ಅಂಬಾಗಿಲು ಆದರ್ಶ್ ಫ್ರೆಂಡ್ಸ್ ತಂಡಕ್ಕೆ ಅಟಲ್ ವಾಲಿಬಾಲ್ ಟ್ರೋಫಿ

ಉಡುಪಿ, ಡಿ.26: ಉಡುಪಿ ನಗರ ಬಿಜೆಪಿ ಮತ್ತು ಯುವ ಮೋರ್ಚಾ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಪ್ರಯುಕ್ತ ನಿಟ್ಟೂರು ಸಿಲಾಸ್ ಸ್ಕೂಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಕೂಟದ ಅಟಲ್ ಟ್ರೋಫಿಯನ್ನು ಉಡುಪಿ ಅಂಬಾಗಿಲು ಆದರ್ಶ್ ಫ್ರೆಂಡ್ಸ್ ತಂಡವು ಗೆದ್ದುಕೊಂಡಿದೆ.
ವಿಜೇತ ತಂಡವು ಟ್ರೋಫಿ ಜೊತೆ 50ಸಾವಿರ ರೂ. ನಗದು ಪಡೆದು ಕೊಂಡಿತು. ಉಡುಪಿ ಬಾಲಾಜಿ ವೆಂಚರ್ಸ್ ದ್ವಿತೀಯ ಮತ್ತು ಕುತ್ಪಾಡಿಯ ಸಾಲಿಯಾನ್ ಫ್ರೆಂಡ್ಸ್ ತೃತೀಯ ಸ್ಥಾನ ಗಳಿಸಿತು. ಅಶ್ವಲ್ ರೈ, ಸರ್ಫಾಜ್, ಅನುಷ್, ಹರಿಪ್ರಸಾದ್ ಅತ್ಯುತ್ತಮ ವೈಯುಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.
22ರ ವಯೋಮಿತಿಯೊಳಗಿನ ಪಂದ್ಯಕೂಟದಲ್ಲಿ ಧೂಮಾವತಿ ಫ್ರೆಂಡ್ಸ್ ಮತ್ತು ಗೋಲ್ಡನ್ ಟಚ್ ತಂಡಗಳು ಪ್ರಥಮ ಎರಡು ಸ್ಥಾನಗಳನ್ನು ಪಡೆದು ಕೊಂಡಿದೆ. ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಮಿಲಾಗ್ರಿಸ್ ತಂಡವು ಪ್ರಶಸ್ತಿ ವಿಜೇತ ತಂಡವಾಗಿ ಹೊರಹೊಮ್ಮಿತು. ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್ ಬಹುಮಾನಗಳನ್ನು ವಿತರಿಸಿದರು.
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರ ಯುವ ಮೋರ್ಚಾ ಅಧ್ಯಕ್ಷ ರೋಶನ್ ಶೆಟ್ಟಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ನಗರಸಭಾ ಸದಸ್ಯ ಸಂತೋಷ್ ಜತ್ತನ್, ಪಂದ್ಯಕೂಟದ ಸಂಚಾಲಕ ಸುವರ್ಧನ್ ನಾಯಕ್, ವಾಲಿಬಾಲ್ ಫ್ರೆಂಡ್ಸ್ ಹನುಮಂತ ನಗರ ಅಧ್ಯಕ್ಷ ದಿನೇಶ್ ಕುಂದರ್ ಉಪಸ್ಥಿತರಿದ್ದರು.
ಅಟಲ್ ಟ್ರೋಫಿಗೆ ಚಾಲನೆ: ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಬಲೂನ್ ಪಂದ್ಯಾಟಕ್ಕೆ ಶನಿವಾರ ಚಾಲನೆ ನೀಡಿದರು. ಶಾಸಕ ಕೆ. ರಘುಪತಿ ಭಟ್ ಹಾಗೂ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಸಂಯೋಜನೆಯಲ್ಲಿ ಪಂದ್ಯಾಟವನ್ನು ಆಯೋಜಿ ಲಾಗಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಇಂಧನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ, ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಕಾರ್ಯದರ್ಶಿ ಶ್ವೇತಾ ಪೂಜಾರಿ, ಯಶ್ಪಾಲ್ ಸುವರ್ಣ, ಛಲ ವಾದಿ ನಾರಾಯಣಸ್ವಾಮಿ, ದಿನಕರ್ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉದಯಕುಮಾರ್ ಶೆಟ್ಟಿ, ವಿಖ್ಯಾತ್ ಶೆಟ್ಟಿ, ಮೊದಲಾದ ವರು ಉಪಸ್ಥಿತರಿದ್ದರು.







