Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತದ ಚುನಾವಣಾ ಪ್ರಜಾಪ್ರಭುತ್ವವನ್ನೇ...

ಭಾರತದ ಚುನಾವಣಾ ಪ್ರಜಾಪ್ರಭುತ್ವವನ್ನೇ ಮುಗಿಸೀತೇ? ಆಧಾರ್-ಮತದಾರರ ಗುರುತಿನ ಚೀಟಿ ಜೋಡಣೆ

ಎಂ.ಜಿ. ದೇವಸಹಾಯಮ್ಎಂ.ಜಿ. ದೇವಸಹಾಯಮ್26 Dec 2021 12:05 AM IST
share
ಭಾರತದ ಚುನಾವಣಾ ಪ್ರಜಾಪ್ರಭುತ್ವವನ್ನೇ ಮುಗಿಸೀತೇ?  ಆಧಾರ್-ಮತದಾರರ ಗುರುತಿನ ಚೀಟಿ ಜೋಡಣೆ

ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯಂತಹ ಹಣಕಾಸು ವಿವರಗಳನ್ನು ಒದಗಿಸುವ ಮೂಲಕ್ಕೆ ಜೋಡಿಸುವುದು ಸೊತ್ತಿನಿಂದ ವಂಚಿತಗೊಳಿಸಿದಂತೆ; ಹಾಗಾಗಿ, ಅದು ಅಸಾಂವಿಧಾನಿಕ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು. ಇದೇ ಆಧಾರ್ ಕಾರ್ಡನ್ನು ಮತದಾರ ಗುರುತು ಚೀಟಿಯೊಂದಿಗೆ ಜೋಡಿಸುವುದು ಸರಕಾರವೊಂದನ್ನು ಆರಿಸುವ ತಮ್ಮ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಿನಿಂದ ನಾಗರಿಕರನ್ನು ವಂಚಿಸಬಹುದು; ಹಾಗಾಗಿ ಅದು ದುಪ್ಪಟ್ಟು ಅಸಾಂವಿಧಾನಿಕ.


ಲೋಕಸಭೆ ಮತ್ತು ರಾಜ್ಯಸಭೆಗಳು ‘ಚುನಾವಣಾ ಪ್ರಜಾಪ್ರಭುತ್ವ’ದ ವಿರುದ್ಧ ಕ್ಷಿಪ್ರಕ್ರಾಂತಿಯೊಂದನ್ನು ನಡೆಸಿವೆ. ಚುನಾವಣಾ ಆಯೋಗ ನೀಡುವ ಮತದಾರ ಗುರುತಿನ ಚೀಟಿಯನ್ನು ಕೇಂದ್ರ ಸರಕಾರಕ್ಕೆ ಸೇರಿದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ನೀಡುವ 12 ಅಂಕಿಗಳ ಬಯೋಮೆಟ್ರಿಕ್ ಸಂಖ್ಯೆ ಆಧಾರ್‌ಗೆ ಜೋಡಿಸುವ ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆಯನ್ನು ಅವುಗಳು ಅಂಗೀಕರಿಸಿವೆ.

ಇದು ಮೇಲ್ನೋಟಕ್ಕೇ ಅತ್ಯಂತ ಅನುಚಿತ ಕ್ರಮವೆಂಬಂತೆ ಕಂಡುಬರುತ್ತದೆ. ಯಾಕೆಂದರೆ ಚುನಾವಣಾ ಆಯೋಗವು, ಅತ್ಯಂತ ಪ್ರಾಮಾಣಿಕತೆಯಿಂದ ಮುಕ್ತ ಮತ್ತು ನ್ಯಾಯೋಚಿತ ವಿಧಾನದಲ್ಲಿ ಚುನಾವಣೆಗಳನ್ನು ನಡೆಸಲು ಭಾರತೀಯ ಸಂವಿಧಾನದ 324ನೇ ವಿಧಿಯನ್ವಯ ಸ್ಥಾಪಿಸಲ್ಪಟ್ಟಿರುವ ಸಾಂವಿಧಾನಿಕ ಸಂಸ್ಥೆಯಾಗಿದೆ. ಅದು ಸರಕಾರದ ಅಧೀನಕ್ಕೆ ಒಳಪಡದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ.

