ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕ

ಬೆಂಗಳೂರು, ಡಿ. 26: ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಉಡುಪಿಯ ನಯನಾ ಗಣೇಶ್ ಅವರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
ರಾಜ್ಯ ಮುಖ್ಯ ವಕ್ತಾರ-ಮೈಸೂರಿನ ಎಂ.ಜಿ.ಗಣೇಶ್, ಅನಿವಾಸಿ ಭಾರತೀಯ ವಿಭಾಗದ ಸಂಚಾಲಕ-ಗಣೇಶ್ ಕಾರ್ಣಿಕ್ ಮಂಗಳೂರು, ಪ್ರಕೋಷ್ಟಗಳ ಸಂಯೋಜಕ-ಜಯತೀರ್ಥ ಕಟ್ಟಿ ಹುಬ್ಬಳ್ಳಿ, ಕಾನೂನು ಪ್ರಕೋಷ್ಟ ಸಂಚಾಲಕ-ಎಚ್.ಯೋಗೇಂದ್ರ, ಸಹ ಸಂಚಾಲಕ- ವಿನೋದ್ ಪಾಟೀಲ್, ಮೀನುಗಾರರ ಪ್ರಕೋಷ್ಟ ಸಂಚಾಲಕ-ಗೋವಿಂದ ಬಾಂಡೇಕರ ಅಂಕೋಲಾ, ಸಹ ಸಂಚಾಲಕ-ನಾಗಪ್ಪ ಅಂಬಿ ಮುಧೋಳ ಅವರನ್ನು ನಿಯೋಜಿಸಲಾಗಿದೆ.
ಫಲಾನುಭವಿಗಳ ಪ್ರಕೋಷ್ಟ-ಬಸವರಾಜ ಮತ್ತೀಮೋಡ, ಜಿಲ್ಲಾ ಪ್ರಭಾರಿಗಳಾಗಿ ಜಗದೀಶ್ ಹೀರೆಮನಿ-ಮಂಡ್ಯ, ಅಮರನಾಥ ಪಾಟೀಲ್-ಯಾದಗಿರಿ, ಕೆ.ಶಿವಲಿಂಗಪ್ಪ-ದಾವಣಗೆರೆ, ಸಿ.ಆರ್.ಪ್ರೇಮಕುಮಾರ್-ಚಿತ್ರದುರ್ಗ, ಕೆ.ವಿ.ಶಿವಪ್ಪ-ಬೆಂಗಳೂರು ಉತ್ತರ, ಮುರಹರಗೌಡ ಅವರನ್ನು ಬಳ್ಳಾರಿ ಜಿಲ್ಲಾಧ್ಯಕ್ಷರನ್ನಾಗಿ ಹಾಗೂ ಚನ್ನಬಸವನಗೌಡ ಅವರನ್ನು ವಿಜಯನಗರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಕ್ಷದ ವಿವಿಧ ಜವಾಬ್ದಾರಿಗಳಿಗೆ ನೇಮಕಗೊಂಡವರ ಪಟ್ಟಿ. pic.twitter.com/cWh1QEjNaT
— BJP Karnataka (@BJP4Karnataka) December 26, 2021







