‘ಎಚ್‌ಎಫ್‌ಎಫ್ ಮಂಗಳೂರು’ ವತಿಯಿಂದ ಸ್ನೇಹ ದೀಪ್ ಆಶ್ರಮಕ್ಕೆ ನೆರವು

ಮಂಗಳೂರು, ಡಿ.26: ಹ್ಯುಮ್ಯಾನಿಟಿ ಫಸ್ಟ್ ಫೌಂಡೇಶನ್ (ಹೆಚ್‌ಎಫ್‌ಎಫ್ ಮಂಗಳೂರು)ನ ಸದಸ್ಯರು ನಗರದ ಬೆಜೈ ಕಾಪಿಕಾಡ್ ನಲ್ಲಿರುವ ಸ್ನೇಹ ದೀಪ್ ಆಶ್ರಮಕ್ಕೆ ಭೇಟಿ ನೀಡಿ 27 ನಿರಾಶ್ರಿತ ಮಕ್ಕಳಿಗೆ ನೆರವು ನೀಡಿದರು.
ತಂಡದ ಸದಸ್ಯರು ಸಂಗ್ರಹಿಸಿದ ಬೆಡ್ ಶೀಟ್‌ಗಳು, ಸ್ನಾನದ ಟವೆಲ್‌ಗಳು, ಟೂತ್‌ಪೇಸ್ಟ್, ಸ್ನಾನ ಮತ್ತು ತೊಳೆಯುವ ಸಾಬೂನು, ಸೋಪ್ ಕೇಸ್, ಔಷಧಿ, ಹಳೆ ಬಟ್ಟೆ ಮತ್ತು ಸರಕು ಗಳಂತಹ ಅನೇಕ ಅಗತ್ಯ ವಸ್ತುಗಳನ್ನು ಆಶ್ರಮಕ್ಕೆ ಕೊಡುಗೆಯಾಗಿ ನೀಡಿದರು. ಉಪಾಧ್ಯಕ್ಷ ಪ್ರೇಮ್ ಡಿಸೋಜ, ಲವಿನಾ ಫೆನಾರ್ಂಡಿಸ್, ಡೋರಿನಾ ಮಿಸ್ಕಿತ್ ಉಪಸ್ಥಿತರಿದ್ದರು. ಆಶ್ರಮದ ನಿರ್ದೇಶಕಿ ತಬಸ್ಸುಮ್ ಸ್ವಾಗತಿಸಿದರು. ಹೆಚ್‌ಎಫ್‌ಎಫ್ ಸದಸ್ಯೆ ಲೋಲಿನಾ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ರಾಜೇಶ್ ಮಿಸ್ಕಿತ್ ವಂದಿಸಿದರು.
Next Story