ಈ ಮಸೂದೆಯು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬ ಪ್ರತಿಪಕ್ಷ ಸಂಸದರ ವಾದಗಳನ್ನು ತಿರಸ್ಕರಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜೀಜು, ನಕಲಿ ಮತದಾನವನ್ನು ತಡೆಯುವ ಏಕೈಕ ಉದ್ದೇಶದಿಂದದ ತಿದ್ದುಪಡಿಯನ್ನು ತರಲಾಗಿದೆ ಎಂದು ಹೇಳಿದ್ದಾರೆ. ಆದರೆ, ವಾಸ್ತವಿಕವಾಗಿ, ಮತದಾರ ಗುರುತು ಚೀಟಿಯನ್ನು ಆಧಾರ್‌ನೊಂದಿಗೆ ಜೋಡಿಸಿದರೆ ‘ನಕಲಿ ಮತ್ತು ಮೋಸದ ಮತದಾನ’ ಪ್ರಮಾಣದಲ್ಲಿ ಹೆಚ್ಚಳವಾಗುವುದಷ್ಟೇ ಅಲ್ಲ, ಒಂದು ಹಂತದಲ್ಲಿ ಲಕ್ಷಾಂತರ ಜನರನ್ನು ಮತದಾನದಿಂದ ವಂಚಿಸಬಹುದಾಗಿದೆ.

ನರೇಂದ್ರ ಮೋದಿ ಸರಕಾರದ ಈ ಉಪಕ್ರಮವು ಗಂಭೀರ ಪರಿಣಾಮಗಳನ್ನು ಹೊಂದಿದೆ. 2014-15ರಲ್ಲಿ 8 ಕೋಟಿ ನಕಲಿ ಆಧಾರ್ ಸಂಖ್ಯೆಗಳನ್ನು ಪತ್ತೆಹಚ್ಚಲಾಗಿದೆ ಎನ್ನುವುದನ್ನು ಆರ್‌ಟಿಐ ಮಾಹಿತಿಗಳು ತಿಳಿಸಿವೆ. ಆಧಾರ್ ಅಂಕಿಸಂಖ್ಯೆಗಳಲ್ಲಿ ಹಸ್ತಕ್ಷೇಪ ನಡೆಸುವ ಸಾಧ್ಯತೆ ಅಧಿಕವಾಗಿದೆ ಎನ್ನುವುದನ್ನೂ ಆರ್‌ಟಿಐ ಮಾಹಿತಿಗಳು ತಿಳಿಸಿವೆ. ಹಾಗಾಗಿ, ಈ ಕ್ರಮವು ಭಾರತೀಯ ಚುನಾವಣಾ ವ್ಯವಸ್ಥೆಯನ್ನು ಬಾಹ್ಯ ವಂಚನೆಗೆ ಒಡ್ಡಬಹುದಾಗಿದೆ.

ಈ ಜೋಡಣೆಯು, ಖಾಸಗಿತನ ಉಲ್ಲಂಘನೆಯ ಅಂಗೀಕಾರಾರ್ಹ ಮಿತಿಯನ್ನು ನಿರ್ಧರಿಸುವ ವೇಳೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡಗಳ ಪೈಕಿ ಒಂದಾಗಿರುವ ‘ಸರಕಾರದ ಕಾನೂನುಬದ್ಧ ಹಿತಾಸಕ್ತಿ’ಯನ್ನು ಈಡೇರಿಸುತ್ತದೆ ಎಂಬುದಾಗಿ ಭಾರತೀಯ ಚುನಾವಣಾ ಆಯೋಗ (ಇಸಿಐ)ವು ವಾದಿಸಿತ್ತು. ಆದರೆ, ಇಲ್ಲಿ ಪ್ರಶ್ನೆಯಿರುವುದು, ಚುನಾವಣಾ ಆಯೋಗದ ಕೆಲಸ ಸರಕಾರದ ಹಿತಾಸಕ್ತಿಯನ್ನು ನೋಡಿಕೊಳ್ಳುವುದೇ ಅಥವಾ ನಾಗರಿಕರ ಹಿತಾಸಕ್ತಿಯನ್ನು ರಕ್ಷಿಸುವುದೇ ಎನ್ನುವುದು.

