Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ27 Dec 2021 12:05 AM IST
share
ಓ ಮೆಣಸೇ...

 ಸರ್ದಾರ್ ವಲ್ಲಭಬಾಯಿ ಪಟೇಲ್ ಇನ್ನಷ್ಟು ವರ್ಷ ಬದುಕಿದ್ದರೆ ಗೋವಾಕ್ಕೆ ಇನ್ನೂ ಬೇಗ ಪೋರ್ಚುಗೀಸರಿಂದ ವಿಮೋಚನೆ ಸಿಗುತ್ತಿತ್ತು
- ನರೇಂದ್ರ ಮೋದಿ, ಪ್ರಧಾನಿ ಈಗ ಬದುಕಿದ್ದಿದ್ದರೆ ನಿಮ್ಮಿಂದ ದೇಶವನ್ನು ವಿಮೋಚನೆ ಗೊಳಿಸುತ್ತಿದ್ದರು.

ಶಿವಾಜಿ ಜನ್ಮ ತಾಳದೆ ಇದ್ದಿದ್ದರೆ ಹಿಂದೂ ಧರ್ಮ ಉಳಿಯುತ್ತಿರಲಿಲ್ಲ

- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕಶಿವಾಜಿ ಮತ್ತು ಪೇಶ್ವೆಗಳಿಂದ ಕರ್ನಾಟಕವನ್ನು ಉಳಿಸಿದವರ ಬಗ್ಗೆಯೂ ಮಾತನಾಡಿ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರಕಾರ ಆರೆಸ್ಸೆಸ್ ಕೈಗೊಂಬೆಯಲ್ಲ- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಹಾಗಾದರೆ ಕಾಲ್ ಗೊಂಬೆ ಇರಬಹುದು. ಸೂತ್ರವನ್ನು ಕೈಯ ಬದಲಿಗೆ ಕಾಲ ಬೆರಳಲ್ಲಿ ಆಡಿಸುತ್ತಿರಬೇಕು.

ರಾಜ್ಯದಲ್ಲಿರುವ ಮಹಾತ್ಮರ ಎಲ್ಲಾ ಪ್ರತಿಮೆಗಳಿಗೂ ರಕ್ಷಣೆ ಒದಗಿಸಬೇಕು - ಸಾ.ರಾ.ಮಹೇಶ್, ಶಾಸಕ

ಅವರ ಸಂದೇಶಗಳಿಗೂ ಈಗ ರಕ್ಷಣೆಯ ಅಗತ್ಯ ಇದೆ.

ನಾನು ಆರೆಸ್ಸೆಸ್‌ನ ಸ್ವಯಂ ಸೇವಕನೇ ಹೊರತು ಕೊತ್ವಾಲ್ ರಾಮಚಂದ್ರನ ಚೇಲಾ ಅಲ್ಲ

- ಸಿ.ಟಿ.ರವಿ, ಶಾಸಕ ಕೊತ್ವಾಲ್ ರಾಮಚಂದ್ರರ ಹಿನ್ನೆಲೆ ಇರುವವರೆಲ್ಲ ಈಗ ಆರೆಸ್ಸೆಸ್ ಸ್ವಯಂ ಸೇವಕರೆಂದು ಓಡಾಡುತ್ತಿದ್ದಾರೆ.

ಸಿಎಂ ಬೊಮ್ಮಾಯಿಯ ಅಧಿಕಾರ ಶಾಶ್ವತವಲ್ಲ ಎಂಬ ಹೇಳಿಕೆ ಜಾಗ ಖಾಲಿ ಮಾಡುವ ಸೂಚನೆ- ಸಿ.ಎಂ.ಇಬ್ರಾಹೀಂ, ವಿ.ಪ. ಸದಸ್ಯ

ನೀವು ಬಿಜೆಪಿಯಲ್ಲಿ ಖಾಲಿ ಜಾಗ ಎಲ್ಲಿದೆ ಎಂದು ಹುಡುಕುತ್ತಿರುವುದು ಸುದ್ದಿ.

ಕೇಂದ್ರದ ಹೆಚ್ಚಿನ ಸಂಖ್ಯೆಯ ಸಚಿವರು ಉ.ಪ್ರ.ಕ್ಕೆ ಬರುತ್ತಿರುವುದೇ ಬಿಜೆಪಿ ಸೋಲಲಿದೆ ಎಂಬುದರ ಸೂಚನೆ - ಅಖಿಲೇಶ್ ಯಾದವ್, ಎಸ್ಪಿ ಮುಖ್ಯಸ್ಥ

ಹವಾಮಾನ ವರದಿಯನ್ನು ನಂಬಿ ಚುನಾವಣೆ ಎದುರಿಸದಿರಿ.

