ಗ್ರೀಸ್ನ ಮಾಜಿ ಅಧ್ಯಕ್ಷ ಕಾರೊಲೊಸ್ ನಿಧನ

Photo Courtesy : Wikipedia
ಅಥೆನ್ಸ್, ಡಿ.26: ಗ್ರೀಸ್ ದೇಶದ ಮಾಜಿ ಅಧ್ಯಕ್ಷ ಕಾರೊಲೊಸ್ ಪಪೌಲಿಯಾಸ್ ರವಿವಾರ ನಿಧನಾದರು ಎಂದು ಸರಕಾರ ಘೋಷಿಸಿದೆ.
92 ವರ್ಷದ ಪಪೌಲಿಯಾಸ್ 2005ರಿಂದ 2015ರ ನಡುವೆ 2 ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಎರಡನೇ ವಿಶ್ವಯುದ್ಧದಲ್ಲಿ ನಾಝಿಗಳು ಗ್ರೀಸ್ನ ಮೇಲೆ ದಾಳಿ ನಡೆಸಿದಾಗ ಹಾಗೂ 1967-74ರ ಅವಧಿಯಲ್ಲಿ ಸೇನೆಯು ದೇಶದ ಆಡಳಿತವನ್ನು ವಶಪಡಿಸಿಕೊಂಡಾಗ ಅದನ್ನು ವಿರೋಧಿಸಿದವರಲ್ಲಿ ಅವರು ಮುಂಚೂಣಿಯಲ್ಲಿದ್ದರು.
1985-89 ಮತ್ತು 1993-96ರಲ್ಲಿ ದೇಶದ ವಿದೇಶ ವ್ಯವಹಾರ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ರಾಷ್ಟ್ರೀಯ ಪ್ರತಿರೋಧ ಮತ್ತು ಸರ್ವಾಧಿಕಾರ ವಿರೋಧಿ ಹೋರಾಟದಲ್ಲಿ ಅವರ ಪಾಲ್ಗೊಳ್ಳುವಿಕೆ ಸ್ವಾತಂತ್ರ್ಯ ಮತ್ತು ನ್ಯಾಯದ ಆದರ್ಶಕ್ಕೆ ಅವರ ನಿರಂತರ ಬದ್ಧತೆಯ ಪ್ರತೀಕವಾಗಿದೆ ಮತ್ತು ಇದನ್ನು ಅವರು ಜೀವನುದ್ದಕ್ಕೂ ಪಾಲಿಸಿಕೊಂಡು ಬಂದಿದ್ದಾರೆ ಎಂದು ಹಾಲಿ ಅಧ್ಯಕ್ಷೆ ಕ್ಯಾಥರೀನಾ ಸಕೆರ್ಲಾಪೊಲೊ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.
Next Story