ಜೋಡಣೆಯು ಯಾಕೆ ಕೆಟ್ಟದು- 6 ಕಾರಣಗಳು
ಮತದಾರ ಗುರುತಿನ ಚೀಟಿ ಮತ್ತು ಆಧಾರ್ ಜೋಡಣೆಯ ವಿರುದ್ಧ ಹಲವು ಗಟ್ಟಿ ವಾದಗಳಿವೆ.
ಮೊದಲನೆಯದು, ಆಧಾರ್ ಮತದಾನ ಹಕ್ಕಿನ ಪುರಾವೆಯಲ್ಲ. ಅದನ್ನು ಯಾವತ್ತೂ ಪೌರತ್ವಕ್ಕೆ ಪುರಾವೆಯಾಗಿ ಬಳಸಲಾಗಿರಲಿಲ್ಲ. ಹಾಗಾಗಿಯೇ, ಆಧಾರ್ ಸಂಖ್ಯೆಗಳನ್ನು ನಾಗರಿಕರಿಗೆ ಮಾತ್ರವಲ್ಲ, ಭಾರತದ ಎಲ್ಲ ನಿವಾಸಿಗಳಿಗೆ ನೀಡಲಾಗಿತ್ತು. ಜನತಾ ಪ್ರಾತಿನಿಧ್ಯ ಕಾಯ್ದೆಯನ್ವಯ, ಭಾರತದ ನಿವಾಸಿಗಳಾಗಿರುವ ನಾಗರಿಕರಿಗೆ ಮಾತ್ರ ಮತದಾನದ ಹಕ್ಕಿದೆ. ಹಾಗಾಗಿ, ಈ ಎರಡು ಗುರುತು ಚೀಟಿಗಳನ್ನು ಜೋಡಿಸುವುದಕ್ಕೆ ಯಾವುದೇ ಅರ್ಥವಿಲ್ಲ. ಹಾಗಾಗಿ, ಈ ಪ್ರಕ್ರಿಯೆಯು ಸಾರ್ವಜನಕ ಹಣದ ಅತಿ ದೊಡ್ಡ ದುರ್ಬಳಕೆಯಾಗಿರುತ್ತದೆ.

