ರಾಜ್ಯದಲ್ಲಿ ಮತ್ತೆ 7 ಮಂದಿಗೆ ಒಮೈಕ್ರಾನ್ ದೃಢ; 37ಕ್ಕೇರಿದ ಸೋಂಕಿತರ ಸಂಖ್ಯೆ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು, ಡಿ.24: ರಾಜ್ಯದಲ್ಲಿ ಈಗಾಗಲೇ 31 ಜನರಿಗೆ ಒಮೈಕ್ರಾನ್ ಬಂದಿದ್ದು, ಶನಿವಾರ ಕೂಡ ಹೊಸದಾಗಿ 7 ಜನರಿಗೆ ಒಮೈಕ್ರಾನ್ ವೈರಸ್ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಹೊಸದಿಲ್ಲಿಗೆ ಹೋಗಿ ಬಂದಿದ್ದ ಬೆಂಗಳೂರಿನ 76 ವರ್ಷದ ವ್ಯಕ್ತಿಗೆ, ಯುಎಇಯಿಂದ ಬೆಂಗಳೂರಿಗೆ ಆಗಮಿಸಿದ್ದಂತ 30 ವರ್ಷದ ಮಹಿಳೆಗೆ, ಜಿಂಬಾಬೆಯಿಂದ ಬೆಂಗಳೂರಿಗೆ ವಾಪಾಸ್ ಆಗಿದ್ದ 63 ವರ್ಷದ ಮಹಿಳೆಗೆ, ಯುಕೆಯಿಂದ ಬಂದಿದ್ದ ಒಮೈಕ್ರಾನ್ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 54 ವರ್ಷದ ಮಹಿಳೆಗೆ ಒಮೈಕ್ರಾನ್ ದೃಢಪಟ್ಟಿದೆ ಎಂದು ತಿಳಿಸಿದೆ.
ಯುಕೆಯಿಂದ ಬೆಂಗಳೂರಿಗೆ ವಾಪಾಸ್ ಆಗಿದ್ದಂತ 21 ವರ್ಷದ ವ್ಯಕ್ತಿ, ಹೊಸದಿಲ್ಲಿಗೆ ಹೋಗಿ ಬಂದಿದ್ದಂತ 62 ವರ್ಷದ ಬೆಂಗಳೂರಿನ ವ್ಯಕ್ತಿಗೆ ಹಾಗೂ ಯುಎಸ್ಎಗೆ ಹೋಗಿ ಬೆಂಗಳೂರಿಗೆ ಆಗಮಿಸಿದ್ದಂತ 15 ವರ್ಷದ ವ್ಯಕ್ತಿಯೊಬ್ಬರು ಸೇರಿದಂತೆ 7 ಜನರಿಗೆ ಒಮೈಕ್ರಾನ್ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿರೋದಾಗಿ ತಿಳಿಸಿದೆ.





