ಡಾ. ಸೈಯದ್ ಝಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನ ಭಟ್ಕಳ; ರಾಜ್ಯ ಮಟ್ಟದ ಪ್ರಶಸ್ತಿಗೆ ಕೃತಿ ಆಹ್ವಾನ
ಭಟ್ಕಳ: ಡಾ. ಸೈಯದ್ ಝಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನ ಭಟ್ಕಳ ವತಿಯಿಂದ ಪ್ರತಿವರ್ಷ ನೀಡುವ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿಗೆ ಕಥಾಸಂಕಲನವನ್ನು ಆಹ್ವಾನಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಪಿ. ಆರ್. ನಾಯ್ಕ ತಿಳಿಸಿದ್ದಾರೆ.
2019 ಮತ್ತು 2020ನೇ ಸಾಲಿನಲ್ಲಿ ಮೊದಲ ಮುದ್ರಣವನ್ನು ಕಂಡ ಕಥಾ ಸಂಕಲನವನ್ನು ಸ್ಪರ್ಧೆಗೆ ಆಹ್ವಾನಿಸಲಾಗಿದೆ. ಅದಕ್ಕಾಗಿ ಈ ಸಾಲಿನಲ್ಲಿ ಪ್ರಕಟವಾದ ಕಥಾಸಂಕಲನವೊಂದರ ನಾಲ್ಕು ಪ್ರತಿಗಳನ್ನು ಜ.15, 2022ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
ವಿಳಾಸ: ಶ್ರೀ ಪಿ. ಆರ್. ನಾಯ್ಕ, ಅಧ್ಯಕ್ಷರು, ಸೈಯದ್ ಝಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನ, ಅಂಚೆ: ಹೊಳೆಗದ್ದೆ. ತಾ. ಕುಮಟಾ. ಉತ್ತರ ಕನ್ನಡ ಜಿಲ್ಲೆ. 581327. ಹೆಚ್ಚಿನ ಮಾಹಿತಿಗಾಗಿ 9902426956 ನಂಬರನ್ನು ಸಂಪರ್ಕಿಸಬಹುದು.
Next Story