ಎರಡನೆಯದಾಗಿ, ಈ ಜೋಡಣೆಯು ಮತದಾರರನ್ನು ಸಾಮೂಹಿಕವಾಗಿ ಅವರ ಹಕ್ಕಿನಿಂದ ವಂಚಿತಗೊಳಿಸ ಬಹುದಾಗಿದೆ. ಸರಕಾರದ ಇತರ ಇಲಾಖೆಗಳ ಮಾಹಿತಿಕೋಶವನ್ನು ‘ಸ್ವಚ್ಛಗೊಳಿಸಲು’ ಆಧಾರ್ ಸಂಖ್ಯೆಯನ್ನು ಜೋಡಿಸುವ ಪ್ರಯತ್ನಗಳು ಹಿಂದೆಯೂ ನಡೆದಿದ್ದವು. ಉದಾಹರಣೆಗೆ; ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎನ್‌ಆರ್‌ಇಜಿಎಸ್) ಮತ್ತು ಸಾರ್ವಜನಿಕ ವಿತರಣೆ ವ್ಯವಸ್ಥೆ(ಪಿಡಿಎಸ್)ಯನ್ನು ಆಧಾರ್‌ನೊಂದಿಗೆ ಜೋಡಿಸಲಾಗಿತ್ತು. ಆಗ ಬೃಹತ್ ಪ್ರಮಾಣದಲ್ಲಿ ಫಲಾನುಭವಿಗಳು ತಮ್ಮ ಹಕ್ಕುಗಳನ್ನೇ ಕಳೆದುಕೊಂಡಿದ್ದರು ಹಾಗೂ ಸಾವಿರಾರು ನಾಗರಿಕರನ್ನು ಯಾವುದೇ ಸೂಚನೆಯಿಲ್ಲದೆ ಖುಷಿಬಂದಂತೆ ಈ ವ್ಯವಸ್ಥೆಗಳಿಂದ ಕೈಬಿಡಲಾಗಿತ್ತು. ಉದಾಹರಣೆಗೆ; ಜಾರ್ಖಂಡ್‌ನಲ್ಲಿ 2016 ಮತ್ತು 2018ರ ನಡುವಿನ ಅವಧಿಯಲ್ಲಿ ಆಧಾರ್ ಜೋಡಣೆ ನಡೆದಾಗ 90 ಶೇಕಡ ಪಡಿತರ ಚೀಟಿಗಳನ್ನು ‘ನಕಲಿ’ ಎಂಬುದಾಗಿ ರದ್ದುಪಡಿಸಲಾಗಿತ್ತು. ಅದೂ ಅಲ್ಲದೆ, ಸರಕಾರಿ ಸೇವೆಗಳಲ್ಲಿ ಆಧಾರ್ ಸಂಬಂಧಿತ ಗುರುತು ಪತ್ತೆ ವೈಫಲ್ಯವು 12 ಶೇಕಡಾದಷ್ಟು ಇದೆ ಎನ್ನುವುದನ್ನು ಸ್ವತಃ ಯುಐಡಿಎಐ ಮುಖ್ಯಸ್ಥರೇ 2018ರಲ್ಲಿ ಒಪ್ಪಿಕೊಂಡಿದ್ದಾರೆ.

ಮೂರನೆಯದಾಗಿ, ಈ ಜೋಡಣೆಯಿಂದಾಗಿ ಮತದಾನ ವಂಚನೆಯು ಹೆಚ್ಚಾಗುವ ಸಾಧ್ಯತೆಯಿದೆ. ಆಧಾರ್ ಜೋಡಣೆಯು ಮತದಾರ ಗುರುತುಚೀಟಿ ಮಾಹಿತಿ ಕೋಶದ ಪರಿಶುದ್ಧತೆಯನ್ನು ಹಾಳು ಮಾಡುತ್ತದೆ. 2019ರಲ್ಲಿ, ಆಧಾರ್ ಪ್ರಾಧಿಕಾರವೇ ಹೇಳಿರುವಂತೆ, ಆಧಾರ್ ಅಂಕಿಅಂಶಗಳಲ್ಲಿನ ಲೋಪದೋಷವು ಚುನಾವಣಾ ಮಾಹಿತಿ ಕೋಶದಲ್ಲಿನ ಲೋಪದೋಷಗಳಿಗಿಂತ ಒಂದೂವರೆ ಪಟ್ಟು ಅಧಿಕವಾಗಿತ್ತು. ಈ ಎರಡು ಮಾಹಿತಿ ಕೋಶಗಳನ್ನು ಜೋಡಿಸಿದರೆ, ಚುನಾವಣಾ ಗುರುತು ಚೀಟಿ ಮಾಹಿತಿ ಕೋಶದಲ್ಲಿರುವ ದಾಖಲೆಯೊಂದರ ವಿಶ್ವಾಸಾರ್ಹತೆಯನ್ನು ನಿರ್ಧರಿಸಲು ಆಧಾರ್ ಮಾಹಿತಿಕೋಶವನ್ನು ಬಳಸಲಾಗುತ್ತದೆ.

