Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹೌದು, ಹಿಂದೂ ಧರ್ಮ ಅಪಾಯದಲ್ಲಿದೆ!

ಹೌದು, ಹಿಂದೂ ಧರ್ಮ ಅಪಾಯದಲ್ಲಿದೆ!

ವಾರ್ತಾಭಾರತಿವಾರ್ತಾಭಾರತಿ27 Dec 2021 12:05 AM IST
share
ಹೌದು, ಹಿಂದೂ ಧರ್ಮ ಅಪಾಯದಲ್ಲಿದೆ!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕ್ರಿಸ್ಮಸ್ ಸಂದರ್ಭದಲ್ಲಿ ದೇಶದ ಹಲವೆಡೆ ಚರ್ಚುಗಳ ಮೇಲೆ ದಾಳಿಗಳು ನಡೆದಿವೆ. ಶಾಲೆಗಳಿಗೆ ನುಗ್ಗಿ ‘ಯಾಕೆ ಕ್ರಿಸ್ಮಸ್ ಆಚರಿಸುತ್ತಿದ್ದೀರಿ’ ಎಂದು ದಾಂಧಲೆ ನಡೆಸಿದ್ದಾರೆ. ಮತಾಂತರದ ಆರೋಪದಲ್ಲಿ ಕ್ರಿಶ್ಚಿಯನ್ನರ ಮೇಲೆ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಸಲು, ಅವರಿಗೆ ಕಿರುಕುಳ ನೀಡಲು ಅನುಕೂಲವಾಗಲೆಂದೇ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಹಿಂದೂ ಧರ್ಮದ ಕುರಿತಂತೆ ರಾಜಕಾರಣಿಗಳಿಗೆ ಆತಂಕ ಹೆಚ್ಚಿವೆ. ದಿಲ್ಲಿಯ ವಾಯು ಮಾಲಿನ್ಯಕ್ಕಿಂತಲೂ ಭೀಕರವಾಗಿ ಈ ದ್ವೇಷ ಭಾಷಣದ ಮಾಲಿನ್ಯಗಳು ನಮ್ಮ ನಡುವೆ ಹರಡುತ್ತಿವೆ. ಒಂದೆಡೆ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಲೇ ಇನ್ನೊಂದೆಡೆ ನಾವು ಪಾಕಿಸ್ತಾನಿಗಳನ್ನೂ ಹಿಂದೂಗಳನ್ನಾಗಿ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಸಂಸದನೊಬ್ಬ ಮಠವೊಂದರ ಆವರಣದಲ್ಲಿ ಭಾಷಣ ಮಾಡುತ್ತಾನೆ. ಬಡಪಾಯಿ ಹಾಸ್ಯಗಾರರ ಮೇಲೆ ಸ್ವಯಂ ಕೇಸು ದಾಖಲಿಸುವ ಪೊಲೀಸರು, ಈ ದ್ವೇಷ ಭಾಷಣಗಳನ್ನು ಮನತುಂಬಿ ಆಸ್ವಾದಿಸುತ್ತಿದ್ದಾರೆ. ಪುಂಡು ಪೋಕರಿಗಳ ಗುಂಪಿನ ಜೊತೆಗೆ ಶಾಲೆಯೊಂದಕ್ಕೆ ನುಗ್ಗಿ ದಾಳಿ ನಡೆಸಲು ಯಾವುದೇ ಧೈರ್ಯ ಬೇಕಾಗಿಲ್ಲ. ಹೇಡಿಗಳು, ಪುಕ್ಕಲರಷ್ಟೇ ಇಂತಹ ಕೃತ್ಯಗಳನ್ನು ಮಾಡಬಲ್ಲರು.

