ಉದ್ಯಮಿಗಳಿಗೆ ಸಾಲದ ಆಮಿಷವೊಡ್ಡಿ 5.8 ಕೋಟಿ ರೂ.ವಂಚನೆ: ಐವರು ಆರೋಪಿಗಳ ಬಂಧನ

ಬೆಂಗಳೂರು, ಡಿ.24: ಉದ್ಯಮಿಗಳಿಗೆ 390 ಕೋಟಿ ರೂ.ಮೊತ್ತದ ಸಾಲ ನೀಡುವ ಆಮಿಷವೊಡ್ಡಿ 5.8 ಕೋಟಿ ರೂಪಾಯಿ ಹಣ ಪಡೆದು ಮೋಸ ಮಾಡಿದ ಐವರು ಅಂತಾರಾಜ್ಯ ವಂಚಕ ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಬ್ದುಲ್ ಜಮಾಕ್, ಸೈಯದ್ ಇಬ್ರಾಹಿಂ, ವಿವೇಕ್, ಶಿವರಾಮ್ ರಘುವರನ್ ಹಾಗೂ ಕ್ರಿಸ್ಟೋಫರ್ ಎಂದು ಗುರುತಿಸಲಾಗಿದೆ.
ಉದ್ಯಮಿಗಳಿಗೆ ಲೋನ್ ಕೊಡಿಸುವುದಾಗಿ ಆಮಿಷವೊಡ್ಡಿ, ಅದಕ್ಕಾಗಿ ಹಣ ಪಡೆದು ವಂಚಿಸುತ್ತಿದ್ದ ಇವರು ಇಬ್ಬರು ಉದ್ಯಮಿಗಳಿಗೆ 390 ಕೋಟಿ ರೂ.ಸಾಲ ಕೊಡಿಸುವುದಾಗಿ ಹೇಳಿ 5.8 ಕೋಟಿ ರೂ.ಪಡೆದು ತಲೆಮರೆಸಿಕೊಂಡಿದ್ದರು.
ವಂಚನೆ ಆಗಿರುವ ಕುರಿತು ರಿಯಲ್ ಎಸ್ಟೇಟ್ ಏಜೆಂಟ್ ಗಿರೀಶ್ ಹಾಗೂ ಪಣಿತರನ್ ಎಂಬುವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Next Story