ಆಧಾರ್ ಮಾಹಿತಿ ಕೋಶದಲ್ಲಿರುವ ಅಂಕಿಅಂಶಗಳು ಗುಣಮಟ್ಟದಲ್ಲಿ ಸಮಸ್ಯೆಯನ್ನು ಎದುರಿಸುತ್ತಿವೆ. ಮಾಹಿತಿಗಳ ದಾಖಲೀಕರಣಕ್ಕೆ ಸಮಗ್ರ ವಿಧಾನವೊಂದನ್ನು ಬಳಸದಿರುವುದು ಮತ್ತು ಪರಿಣಾಮಕಾರಿ ತಿದ್ದುಪಡಿ ವ್ಯವಸ್ಥೆಗಳ ಕೊರತೆಯು ಈ ಸಮಸ್ಯೆಗೆ ಕಾರಣವಾಗಿದೆ. ಹಾಗಾಗಿ, ಆಧಾರ್-ಮತದಾರ ಗುರುತು ಚೀಟಿ ಜೋಡಣೆಯು ಮತದಾರ ಗುರುತು ಚೀಟಿ ಮಾಹಿತಿ ಕೋಶದಲ್ಲಿರುವ ದಾಖಲೆಗಳ ಪಾವಿತ್ರ್ಯವನ್ನು ಕುಂದಿಸುತ್ತದೆ. ಆಧಾರ್-ಪಾನ್ ಜೋಡಣೆಯು ನಕಲಿ ದಾಖಲೆಗಳನ್ನು ವ್ಯವಸ್ಥೆಯೊಳಗೆ ತುರುಕಿಸಿದೆ ಎನ್ನುವುದನ್ನು ಇತ್ತೀಚಿನ ಸಂಶೋಧನೆಯೊಂದು ಪತ್ತೆಹಚ್ಚಿದೆ.

