ಕಾಪು ಪುರಸಭೆ: 11 ಗಂಟೆ ವೇಳೆ 36.53 ಶೇ. ಮತದಾನ

ಕಾಪು, ಡಿ.27: ಕಾಪು ಪುರಸಭೆಯ 23 ವಾರ್ಡ್ ಗಳಿಗೆ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದ್ದು, 11 ಗಂಟೆ ವೇಳೆ 36.53 ಶೇ. ಮತದಾನವಾಗಿದೆ.
ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕ ನಡೆಯುತ್ತಿರುವ 2ನೇ ಚುನಾವಣೆ ಇದಾಗಿದ್ದು, 23 ವಾರ್ಡ್ ಗಳಿಗೆ 23 ಮತಗಟ್ಟೆಗಳಲ್ಲಿ ಚುನಾವಣೆ ನಡೆಯುತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ತಲಾ 23 ಅಭ್ಯರ್ಥಿಗಳು ಕಣಕ್ಕಿಳಿಸಿದ್ದರೆ, ಎಸ್ಡಿಪಿಐ 9, ಜೆಡಿಎಸ್ 7, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ 2 ಮತ್ತು 3 ಮಂದಿ ಪಕ್ಷೇತರರು ಸ್ಪರ್ಧಾ ಕಣದಲ್ಲಿದ್ದಾರೆ.

Next Story