ಕ್ರಿಶ್ಚಿಯನ್ನರ ಶೈಕ್ಷಣಿಕ ಸೇವೆ, ಆರೋಗ್ಯ ವಲಯದಲ್ಲಿ ಅವರು ಮಾಡಿರುವ ಸಾಧನೆಗಳಿಗೆ ಪೈಪೋಟಿ ನೀಡಲಾಗದೆ, ಹತಾಶೆಯಿಂದ ಈ ದಾಳಿಗಳನ್ನು ಸಂಘಟಿಸುತ್ತಿದ್ದಾರೆ. ನಿಜಕ್ಕೂ ಅವರ ಸಮಸ್ಯೆ ಮತಾಂತರವಲ್ಲ. ಕ್ರಿಶ್ಚಿಯನ್ನರು ಈ ದೇಶದಲ್ಲಿ ನಡೆಸುತ್ತಿರುವ ಸೇವೆಯೇ ಅವರ ಸಮಸ್ಯೆಯಾಗಿದೆ. ಈ ಸೇವೆ ತಲುಪುತ್ತಿರುವುದು ದೀನ ದಲಿತರನ್ನು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಒಂದಾನೊಂದು ಕಾಲದಲ್ಲಿ ಈ ಸಮುದಾಯವನ್ನು ಶಿಕ್ಷಣ, ಆರೋಗ್ಯ ವಲಯದಿಂದ ದೂರ ಇಡಲಾಗಿತ್ತು. ಮೇಲ್‌ಜಾತಿಗಳು ಇವರನ್ನು ಹತ್ತಿರಕ್ಕೂ ಬಿಟ್ಟುಕೊಡುತ್ತಿರಲಿಲ್ಲ. ನೀರನ್ನು ಮುಟ್ಟುವ ಸ್ವಾತಂತ್ರವೂ ಇವರಿಗಿರಲಿಲ್ಲ. ಮೊಗಲರು ಮತ್ತು ಕ್ರಿಶ್ಚಿಯನ್ನರ ಪ್ರವೇಶ ಈ ದೇಶದ ದೀನ ದಲಿತರಿಗೆ ಹುಟ್ಟಿನಿಂದ ಹಿಂಬಾಲಿಸುತ್ತಿದ್ದ ದಿಗ್ಬಂಧನದಿಂದ ಕಳಚಿಕೊಳ್ಳಲು ದಾರಿಯೊಂದು ತೆರೆಯಿತು. ಇದನ್ನು ಬಳಸಿಕೊಂಡು ಲಕ್ಷಾಂತರ ಜನ ದೀನ ದಲಿತರು ಸಬಲರಾದರು. ಕ್ರಿಶ್ಚಿಯನ್ನರು ಸೇವೆಯಿಂದ ಮತಾಂತರ ಮಾಡುತ್ತಾರೆ ಎಂದಾದರೆ, ಸಂಘಪರಿವಾರದ ಜನರು ಆ ದೀನದಲಿತರ ಸೇವೆ ಮಾಡುವ ಮೂಲಕವೇ ಅವರನ್ನು ತಮ್ಮ ಧರ್ಮದಲ್ಲಿ ಉಳಿಸಿಕೊಳ್ಳಬೇಕಾಗುತ್ತದೆ. ಅವರ ಸೇವೆ ಮಾಡದೇ ಇದ್ದರೂ, ಕನಿಷ್ಠ ಅವರಿಗೆ ತಮ್ಮ ಧರ್ಮದಲ್ಲಿ ಸಮಾನ ಸ್ಥಾನಮಾನ ನೀಡುವ ಮೂಲಕವಾದರೂ ಅವರನ್ನು ತಮ್ಮವರನ್ನಾಗಿಸಬೇಕಾಗುತ್ತದೆ. ಅವರಿಗೆ ಸಮಾನ ಸ್ಥಾನಮಾನ ನೀಡಲು ಇಷ್ಟವಿಲ್ಲದ, ಇದೇ ಸಂದರ್ಭದಲ್ಲಿ ಬೇರೆಯವರ ನೆರವನ್ನು ಪಡೆದು ಸಬಲರಾಗುವುದನ್ನೂ ಸಹಿಸದ ಜನರು ಇಂದು ನೇರವಾಗಿ ಸೇವೆಯ ಮೇಲೆಯೇ ದಾಳಿ ಮಾಡುತ್ತಿದ್ದಾರೆ. ಬಡವರಿಗೆ ಶಿಕ್ಷಣ, ಆರೋಗ್ಯ ಸೇವೆ ನೀಡುವುದು ಅಪರಾಧ ಎಂದು ಭಾವಿಸುವ ಧರ್ಮವೊಂದಿದ್ದರೆ ಆ ಧರ್ಮವನ್ನು ಮನುಷ್ಯರಾದವರು ಒಪ್ಪುವುದಾದರೂ ಹೇಗೆ?

