ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಉಳ್ಳಾಲ ವತಿಯಿಂದ ರಕ್ತದಾನ ಶಿಬಿರ

ಉಳ್ಳಾಲ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಉಳ್ಳಾಲ ಇದರ ವತಿಯಿಂದ ರಕ್ತದಾನ ಶಿಬಿರವು ಯೇನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಇವರ ಸಹಕಾರದೊಂದಿಗೆ ಉಳ್ಳಾಲ ನಗರಸಭಾ ಸಮುದಾಯ ಭವನದಲ್ಲಿ ನಡೆಯಿತು.
ಶಿಬಿರದಲ್ಲಿ 129 ಮಂದಿ ರಕ್ತದಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಉಳ್ಳಾಲ ಇದರ ಅಧ್ಯಕ್ಷರಾದ ತನ್ವೀರ್ ವಹಿಸಿದ್ದರು. ಜಮಾಲ್ ಜೋಕಟ್ಟೆ ಪ್ರಾಸ್ತಾವಿಕ ಭಾಷಣ ಮಾಡಿದರು.
ಉಳ್ಳಾಲ ನಗರಸಭಾ ಕೌನ್ಸಿಲರ್ ರಮೀಝ್ ಕೋಡಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಇಮ್ತಿಯಾಝ್ ಕೋಟೆಪುರ, ನವಾಝ್ ಉಳ್ಳಾಲ್, ಇಸ್ಮಾಯಿಲ್ ಉಳ್ಳಾಲ್, ಅಕ್ಬರ್ ಕುದ್ರೋಳಿ, ಬದ್ರುದ್ದೀನ್ ಉಳ್ಳಾಲ್, ಶಹೀದ್ ಕಿನ್ಯ, ಸುಹೈಲ್ ಉಳ್ಳಾಲ, ಇಮ್ತಿಯಾಝ್ ಮುಕ್ಕಚ್ಚೇರಿ, ಉಳ್ಳಾಲ ನಗರಸಭೆ ಕೌನ್ಸಿಲರ್‌ಗಳಾದ ಅಸ್ಗರ್ ಅಲಿ, ಬಶೀರ್ ಕೈಕೊ, ಇಕ್ಬಾಲ್ ಕೋಟೆಪುರ, ರವೂಫ್ ಉಳ್ಳಾಲ್, ಬಶೀರ್ ಯು.ಎನ್, ಕಲೀಲ್ ಕೈಕೊ, ಜಮಾಲ್ ಉಳ್ಳಾಲ, ಸತ್ತಾರ್ ಅಳೇಕಲ, ಶಂಸುದ್ದೀನ್ ಅಳೇಕಲ, ಅಲ್ ಜಬ್ಬಾರ್ ಮುಕ್ಕಚ್ಚೇರಿ, ಆರಿಸ್, ಮನ್ಸೂರ್ ಅಳೇಕಲ, ಕಲೀಲ್ ಎಸ್‌ಡಿಟಿಯು, ರಿಯಾಝ್, ಫಹದ್, ಶಿಯಾಬ್, ಶಮೀರ್ ಝುಬೈರ್ ಮೊದಲಾದವರು ಭಾಗವಹಿಸಿದರು.
ಕಾರ್ಯಕ್ರಮವನ್ನು ತನ್ವೀರ್ ಸ್ವಾಗತಿಸಿದರು. ಸಾದಿಕ್ ಯು.ಬಿ. ವಂದಿಸಿದರು. ಮೊಹಮ್ಮದ್ ಫೈರೋಝ್ ಕಾರ್ಯಕ್ರಮ ನಿರೂಪಿಸಿದರು.