18 ವರ್ಷದ ಯುವತಿ ಬಿಜೆಪಿಗೆ ಮತ ಚಲಾಯಿಸಲು ಸಾಧ್ಯವಾಗುವುದಿದ್ದರೆ ತನ್ನ ಬಾಳ ಸಂಗಾತಿಯನ್ನೇಕೆ ಆರಿಸಲು ಸಾಧ್ಯವಿಲ್ಲ - ಅಸದುದ್ದೀನ್ ಉವೈಸಿ, ಎಐಎಂಐಎಂ ಅಧ್ಯಕ್ಷ

ನೀವು ಬಿಜೆಪಿಯನ್ನು ನಿಮ್ಮ ಬಾಳ ಸಂಗಾತಿಯಾಗಿ ಆಯ್ಕೆ ಮಾಡಲು ಸಮಸ್ಯೆ ಆಗಿದೆಯೇ?

ದೇಶದಲ್ಲಿ ಸಹಕಾರ ನಿರ್ವಹಣೆ ಕೋರ್ಸ್‌ಗಳ ಅಧ್ಯಯನಕ್ಕಾಗಿ ಶೀಘ್ರವೇ ರಾಷ್ಟ್ರೀಯಮಟ್ಟದ ವಿವಿ ಸ್ಥಾಪಿಸಲಾಗುವುದು - ಅಮಿತ್ ಶಾ, ಕೇಂದ್ರ ಸಚಿವ

ಸಹಕಾರ ಸಂಘಗಳನ್ನು ನಾಶ ಮಾಡುವುದಕ್ಕಾಗಿ ಒಂದು ವಿವಿ ಸ್ಥಾಪನೆಯೇ? ಪ್ರತಿಮೆಗಳು ನಮ್ಮ ಅಸ್ಮಿತೆಯ ಪ್ರತೀಕ- ಮಹೇಶ್ ಜೋಶಿ, ಕಸಾಪ ಅಧ್ಯಕ್ಷ

ಮನುಷ್ಯರು?

ಮತಾಂತರವಾದವರು ಮರಳಿ ಹಿಂದೂ ಧರ್ಮಕ್ಕೆ ಬರುವವರು ಯಾವ ಜಾತಿಗೆ ಸೇರಲು ಇಷ್ಟಪಡುತ್ತಾರೋ ಅದೇ ರೀತಿ ಸ್ವಾಗತಿಸಲಾಗುವುದು
- ಸಿದ್ದಲಿಂಗ ಸ್ವಾಮೀಜಿ, ಶ್ರೀರಾಮ ಸೇನೆ ಮುಖಂಡ

ಈ ಸೌಲಭ್ಯ ದಲಿತರಿಗೂ ಇದೆಯೇ?

ಎಂಇಎಸ್‌ನವರು ಗಂಡಸರೇ ಆದರೆ ಹಗಲಿನಲ್ಲಿ ಬಂದು ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮುಟ್ಟಲಿ- ಈಶ್ವರಪ್ಪ, ಸಚಿವ

ಕಿತ್ತೂರು ಚೆನ್ನಮ್ಮ ಹೆಣ್ಣಲ್ಲವೇ? ಹೆಣ್ಣಾದರೇನಾಯಿತು?

ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು ಏರಿಸಿದ್ದು ಕೆಲವರಿಗೆ ರುಚಿಸುತ್ತಿಲ್ಲ - ನರೇಂದ್ರ ಮೋದಿ, ಪ್ರಧಾನಿ

ವಿವಾಹದ ಬಳಿಕ ಎಷ್ಟು ವರ್ಷದಲ್ಲಿ ಪತ್ನಿಯನ್ನು ತೊರೆಯಬಹುದು ಎನ್ನುವುದನ್ನು ವಿವರಿಸಿ.

ಅಧಿಕಾರ, ಈ ಸ್ಥಾನ ಮಾನ ಯಾವುದೂ ಶಾಶ್ವತವಲ್ಲ- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

  ಸ್ಥಾನದ ಮುಂದೆ ಮಾನವೂ ಶಾಶ್ವತವಲ್ಲ. ಬಿಜೆಪಿ ಹಿಂದುತ್ವ ರಾಜಕಾರಣವನ್ನು ಬಿಡಬೇಕು- ಮೆಟ್ರೋ ಮ್ಯಾನ್ ಶ್ರೀಧರನ್, ಕೇರಳ ಬಿಜೆಪಿ ರಾಜಕಾರಣಿ

ಇದನ್ನು ಹಳಿ ಬದಲಿಸಿದ ಮೆಟ್ರೊ ರೈಲು ಎಂದು ಕರೆಯಬಹುದೇ?

ಅಸ್ಪಶ್ಯತೆ ಹಿಂದೂ ಧರ್ಮದಲ್ಲಿ ಮಾತ್ರವಲ್ಲ ಎಲ್ಲಾ ಧರ್ಮಗಳಲ್ಲೂ ಇವೆ - ಅರವಿಂದ್ ಬೆಲ್ಲದ್, ಶಾಸಕ

ಅವರೆಲ್ಲ, ಹಿಂದೂ ಧರ್ಮದಿಂದ ಸಾಲ ಪಡೆದಿರುವುದಂತೆ.

ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಿಂತ ಮುನ್ನ ‘ಥಳಿಸಿ ಹತ್ಯೆ’ ಎಂಬ ಪದವನ್ನು ಕೇಳಿರಲಿಲ್ಲ- ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಗುಜರಾತ್‌ನಲ್ಲಿ ಬೆಂಕಿ ಹಚ್ಚಿ ಸಾಮೂಹಿಕ ಹತ್ಯೆ ಮಾಡಿರುವ ಮಾಹಿತಿ ನಿಮಗೆ ತಲುಪಿದೆಯೇ?-

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರೂ ಕನಸು ಕಾಣುವುದು ಬೇಡ - ಆರ್.ಅಶೋಕ್, ಸಚಿವ

ಈಗಾಗಲೇ ನೀವು ಕನಸು ಕಂಡು ಆಗಿರಬೇಕು.

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ

- ಹರೀಶ್ ಚೌಧರಿ, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ
    ಒಟ್ಟಿನಲ್ಲಿ ಕುಟುಂಬ ಇದ್ದವರಿಗಷ್ಟೇ ಟಿಕೆಟ್ ಎಂದಾಯಿತು.

ಒಬ್ಬರು ಮುಖ್ಯಮಂತ್ರಿ ಆಗುತ್ತೇನೆ ಎಂದು 3 ಲಕ್ಷ ರೂ.ಯ ಸೂಟು ಹೊಲಿಸಿಕೊಂಡು ಓಡಾಡುತ್ತಿದ್ದಾರೆ ಅವರ ಆಸೆ ಈಡೇರುವುದಿಲ್ಲ
- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಬಹುಶಃ ನೀವು 6 ಲಕ್ಷ ರೂಪಾಯಿಯ ಸೂಟು ಹೊಲಿಸಿ ಇಟ್ಟಿರಬೇಕು.

ಹಿಂದಿನ ಸರಕಾರಗಳ ರೈತ ವಿರೋಧಿ ನೀತಿಗಳು ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದವು

- ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ

ನಿಮ್ಮ ನೀತಿಯಿಂದ ಉದ್ಯಮಿಗಳೂ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು.

ಬೆಳಗಾವಿಯಲ್ಲಿ ಎಂಇಎಸ್ ಮಣಿಸಲು ಎಲ್ಲ ಪಕ್ಷಗಳೂ ಒಟ್ಟಾಗಬೇಕು - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಒಂದು ಕಾಲು ಶಿವಾಜಿಯ ದೋಣಿಯಲ್ಲಿ, ಇನ್ನೊಂದು ಕಾಲು ಸಂಗೊಳ್ಳಿ ರಾಯಣ್ಣನ ದೋಣಿಯಲ್ಲಿ.

ನಾವು ಈಜಬೇಕಾದ ಸಮುದ್ರದಲ್ಲಿಯೇ ಮೊಸಳೆಗಳನ್ನು ಬಿಟ್ಟು ನನ್ನನ್ನು ಮುಗಿಸುವ ಸಂಚು ನಮ್ಮವರಿಂದಲೇ ನಡೆಯುತ್ತದೆ

- ಹರೀಶ್ ರಾವತ್, ಉತ್ತರಾಖಂಡದ ಕಾಂಗ್ರೆಸ್ ಮುಖಂಡ

ಯಾವುದಾದರೂ ಈಜು ಕೊಳದಲ್ಲಿ ಹೋಗಿ ಈಜಬಾರದೇ?

ಮತಾಂತರ ನಿಷೇಧ ಕಾಯ್ದೆಯನ್ನು ತರದೇ ಇದ್ದರೆ ಭಾರತ ಪಾಕಿಸ್ತಾನದಂತೆ ಆಗುತ್ತದೆ - ಈಶ್ವರಪ್ಪ, ಸಚಿವ

  ಭಾರತವನ್ನು ಪಾಕಿಸ್ತಾನದ ಸ್ಥಿತಿಗೆ ತರುವುದೇ ನಿಮ್ಮ ಉದ್ದೇಶವಲ್ಲವೇ?

ಕುಡಿಯಬೇಕಂತ ಯಾರೂ ಕುಡಿಯೋದಿಲ್ಲ, ಕೆಲವು ಸಲ ಜೀವನದಲ್ಲಿ ನೋವು ಬರುತ್ತದೆ. ಅದನ್ನು ಮರೆಯಲು ಒಂದು ಕ್ವಾರ್ಟರ್ ಹಾಕಲೇಬೇಕಾಗುತ್ತದೆ - ಎಚ್.ಡಿ.ರೇವಣ್ಣ, ಮಾಜಿ ಸಚಿವ
  ಜನರ ರಕ್ತ ಕುಡಿಯುವ ರಾಜಕಾರಣಿಗಳ ಬಗ್ಗೆಯೂ ಸ್ಪಷ್ಟೀಕರಣ ನೀಡಿ 

share
ಪಿ.ಎ.ರೈ
ಪಿ.ಎ.ರೈ
Next Story
X