ಮಿಯ್ಯಾರು: ನಮ್ಮ ನಾಡ ಒಕ್ಕೂಟದಿಂದ ಆಯುಷ್ಮಾನ್ ಕಾರ್ಡ್, ಎನ್.ಎಸ್.ಪಿ. ವಿದ್ಯಾರ್ಥಿ ವೇತನ ಶಿಬಿರ

ಕಾರ್ಕಳ, ಡಿ.27: ನಮ್ಮ ನಾಡ ಒಕ್ಕೂಟದ ಕಾರ್ಕಳ ಘಟಕದ ವತಿಯಿಂದ ಮಿಯ್ಯಾರು ಜಾಮಿಯ ಮಸೀದಿ, ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ, ಉಡುಪಿ ಜಿಲ್ಲಾ ಹಾಗೂ ಕೇಂದ್ರ ಸಮಿತಿಯ ಸಹಯೋಗದಲ್ಲಿ ಆಯುಷ್ಮಾನ್ ಕಾರ್ಡ್ ಹಾಗೂ ಎನ್.ಎಸ್.ಪಿ. ವಿಧ್ಯಾರ್ಥಿ ವೇತನ ಶಿಬಿರವು ಮಿಯ್ಯಾರು ಜಾಮಿಯ ಮಸೀದಿಯ ವಠಾರದಲ್ಲಿ ರವಿವಾರ ನಡೆಯಿತು
ಕಾರ್ಯಕ್ರಮವು ಮಿಯ್ಯಾರು ಜಾಮಿಯ ಮಸೀದಿಯ ಇಮಾಮ್ ಮೌಲಾನ ರಾಝಿಕ್ ಅವರ ಕಿರಾಅತ್ ನೊಂದಿಗೆ ಪ್ರಾರಂಭವಾಯಿತು. ನಮ್ಮ ನಾಡ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷ ಶಾಕಿರ್ ಹುಸೈನ್ ಬೈಲೂರು ಅಧ್ಯಕ್ಷತೆ ವಹಿಸಿದ್ದರು.
ಒಕ್ಕೂಟದ ಕೇಂದ್ರ ಸಮಿತಿಯ ಸದಸ್ಯ ಡಾ.ರಿಝ್ವಾನ್ ಅಹ್ಮದ್ ಹಾಗೂ ಮಾಲಾನ ಅಬ್ದುಲ್ ಹಫೀಝ್ ಅಲ್ ಖಾಸ್ಮಿ ಒಕ್ಕೂಟದ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು
ವೇದಿಕೆಯಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಮುಹಮ್ಮದ್ ಮುಸ್ತಫ ತಾಲೂಕುಗುಡ್ಡೆ, ಅಬ್ದುಸ್ಸಮದ್, ಮುನವ್ವರ್ ಅಜೆಕಾರ್, ಮಿಯ್ಯಾರು ಜಾಮಿಯ ಮಸೀದಿ ಕಾರ್ಯದರ್ಶಿ ಸಾಜಿದ್, ಉಪಾಧ್ಯಕ್ಷ ಇಮ್ತಿಯಾಝ್ ಉಪಸ್ಥಿತರಿದ್ದರು.
ನಮ್ಮ ನಾಡ ಒಕ್ಕೂಟ, ಕಾರ್ಕಳದ ಕಾರ್ಯದರ್ಶಿ ಶೇಖ್ ಶಬ್ಬೀರ್ ಅಹ್ಮದ್ ಮಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು.