ನಾಲ್ಕನೆಯದಾಗಿ, ಮತದಾನಕ್ಕೆ ಬಯೋಮೆಟ್ರಿಕ್ ಗುರುತು ಪತ್ತೆ ವಿಧಾನವನ್ನು ಬಳಸುವುದು ತುಂಬಾ ಅಪಾಯಕಾರಿ. ಆಧಾರ್ ಜೋಡಣೆ ಮತ್ತು ಬಯೋಮೆಟ್ರಿಕ್ ಗುರುತುಪತ್ತೆ ವಿಧಾನದಲ್ಲಿ ಹಲವಾರು ವೈಫಲ್ಯಗಳಿರುವುದನ್ನು ಆಹಾರದ ಹಕ್ಕು ಅಭಿಯಾನವು ತೋರಿಸಿಕೊಟ್ಟಿದೆ. ಸಾಕಷ್ಟು ಪ್ರಮಾಣದಲ್ಲಿ ಮೂಲಸೌಕರ್ಯಗಳಿಲ್ಲದಿರುವುದು ಮತ್ತು ಯುಐಡಿಎಐ ವ್ಯವಸ್ಥೆಯಲ್ಲಿ ಸಮಸ್ಯೆ ಪರಿಹಾರ ಮಾರ್ಗಗಳ ಕೊರತೆಯು ಈ ವೈಫಲ್ಯಗಳಿಗೆ ಕಾರಣವಾಗಿದೆ. ಬೆರಳಚ್ಚು ವಿಧಾನವು ಹೆಚ್ಚಿನವರಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಅದರಲ್ಲೂ ಮುಖ್ಯವಾಗಿ ವೃದ್ಧರು ಮತ್ತು ಕೈಗಳಿಂದ ಕಠಿಣ ಕೆಲಸ ಮಾಡುವವರಲ್ಲಿ ಬೆರಳಚ್ಚನ್ನು ಗುರುತಿಸಲು ಈ ವ್ಯವಸ್ಥೆಯು ವಿಫಲವಾಗಿದೆ. ಮುಖ ಗುರುತು ನಿಖರವಾಗಿರುವುದಿಲ್ಲ ಹಾಗೂ ಅದರಲ್ಲಿ ಹಲವು ತಪ್ಪುಗಳು ಸಂಭವಿಸುತ್ತವೆ. ಈ ಸಮಸ್ಯೆಗಳನ್ನು ನಿಭಾಯಿಸಲು ಯುಐಡಿಎಐ ಕಂಡುಕೊಂಡ ಒಂದು ವಿಧಾನವೆಂದರೆ, ಅನಪೇಕ್ಷಿತ ‘ನಾಮಿನಿ ವ್ಯವಸ್ಥೆ’ ಮತ್ತು ಒಟಿಪಿ (ಕಲ್ಯಾಣ ಕಾರ್ಯಕ್ರಮಗಳಿಗೆ). ದುರ್ಗಮ ಮತ್ತು ಸಂಪರ್ಕ ವ್ಯವಸ್ಥೆಗಳಿಂದ ವಂಚಿತವಾಗಿರುವ ಸ್ಥಳಗಳಲ್ಲಿ ಸ್ಥಾಪಿಸಲಾಗಿರುವ ಮತದಾನ ಕೇಂದ್ರಗಳಲ್ಲಿ ಮತದಾನ ಮಾಡುವಾಗ ಇದು ಯಾವುದೂ ಕೆಲಸಕ್ಕೆ ಬರುವುದಿಲ್ಲ. ಅದೂ ಅಲ್ಲದೆ, ಇವಿಎಮ್‌ಗಳು ಇಂಟರ್‌ನೆಟ್‌ನೊಂದಿಗೆ ಸಂಪರ್ಕ ಹೊಂದಿರದ ಒಂಟಿ ಉಪಕರಣವಾಗಿರುವಾಗ, ಮತದಾರರ ಬಯೋಮೆಟ್ರಿಕ್ ತಪಾಸಣೆ ಮಾಡುವುದು ಹೇಗೆ?

ಐದನೆಯದಾಗಿ, ಮತದಾರ ಗುರುತು ಚೀಟಿ ಮತ್ತು ಆಧಾರ್ ಮಾಹಿತಿ ಕೋಶಗಳನ್ನು ಜೋಡಿಸುವುದು ಖಾಸಗಿತನದ ಹಕ್ಕಿನ ಮೇಲೆ ನಡೆಯುವ ದಾಳಿಯಾಗಿದೆ. ಅದು ನಮ್ಮ ಸಾಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳಾದ ಖಾಸಗಿತನ ಮತ್ತು ಮತದಾನದ ಗೌಪ್ಯತೆಯನ್ನು ಉಲ್ಲಂಘಿಸುತ್ತದೆ ಎಂಬ ಗಂಭೀರ ಕಳವಳವೂ ಇದೆ.

ಭಾರತದಲ್ಲಿ ಸದ್ಯಕ್ಕೆ ಅಂಕಿ-ಅಂಶ ರಕ್ಷಣಾ ಕಾನೂನಿಲ್ಲ. ಆಧಾರ್ ಮತ್ತು ಮತದಾರರ ಗುರುತು ಚೀಟಿ ಮಾಹಿತಿ ಕೋಶಗಳನ್ನು ಜೋಡಿಸಿದರೆ ಜನಸಂಖ್ಯೆಗೆ ಸಂಬಂಧಿಸಿದ ಮಾಹಿತಿಯು ಮತದಾರ ಮಾಹಿತಿ ಕೋಶಕ್ಕೆ ಬರುತ್ತದೆ. ಇದನ್ನು ನಿರ್ದಿಷ್ಟ ಗುಂಪಿನ ಮೇಲೆ ಹೆಚ್ಚುವರಿ ಕಣ್ಗಾವಲಿಗೆ ಮತ್ತು ಮತದಾನ ಹಕ್ಕಿನಿಂದ ಅವರನ್ನು ವಂಚಿಸಲು ಬಳಸಬಹುದಾಗಿದೆ. ಅದೂ ಅಲ್ಲದೆ, ನಿರ್ದಿಷ್ಟ ಗುಂಪನ್ನು ಗುರಿಯಿರಿಸಿ ಪ್ರಚಾರ ಮಾಡಲು ಹಾಗೂ ಸೂಕ್ಷ್ಮ ಖಾಸಗಿ ಮಾಹಿತಿಗಳ ವಾಣಿಜ್ಯ ಬಳಕೆಗೂ ಇದನ್ನು ಬಳಸಬಹುದಾಗಿದೆ.

