ಗಂಗೊಳ್ಳಿ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಗಂಗೊಳ್ಳಿ, ಡಿ.24: ತ್ರಾಸಿ ಗ್ರಾಮದ ಕಲ್ಲಾಣಿ ಶಾಲೆ ಹಿಂಭಾಗ ಸೌಪರ್ಣಿಕ ಹೊಳೆಯ ದಡದಲ್ಲಿ ಸುಮಾರು 35 ರಿಂದ 40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಡಿ.23ರಂದು ಸಂಜೆ ವೇಳೆ ಪತ್ತೆಯಾಗಿದೆ.
ಮೃತದೇಹದ ಮೈಮೇಲೆ ಅಲ್ಲಲ್ಲಿ ಜಲಚರಗಳು ತಿಂದಿರುವುದು ಮತ್ತು ಮೈ ಮೇಲೆ ಚರ್ಮ ಸುಲಿದಿರುವುದು ಕಂಡು ಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story