ಸಂಗೀತ ನಿರ್ದೇಶಕ ಗುರುಕಿರಣ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ
![ಸಂಗೀತ ನಿರ್ದೇಶಕ ಗುರುಕಿರಣ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ ಸಂಗೀತ ನಿರ್ದೇಶಕ ಗುರುಕಿರಣ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ](https://www.varthabharati.in/sites/default/files/images/articles/2021/12/26/319086-1640527268.jpg)
ಸುರತ್ಕಲ್, ಡಿ.26: ರಂಗಚಾವಡಿ ಮಂಗಳೂರು ಇದರ ವತಿಯಿಂದ ವರ್ಷಂಪ್ರತಿ ನೀಡಲಾಗುವ ರಂಗಚಾವಡಿ ಪ್ರಶಸ್ತಿಯನ್ನು ಈ ಬಾರಿ ಸಂಗೀತ ನಿರ್ದೇಶಕ ಗುರುಕಿರಣ್ಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ಗುರುಕಿರಣ್ ಬೇರೆಲ್ಲ ಗೌರವ ಸನ್ಮಾನಕ್ಕಿಂತ ಹುಟ್ಟೂರಲ್ಲಿ, ಊರ ಜನರು ಮಾಡುವ ಸನ್ಮಾನ ಖುಷಿ ಕೊಡುವಂತದ್ದು. ರಂಗಚಾವಡಿ ಜೊತೆಗೆ ಬೆಳೆದಿರುವ ನನಗೆ ಈ ಸನ್ಮಾನ ಸದಾಕಾಲ ನೆನಪಲ್ಲಿ ಉಳಿಯುವಂತದ್ದು ಎಂದರು.
ಇತ್ತೀಚಿಗೆ ವಿಧಿವಶರಾದ ನಟ ಪುನೀತ್ ರಾಜ್ ಕುಮಾರ್ಗೆ ಗೀತ ನಮನ ಕಾರ್ಯಕ್ರಮದ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎಂಆರ್ಜಿ ಗ್ರೂಪ್ನ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಶಾಸಕ ಡಾ.ವೈ ಭರತ್ ಶೆಟ್ಟಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಜಾಗತಿಕ ಬಂಟ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸಿ.ಎ. ಸುಧೀರ್ ಕುಮಾರ್ ಶೆಟ್ಟಿ, ದಿವ್ಯರೂಪ ಕನ್ಸ್ಟ್ರಕ್ಷನ್ಸ್ ಮಾಲಕ ಯಾದವ ಕೋಟ್ಯಾನ್ ಪೆರ್ಮುದೆ, ಥಾಣೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಎಲ್. ಶೆಟ್ಟಿ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ರವಿ ಶೆಟ್ಟಿ ಕಳಸ, ಉದ್ಯಮಿ ರಮಾನಾಥ್ ಶೆಟ್ಟಿ ಬೈಕಂಪಾಡಿ, ಲಕುಮಿ ತಂಡದ ಸಂಚಾಲಕ ಕಿಶೋರ್ ಡಿ. ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ, ಕ್ಯಾಟ್ಕ ಅಧ್ಯಕ್ಷ ಮೋಹನ್ ಕೊಪ್ಪಲ, ಹಿರಿಯ ರಂಗಕರ್ಮಿ ವಿ.ಜಿ. ಪಾಲ್, ಚಿತ್ರನಟ ರೂಪೇಶ್ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಬೋಜರಾಜ್ ವಾಮಂಜೂರು, ನಿರೀಕ್ಷಾ ಶೆಟ್ಟಿ ಉಪಸ್ಥಿತರಿದ್ದರು.
ನವೀನ್ ಶೆಟ್ಟಿ ಎಡ್ಮೆಮಾರ್ ಅಭಿನಂದನಾ ಮಾತುಗಳನ್ನಾಡಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಶಿಫಾಲಿ ಅವರಿಂದ ನೃತ್ಯ ಕಾರ್ಯಕ್ರಮ ಜರಗಿತು