ಜ.5ಕ್ಕೆ ವಿಧಾನಪರಿಷತ್ ನ 25 ಸದಸ್ಯರ ಬೀಳ್ಕೊಡುಗೆ: ಸಭಾಪತಿ ಬಸವರಾಜ ಹೊರಟ್ಟಿ

ಬೆಳಗಾವಿ, ಡಿ.24: ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ 25 ವಿಧಾನಪರಿಷತ್ ಸದಸ್ಯರ 6 ವರ್ಷದ ಅಧಿಕಾರಾವಧಿ ಮುಕ್ತಾಯ ಹಿನ್ನೆಲೆ ಜ.5ರಂದು ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಶುಕ್ರವಾರ ವಿಧಾನ ಪರಿಷತ್ತಿನ ಕಲಾಪ ವೇಳೆ ಅವರು, ಬೆಂಗಳೂರಿನ ವಿಧಾನಸೌಧದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದ್ದು, ಜ.5 ರಂದು ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಒಟ್ಟು 75 ಸದಸ್ಯರ ಬಲ ಹೊಂದಿರುವ ವಿಧಾನಪರಿಷತ್‍ನಲ್ಲಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಆಡಳಿತ ಪಕ್ಷವಾಗಿಯೂ ತನ್ನ ಬಲ ಹೊಂದಿದೆ. ಇತ್ತೀಚಿಗೆ ನಡೆದ 25 ಸ್ಥಾನಗಳ ಪರಿಷತ್ತು ಚುನಾವಣೆಯಲ್ಲಿ ಜೆಡಿಎಸ್ ಎರಡು, ಕಾಂಗ್ರೆಸ್ 11, ಬಿಜೆಪಿ 11 ಹಾಗೂ ಪಕ್ಷೇತರ ಒಂದು ಸ್ಥಾನ ಗೆದ್ದಿದ್ದಾರೆ.
Next Story





