ಯುವ ಜನತಾ ದಳ ಕಾರ್ಯಕರ್ತರ ಸಭೆ; ದ.ಕ. ಜಿಲ್ಲಾಧ್ಯಕ್ಷರಾಗಿ ಮರು ಆಯ್ಕೆಯಾದ ಅಕ್ಷಿತ್ ಸುವರ್ಣಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು : ಯುವ ಜನತಾ ದಳ ಕಾರ್ಯಕರ್ತರ ಸಭೆ ಮತ್ತು ದ.ಕ. ಜಿಲ್ಲಾಧ್ಯಕ್ಷರಾಗಿ ಮರು ಆಯ್ಕೆಯಾದ ಅಕ್ಷಿತ್ ಸುವರ್ಣ ಅವರಿಗೆ ಸನ್ಮಾನ ಕಾರ್ಯಕ್ರಮವು ನಗರದ ಹೋಟೆಲ್ ಉತ್ಸವ್ ನಲ್ಲಿ ನಡೆಯಿತು.
ಯುವ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ರವರು ಮಾತನಾಡಿ ಜಿಲ್ಲೆಯಲ್ಲಿ ಪಕ್ಷ ವನ್ನು ಬಲ ಪಡಿಸಬೇಕಾಗಿದೆ ಮಾತ್ರವಲ್ಲ ಪ್ರತಿಯೊಂದು ಕ್ಷೇತ್ರಕ್ಕೆ ಭೇಟಿ ಕೊಟ್ಟು ಪಕ್ಷವನ್ನು ಮತ್ತು ಯುವ ಕಾರ್ಯಕರ್ತರನ್ನು ಬಲಪಡಿಸಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಬೇಕಾಗಿದೆ ಹಾಗೂ ಜೆಡಿಎಸ್ ರಾಜ್ಯ ನಾಯಕರನ್ನು ಕರೆತಂದು ದೊಡ್ಡ ಮಟ್ಟದ ಸಮಾವೇಶ ಮಾಡಲಿದ್ದೇವೆ ಎಂದು ಹೇಳಿದರು.
ಯುವ ಜೆಡಿಎಸ್ ರಾಜ್ಯ ನಾಯಕರಾದ ಫೈಝಲ್ ರಹ್ಮಾನ್ ಮಾತನಾಡಿ ತಳ ಮಟ್ಟದಲ್ಲಿಯೇ ಪಕ್ಷ ಸಂಘಟಿಸಿ ಹಲವಾರು ಯುವ ಕಾರ್ಯಕರ್ತರನ್ನು ಪಕ್ಷಕ್ಕೆ ತರಲಾಗುವುದು ