ಸಿಒಡಿಪಿಯಲ್ಲಿ ಕ್ಯಾನ್ಸರ್ ಪೀಡಿತರಿಗೆ ಪೌಷ್ಠಿಕ ಆಹಾರ ಕಿಟ್ ವಿತರಣೆ

ಮಂಗಳೂರು, ಡಿ.26: ನಗರದ ಕೆನರಾ ಅಭಿವೃದ್ದಿ ಮತ್ತು ಶಾಂತಿ ಸಂಸ್ಥೆ (ಸಿಒಡಿಪಿ) ಮತ್ತು ಕಾರಿತಾಸ್ ಇಂಡಿಯಾ, ಐಸಿವೈಎಮ್ ಸೆಂಟ್ರಲ್ ಕೌನ್ಸಿಲ್, ಲಯನ್ಸ್ ಕ್ಲಬ್ ವೆಲೆನ್ಶಿಯಾ ಮತ್ತು ಇಂಡಿಯಾನ್ ಕ್ಯಾನ್ಸರ್ ಸೊಸೈಟಿಯ ಸಹಯೋಗದಲ್ಲಿ 50 ಬಡ ಕ್ಯಾನ್ಸರ್ ಪೀಡಿತರಿಗೆ ಪೌಷ್ಟಿಕ ಆಹಾರದ ಕಿಟ್‌ನ್ನು ಸಿಒಡಿಪಿ ಮದರ್ ಥೆರೇಸಾ ಹಾಲ್‌ನಲ್ಲಿ ವಿತರಿಸಲಾಯಿತು.
ಸಿಒಡಿಪಿ ಸಂಸ್ಥೆಯ ನಿರ್ದೇಶಕ ಫಾ.ವಿನ್ಸೆಂಟ್ ಡಿಸೋಜ ಸ್ವಾಗತಿಸಿದರು. ಅತಿಥಿಯಾಗಿ ವಂ.ಫಾ. ಜೇಮ್ಸ್ ಡಿಸೋಜ ಭಾಗವಹಿಸಿದ್ದರು. ಐಸಿವೈಎಂ ನಿರ್ದೇಶಕ ಫಾ.ಆಶ್ವಿನ್ ಸಂದೇಶ ನೀಡಿದರು. ಇಂಡಿಯಾನಾ ಆಸ್ಪತ್ರೆ ಮತ್ತು ಹದ್ರೋಗ ಸಂಸ್ಥೆಯ ಡಯೆಟಿಯನ್ ಸಾಕ್ಷಾ ಬಂಗೇರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಸ್ಪರ್ಶ ಯೋಜನೆಯ ಸಂಯೋಜಕಿ ಶಿಲ್ಪಾ ಡಿಸೋಜ ಹಾಗೂ ಸಿಒಡಿಪಿ ಕಾರ್ಯಕ್ರಮ ವ್ಯವಸ್ಥಾಪಕಿ ಲೆನೆಟ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ವೆಲೆನ್ಸಿಯಾ ಅಧ್ಯಕ್ಷ ಲೆಸ್ಲಿ ಡಿ ಸೋಜ ವಂದಿಸಿದರು.
Next Story