ಇಂದು ದೇಶದ ಆರ್ಥಿಕತೆ ನೆಲಕಚ್ಚಿದೆ. ಜನರ ಮೂಲಭೂತ ಅಗತ್ಯಗಳಿಗೆ ಒದಗಿಸುವಷ್ಟು ಸಂಪತ್ತು ಸರಕಾರದ ಬಳಿಯಿಲ್ಲ. ವಿಪರ್ಯಾಸವೆಂದರೆ ಇರುವ ಸಂಪತ್ತನ್ನು ದೇವಸ್ಥಾನ, ಪ್ರತಿಮೆ, ಗೋಶಾಲೆಗಳಿಗೆ ಸುರಿಯುತ್ತಿವೆ. ಇವುಗಳಿಂದ ಜನರಿಗೆ ಯಾವ ಪ್ರಯೋಜನವೂ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಸಂಘಟನೆಗಳು, ಪೂಜೆ, ಉತ್ಸವ ಎಂದು ಹಣ ದುಂದುವೆಚ್ಚ ಮಾಡುವ ಬದಲು ಅವುಗಳನ್ನು ಬಡವರಿಗೆ ನೀಡುವ ಕೆಲಸವನ್ನು ಮಾಡಬೇಕು. ಸರ್ವಜಾತಿ ಧರ್ಮಗಳಿಗೆ ಸೇರಿದ ಜನರಿಗೆ ಈ ನೆರವು ನೀಡುವಂತೆ ಸರಕಾರವೇ ಪ್ರೋತ್ಸಾಹಿಸಬೇಕು. ಆದರೆ, ಇಂದು ಸರಕಾರವೇ ಇಂತಹ ನೆರವುಗಳನ್ನು ನೀಡದಂತೆ ಧಾರ್ಮಿಕ ಸಂಘಟನೆಗಳಿಗೆ ಕಿರುಕುಳವನ್ನು ನೀಡುತ್ತಿದೆ. ಗೋವಿನ ಹೆಸರಿನಲ್ಲಿ ರೈತರನ್ನು ಬಲಿಪಶುಗಳನ್ನಾಗಿ ಮಾಡಿತು. ಅನುಪಯುಕ್ತ ಗೋವುಗಳಿಗಾಗಿ ಈಗ ಸರಕಾರವೇ ಲಕ್ಷಾಂತರ ರೂಪಾಯಿ ಸುರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಆರೋಗ್ಯ ಕ್ಷೇತ್ರಕ್ಕೆ, ಶಿಕ್ಷಣ ಕ್ಷೇತ್ರಕ್ಕೆ ವೆಚ್ಚ ಮಾಡಲು ಸರಕಾರದ ಬಳಿ ಹಣವಿಲ್ಲ. ಈ ಸಂದರ್ಭದಲ್ಲಿ ಯಾವುದೇ ಧರ್ಮ ಈ ದೇಶದ ಬಡವರಿಗೆ ನೆರವಾಗುತ್ತದೆ ಎಂದಾದರೆ ಅದು ಶ್ಲಾಘನೀಯವಾಗಿದೆ. ಎಲ್ಲ ಧರ್ಮಗಳು ಇಂತಹ ಸೇವೆಗಳಲ್ಲಿ ಪೈಪೋಟಿ ನಡೆಸಬೇಕು. ಬ್ರಿಟಿಷರ ಕಾಲದಿಂದ ಸೇವೆಗಳನ್ನು ಮಾಡುತ್ತಾ ಬಂದಿರುವ ಚರ್ಚ್‌ಗಳು ಆಮಿಷವೊಡ್ಡಿ ಮತಾಂತರ ಮಾಡಿದ್ದಿದರೆ, ಇಂದು ಈ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಬೇಕಾಗುತ್ತಿತ್ತು. ಅಂತಹ ಸನ್ನಿವೇಶ ಬ್ರಿಟಿಷರಿರುವಾಗಲೇ ನಿರ್ಮಾಣವಾಗಲಿಲ್ಲ. ಈಗ ಬಿಜೆಪಿ ಅಧಿಕಾರದಲ್ಲಿರುವಾಗ ಹಿಂದೂ ಧರ್ಮ ಏಕಾಏಕಿ ಅಪಾಯಕ್ಕೆ ಸಿಲುಕಿ ಕೊಳ್ಳುವುದು ಹೇಗೆ?

