ಇಸ್ಪೀಟ್ ಜುಗಾರಿ: ಏಳು ಮಂದಿ ಬಂಧನ
ಕುಂದಾಪುರ, ಡಿ.24: ಹಟ್ಟಿಯಂಗಡಿ ಕ್ರಾಸ್ ಬಳಿ ಡಿ.24ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಸ್ರೂರು ಹಟ್ಟಿಕುದ್ರುವಿನ ರಾಘವೇಂದ್ರ(38), ಪ್ರಕಾಶ್(40), ಗುಡ್ಡೆ ಯಂಗಡಿ ಕನ್ಯಾನದ ಸುರೇಂದ್ರ(27), ಹಟ್ಟಿಯಂಗಡಿ ಸಸಿಹಿತ್ಲುವಿನ ನಾಗರಾಜ್ ಪೂಜಾರಿ(45), ಸುರೇಶ್ ಪೂಜಾರಿ(49), ಕರ್ಕೀಗುಡ್ಡೆಯ ಸದಾನಂದ(28), ಕೋಟೆಬಾಗಿಲಿನ ರತ್ನಾಕರ(32) ಬಂಧಿತ ಆರೋಪಿಗಳು. ಬಂಧಿತರಿಂದ 1600 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





