ತಾನು ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಬಾಂಬ್ ಇದೆ ಎಂದು ಶಂಕೆ ವ್ಯಕ್ತಪಡಿಸಿದ ಬಿಜೆಪಿ ನಾಯಕಿ ಉಮಾಭಾರತಿ
2 ಗಂಟೆ ನಿಲ್ದಾಣದಲ್ಲೇ ನಿಂತ ರೈಲು

ಝಾನ್ಸಿ: ಖಜುರಾಹೊ ಕುರುಕ್ಷೇತ್ರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ. 11841) ಅನ್ನು ಗುರುವಾರ ರಾತ್ರಿ ಲಲಿತ್‌ಪುರ ನಿಲ್ದಾಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಿಲ್ಲಿಸಲಾಯಿತು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಅವರು ಬಾಂಬ್ ಭಯದ ಶಂಕೆಯಿಂದ ರೈಲಿನ ಅಲಾರಾಂ ಮೊಳಗಿಸಿದ ನಂತರ ರೈಲು ಮುಂದೆ ಹೋಗಲು ಅನುಮತಿಸುವ ಮೊದಲು ಅದನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಉಮಾಭಾರತಿ ಅವರು ಟಿಕಮ್‌ಗಢ್‌ನಿಂದ ಹೊಸದಿಲ್ಲಿಗೆ ರೈಲಿನ ಎಚ್ಎ-1 ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ರಾತ್ರಿ 9.40 ಕ್ಕೆ ಲಲಿತ್‌ಪುರ ನಿಲ್ದಾಣವನ್ನು ತಲುಪಿತು ಹಾಗೂ ಅಲ್ಲಿ ರಾತ್ರಿ 11.30 ರವರೆಗೆ ನಿಲ್ಲಿಸಲಾಯಿತು. ಆರ್‌ಪಿಎಫ್ ಮತ್ತು ಜಿಆರ್‌ಪಿಯ ಜಂಟಿ ತಂಡ ರೈಲನ್ನು ಕೂಲಂಕಷವಾಗಿ ಶೋಧಿಸಿತು. ಆದರೆ ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ಝಾನ್ಸಿಯಲ್ಲೂ ಅದೇ ಪ್ರಕ್ರಿಯೆ ಪುನರಾವರ್ತನೆಯಾಯಿತು.
Next Story