ದಾಳಿಯಲ್ಲಿ 200 ಕೋಟಿ ರೂ. ಪತ್ತೆ:ಉತ್ತರಪ್ರದೇಶದ ಸುಗಂಧ ದ್ರವ್ಯ ಉದ್ಯಮಿ ಬಂಧನ

ಲಕ್ನೋ: ಸರಕು ಹಾಗೂ ಸೇವಾ ತೆರಿಗೆ(ಜಿಎಸ್ ಟಿ) ವಂಚಿಸಿದ ಆರೋಪದ ಮೇಲೆ ಕಾನ್ಪುರದ ಉದ್ಯಮಿ ಪಿಯೂಷ್ ಜೈನ್ ಅವರನ್ನು ಬಂಧಿಸಲಾಗಿದೆ.
ಜೈನ್ ಅವರ ಮನೆ ಮೇಲೆ ಇತ್ತೀಚೆಗೆ ದಾಳಿ ನಡೆಸಿ ನೋಟು ಎಣಿಕೆ ಯಂತ್ರದಲ್ಲಿ ಕರೆನ್ಸಿಗಳನ್ನು ಎಣಿಸುತ್ತಿರುವ ದೃಶ್ಯ ವೈರಲ್ ಆಗಿತ್ತು. ಉದ್ಯಮಿಯ ಮನೆಯಲ್ಲಿ ಸುಮಾರು 200 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಓಡೋಚೆಮ್ ಇಂಡಸ್ಟ್ರೀಸ್‌ನ ಪ್ರವರ್ತಕ, ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಅವರ ಕಾರ್ಖಾನೆ ಮತ್ತು ನಿವಾಸದಿಂದ ಅಹಮದಾಬಾದ್ ನ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ರೂ. 10 ಕೋಟಿ ಹೆಚ್ಚಿನ ಹಣವನ್ನು ವಶಪಡಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು ಎಎನ್‌ಐಗೆ ತಿಳಿಸಿವೆ.
ಜೈನ್ ಕಾರ್ಖಾನೆಯಿಂದ ಲೆಕ್ಕಕ್ಕೆ ಸಿಗದ ಶ್ರೀಗಂಧದ ಎಣ್ಣೆ, ಕೋಟಿಗಟ್ಟಲೆ ಮೌಲ್ಯದ ಸುಗಂಧ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story





