ಒಮೈಕ್ರಾನ್ ಬಗ್ಗೆ ಸರಕಾರ ಜನರಲ್ಲಿ ಅನಗತ್ಯ ಭಯ ಮೂಡಿಸಬಾರದು: ಸಿ.ಟಿ.ರವಿ
ನೈಟ್ ಕರ್ಫ್ಯೂ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಸಮಾಧಾನ

ಚಿಕ್ಕಮಗಳೂರು, ಡಿ.27: ಒಮೈಕ್ರಾನ್ ಗೆ ಭಯಪಡಬೇಕಿಲ್ಲವೆಂದು ವಿಜ್ಞಾನಿಗಳೇ ಹೇಳಿದ್ದಾರೆ. ಮೂಗು ಇರುವವರಿಗೆ ನೆಗಡಿ ತಪ್ಪಲ್ಲ, ನೆಗಡಿ ಬಂದರೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಸರಕಾರ ಕೂಡ ಜನರನ್ನು ಅನಗತ್ಯ ಭಯಕ್ಕೆ ಒಳಪಡಿಸಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ನಮ್ಮದೇ ಸರಕಾರದ ಆದೇಶವನ್ನು ಸರಿ-ತಪ್ಪು ಎಂದು ನಾನು ವ್ಯಾಖ್ಯಾನ ಮಾಡೋಕಾಗಲ್ಲ. ಆದರೆ ಅನಗತ್ಯ ಭಯ ಹುಟ್ಟಿಸುವ ಕೆಲಸವನ್ನು ಸರಕಾರ ಸೇರಿದಂತೆ ಯಾರೂ ಮಾಡಬಾರದು ಎಂದರು.
ಸದ್ಯ ಜನಜೀವನ ಸಹಜ ಸ್ಥಿತಿಯಲ್ಲಿದೆ, ಆದರೆ ಜನರು ಎಚ್ಚರವಹಿಸಬೇಕು ಎಂದು ಹೇಳಿದರು.
Next Story





