪರ್ಕಿಸುವಂತೆ ಕೊಲ್ಲೂರು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story





