ಬಜಗೋಳಿ: ನಮ್ಮ ನಾಡ ಒಕ್ಕೂಟದಿಂದ ಆಯುಷ್ಮಾನ್ ಕಾರ್ಡ್, ವಿದ್ಯಾರ್ಥಿ ವೇತನ ಶಿಬಿರ

ಕಾರ್ಕಳ, ಡಿ.27: ನಮ್ಮ ನಾಡ ಒಕ್ಕೂಟದ ಕಾರ್ಕಳ ಘಟಕದ ವತಿಯಿಂದ ಬಜಗೋಳಿ ನೂರುಲ್ ಹುದಾ ಜುಮಾ ಮಸೀದಿ, ನಮ್ಮ ನಾಡ ಒಕ್ಕೂಟದ ಹೆಬ್ರಿ ಘಟಕ, ಉಡುಪಿ ಜಿಲ್ಲಾ ಹಾಗೂ ಕೇಂದ್ರ ಸಮಿತಿಯ ಸಹಯೋಗದಲ್ಲಿ ಆಯುಷ್ಮಾನ್ ಕಾರ್ಡ್ ಹಾಗೂ ಎನ್.ಎಸ್.ಪಿ. ವಿದ್ಯಾರ್ಥಿ ವೇತನ ಶಿಬಿರವು ಬಜಗೋಳಿ ನೂರುಲ್ ಹುದಾ ಜುಮಾ ಮಸೀದಿ ಆವರಣದಲ್ಲಿ ರವಿವಾರ ಜರುಗಿತು.
ಕಾರ್ಯಕ್ರಮವು ಮಸೀದಿಯ ಉಸ್ತಾದ್ ಅಬ್ದುಲ್ ರಹಿಮಾನ್ ಅವರ ದುಆದೊಂದಿಗೆ ಪ್ರಾರಂಭವಾಯಿತು. ನಮ್ಮ ನಾಡ ಒಕ್ಕೂಟ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಶಾಕಿರ್ ಹುಸೈನ್ ಬೈಲೂರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬಜಗೋಳಿ ನೂರುಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷ ಝಕರಿಯ, ಮಾಲಾನ ಅಬ್ದುಲ್ ಹಫೀಝ್ ಅಲ್ ಖಾಸ್ಮಿ, ಮುಹಮ್ಮದ್ ಮುಸ್ತಫ ತಾಲೂಕುಗುಡ್ಡೆ, ಮುನವ್ವರ್ ಅಜೆಕಾರ್ ಉಪಸ್ಥಿತರಿದ್ದರು.
ನಮ್ಮ ನಾಡ ಒಕ್ಕೂಟ ಕಾರ್ಕಳ ಘಟಕದ ಕಾರ್ಯದರ್ಶಿ ಶೇಖ್ ಶಬ್ಬೀರ್ ಅಹ್ಮದ್ ಮಿಯಾರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿದರು.
Next Story





