ಟಿಪ್ಪರಿನ ಬ್ಯಾಟರಿ ಕಳವು
ಮಣಿಪಾಲ, ಡಿ.25: ಟಿಪ್ಪರ್ ಲಾರಿಯೊಂದರ ಸಾವಿರಾರು ರೂ. ವೌಲ್ಯದ ಬ್ಯಾಟರಿ ಕಳವು ಮಾಡಿರುವ ಘಟನೆ ಡಿ.24ರಂದು ರಾತ್ರಿ ವೇಳೆ ಪರ್ಕಳದ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ.
ಪರ್ಕಳ ಪೆಟ್ರೋಲ್ ಬಂಕ್ನ ಶೆಡ್ ಹಿಂಬದಿಯಲ್ಲಿ ನಿಲ್ಲಿಸಿದ್ದ ಕಾರ್ಕಳ ಬೈಲೂರಿನ ಮಂಜುನಾಥ ರಾವ್ ಎಂಬವರ ಟಿಪ್ಪರ್ ಲಾರಿಯ ಒಟ್ಟು 20,000 ಸಾವಿರ ರೂ. ಮೌಲ್ಯದ 2 ಬ್ಯಾಟರಿಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story