2019ರಲ್ಲಿ, ಖಾಸಗಿತನವನ್ನು ಧಿಕ್ಕರಿಸಿ ನಿರ್ದಿಷ್ಟ ಮಾನದಂಡಗಳಲ್ಲಿ ಮಾಡಲಾದ ಮತದಾರರ ವಿಂಗಡಣೆಯು ವ್ಯಕ್ತಿಗಳು ಮತ್ತು ಪ್ರಜಾಪ್ರಭುತ್ವಗಳ ಮೇಲೆ ಬೀರಿದ ಅನಾಹುತಕಾರಿ ಪರಿಣಾಮಗಳನ್ನು ಕೇಂಬ್ರಿಜ್ ಅನಾಲಿಟಿಕ ಹಗರಣವು ನಿರೂಪಿಸಿದೆ. ಇತ್ತೀಚೆಗೆ, ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಭಾರತೀಯ ಜನತಾ ಪಕ್ಷವು ಮತದಾರರ ಆಧಾರ್ ದತ್ತಾಂಶಗಳನ್ನು ಅಕ್ರಮವಾಗಿ ಬಳಸುತ್ತಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಮದರಾಸು ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

ಆರನೆಯದಾಗಿ, ಆಧಾರ್ ಕಾನೂನಿನಲ್ಲಿರುವ ‘ವಾಲಂಟರಿನೆಸ್’ (ಸ್ವಯಂಪ್ರೇರಣೆ) ಭರವಸೆಯನ್ನು ನಂಬುವಂತಿಲ್ಲ. ಸ್ವಯಂಪ್ರೇರಣೆಯಿಂದ ಆಧಾರ್‌ಗೆ ಇತರ ಸೇವೆಗಳನ್ನು ಜೋಡಣೆ ಮಾಡಬಹುದು ಎಂಬು ದಾಗಿ ಕಾನೂನು ಹೇಳಿದ್ದರೂ, ಸುಪ್ರೀಂ ಕೋರ್ಟ್‌ನ ತಡೆಯಾಜ್ಞೆಗಳಿದ್ದರೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವಾಗ ಜನರನ್ನು ಯಾವ ರೀತಿಯಲ್ಲಿ ಬಲವಂತಪಡಿಸಲಾಗಿದೆ ಹಾಗೂ ಬೆದರಿಸಲಾಗಿದೆ ಎನ್ನುವುದನ್ನು ನಾವೆಲ್ಲಾ ನೋಡಿದ್ದೇವೆ.

