ರಾಷ್ಟ್ರೀಯ ಓಪನ್ ಫಿಡೆ ರೇಟಿಂಗ್ ‘ಕುದುರೆಮುಖ ಟ್ರೋಫಿ’ ಚೆಸ್ ಪಂದ್ಯಾಟ
ಮಂಗಳೂರು, ಡಿ.24: ಭಾರತ ಸರಕಾರದ ಉಕ್ಕು ಸಚಿವಾಲಯದ ನಿರ್ದೇಶನದ ಮೇರೆಗೆ ಕೆಐಓಸಿಎಲ್ ವತಿಯಿಂದ ಎರಡು ದಿನಗಳ ರಾಷ್ಟ್ರ ಮಟ್ಟದ ಓಪನ್ ಫಿಡೆ ರೇಟಿಂಗ್ ‘ಕುದುರೆಮುಖ ಟ್ರೋಫಿ’ ಚೆಸ್ ಪಂದ್ಯಾಟ ಜ. 1 ಮತ್ತು 2ರಂದು ನಡೆಯಲಿದೆ.ಕಾವೂರಿನ ಕೆಐಓಸಿಎಲ್ ನೆಹರೂ ಭವನದಲ್ಲಿ ಈ ಪಂದ್ಯಾಟ ನಡೆಯಲಿದೆ.5-7, 9, 11, 13, 15 ವರ್ಷ ವಯಸ್ಸಿನ ವಿಭಾಗಗಳಲ್ಲಿ ಮತ್ತು ಅತ್ಯುತ್ತಮ ಹಿರಿಯ, ಕಿರಿಯ ಹಾಗೂ ಮಹಿಳಾ ಆಟಗಾರರಿಗೆ ವಿಶೇಷ ಬಹುಮಾನಗಳೊಂದಿಗೆ ಸ್ಪರ್ಧೆ ನಡೆಯಲಿದೆ.
ಒಟ್ಟು ನಗದು ಬಹುಮಾನ 2 ಲಕ್ಷ ರೂ. ಹಾಗೂ 165 ಟ್ರೋಫಿಗಳನ್ನು ಒಳಗೊಂಡಿರುತ್ತದೆ. ಪ್ರತಿ ವಯೋಮಾನದ ವಿಭಾಗದಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಒಟ್ಟು 10 ಬಹುಮಾನ ಮತ್ತು ಮುಕ್ತ ವಿಭಾಗದಲ್ಲಿ ಟ್ರೋಫಿಗಳೊಂದಿಗೆ 10 ಬಹುಮಾನ ನೀಡಲಾಗುತ್ತದೆ. ನೋಂದಣಿ ಶುಲ್ಕ 1000 ರೂ. ಮತ್ತು ಡಿ. 30ರಂದು ಬೆಳಗ್ಗೆ 10 ಗಂಟೆಯೊಳಗೆ ನೋಂದಣಿಗೆ ಕೊನೆಯ ಅವಧಿಯಾಗಿರುತ್ತದೆ.
www.karnatakachess.comನಲ್ಲಿ ನೋಂದಣಿ ಮಾಡಬಹುದು. ಮಾಹಿತಿಗಾಗಿ kudremukhchess@gmail.comಗೆ ಸಂಪರ್ಕ ಮಾಡಬಹುದು ಎಂದು ಚೆಸ್ ಪಂದ್ಯಾಟ ಸಮಿತಿಯ ಸಮನ್ವಯಕಾರ ಮುರುಗೇಶ್ ಎಸ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.