ಇಷ್ಟಾದರೂ, ಇಂದು ಹಿಂದೂ ಧರ್ಮ ಅಪಾಯದಲ್ಲಿದೆ ಎನ್ನುವುದು ನಿಜ. ಸ್ವಾಮೀ ವಿವೇಕಾನಂದ, ನಾರಾಯಣ ಗುರು, ಮಹಾತ್ಮಾ ಗಾಂಧೀಜಿಯಂತಹ ಮಹಾತ್ಮರು ಕಟ್ಟಿ ಬೆಳೆಸಿದ ಹಿಂದೂ ಧರ್ಮದ ನೇತೃತ್ವವನ್ನು ಇಂದು ಪುಂಡು ಪೋಕರಿಗಳು, ಗೂಂಡಾಗಳು, ಶಂಕಿತ ಉಗ್ರರು, ರಾಜಕಾರಣಿಗಳು ಕಸಿದುಕೊಂಡಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಕರೆ ನೀಡುವಾತ ಹಿಂದೂ ಧರ್ಮದ ಯೋಗಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಕ್ರಿಮಿನಲ್ ಆರೋಪಗಳಿರುವ ಗೂಂಡಾಗಳು ಹಿಂದೂ ಸಂಸ್ಕೃತಿಯ ರಕ್ಷಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಹಿಂದೂ ಧರ್ಮದ ಹೆಸರನ್ನು ಬಳಸಿಕೊಂಡು ಸರ್ವ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸಿ ಕಾನೂನಿಂದ ರಕ್ಷಣೆ ಪಡೆಯುತ್ತಿದ್ದಾರೆ. ಇವರಿಂದ ನಿಜಕ್ಕೂ ಹಿಂದೂ ಧರ್ಮ ಅಪಾಯವನ್ನು ಎದುರಿಸುತ್ತಿದೆ. ಇವರಿಂದ ಹಿಂದೂ ಧರ್ಮವನ್ನು ರಕ್ಷಿಸುವ ಬಗೆ ಹೇಗೆ ಎನ್ನುವುದನ್ನು ನಿಜವಾದ ಅಧ್ಯಾತ್ಮವಾದಿಗಳು ಚಿಂತಿಸಬೇಕಾಗಿದೆ.

ಹಾಗೆಯೇ ಈ ದೇಶದಲ್ಲಿ ಬ್ಯಾಂಕುಗಳು ಅಪಾಯದಲ್ಲಿವೆ. ಸರಕಾರಿ ಸಂಸ್ಥೆಗಳು ಅಪಾಯದಲ್ಲಿವೆ. ದೇಶದ ಗಡಿಗಳು ಅಪಾಯದಲ್ಲಿವೆ. ಶಿಕ್ಷಣ ವ್ಯವಸ್ಥೆ ಅಪಾಯದಲ್ಲಿವೆ. ಅರ್ಥವ್ಯವಸ್ಥೆ ಅಪಾಯದಲ್ಲಿದೆ. ಇವುಗಳನ್ನು ಅಪಾಯದಿಂದ ರಕ್ಷಿಸುವ ಬಗೆ ಹೇಗೆ ಎನ್ನುವುದನ್ನು ರಾಜಕಾರಣಿಗಳು ಚರ್ಚಿಸಬೇಕು. ಇಲ್ಲದೇ ಇದ್ದರೆ, ಭವಿಷ್ಯದಲ್ಲಿ ಭಾರತದ ಸ್ಥಿತಿ ಚಿಂತಾಜನಕವಾಗಲಿದೆ. ಮೊದಲು ದೇಶವನ್ನು ಉಳಿಸಿಕೊಳ್ಳೋಣ. ಬಳಿಕ ಧರ್ಮವನ್ನು ಉಳಿಕೊಳ್ಳುವ ಕುರಿತಂತೆ ಚರ್ಚಿಸೋಣ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X