ಭಯಾನಕ ಚಿತ್ರಣ
ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯಂತಹ ಹಣಕಾಸು ವಿವರಗಳನ್ನು ಒದಗಿಸುವ ಮೂಲಕ್ಕೆ ಜೋಡಿಸುವುದು ಸೊತ್ತಿನಿಂದ ವಂಚಿತಗೊಳಿಸಿದಂತೆ; ಹಾಗಾಗಿ, ಅದು ಅಸಾಂವಿಧಾನಿಕ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು. ಇದೇ ಆಧಾರ್ ಕಾರ್ಡನ್ನು ಮತದಾರ ಗುರುತು ಚೀಟಿಯೊಂದಿಗೆ ಜೋಡಿಸುವುದು ಸರಕಾರವೊಂದನ್ನು ಆರಿಸುವ ತಮ್ಮ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಿನಿಂದ ನಾಗರಿಕರನ್ನು ವಂಚಿಸಬಹುದು; ಹಾಗಾಗಿ ಅದು ದುಪ್ಪಟ್ಟು ಅಸಾಂವಿಧಾನಿಕ.
ಭಯಾನಕ ಅಂಶವೆಂದರೆ, ಆಧಾರ್ ಕಾರ್ಡ್ ಗೆ ಜೋಡಣೆಗೊಂಡ ಮತದಾರ ಗುರುತು ಚೀಟಿಯನ್ನು ಮೊಬೈಲ್ ಫೋನ್ ಸಂಖ್ಯೆಯೊಂದಕ್ಕೆ ಜೋಡಿಸಲಾಗುವುದು. ಈ ಮೊಬೈಲ್ ಸಂಖ್ಯೆಯು ಸಾಮಾಜಿಕ ಮಾಧ್ಯಮದೊಂದಿಗೆ ಜೋಡಣೆಯಾಗಿರುತ್ತದೆ. ಸಾಮಾಜಿಕ ಮಾಧ್ಯಮವು ಅಲ್ಗೋರಿಥಂ (ಸಾಫ್ಟ್‌ವೇರ್) ನೊಂದಿಗೆ ಜೋಡಣೆಯಾಗಿರುತ್ತದೆ. ಅಲ್ಗೋರಿದಮ್ ಬಳಕೆದಾರ ಹಿತಾಸಕ್ತಿ/ನಿಲುವುಗಳೊಂದಿಗೆ ಜೋಡಿಸಲ್ಪಟ್ಟಿದೆ. ದತ್ತಾಂಶಗಳನ್ನು ನಿಯಂತ್ರಿಸುವ ಅಂಕಿ-ಅಂಶ ರಕ್ಷಣೆ ಕಾನೂನಿನ ಅನುಪಸ್ಥಿತಿಯಲ್ಲಿ, ಮತದಾರರನ್ನು ಗುರುತು ಮಾಡಿಟ್ಟುಕೊಳ್ಳುವುದು, ಆಯ್ದ ಮತದಾರರನ್ನು ಕೈಬಿಡುವುದು ಮತ್ತು ಮತದಾರರ ನಿರ್ದಿಷ್ಟ ಗುಂಪುಗಳನ್ನು ಗುರಿಯಾಗಿಸಿ ಪ್ರಚಾರ ಮಾಡುವುದು ಎಲ್ಲವೂ ಸಾಧ್ಯವಾಗಲಿದೆ. ಬಹುಷಃ ಕಾನೂನಿನ ನಿಜವಾದ ಉದ್ದೇಶ ಇದೇ ಆಗಿದೆ; ಈಗ ಹೇಳಿಕೊಳ್ಳಲಾಗಿರುವಂತೆ ನಕಲಿ ಮತದಾನವನ್ನು ತಡೆಯುವುದು ಅಲ್ಲ.
ಮತದಾರರನ್ನು ಗುರುತು ಮಾಡಿಟ್ಟುಕೊಳ್ಳುವುದು ಮತ್ತು ಅವರಿಗೆ ಮತದಾನದ ಹಕ್ಕನ್ನು ನಿರಾಕರಿಸುವುದು- ಈ ಎರಡು ಅಂಶಗಳ ಮಾರಕ ಸಮಾಗಮವು ಭಾರತೀಯ ಚುನಾವಣಾ ಪ್ರಜಾಪ್ರಭುತ್ವವನ್ನು ನಾಶಪಡಿಸಬಹುದು.

ಕೃಪೆ: countercurrents.org

share
ಎಂ.ಜಿ. ದೇವಸಹಾಯಮ್
ಎಂ.ಜಿ. ದೇವಸಹಾಯಮ್
Next Story
X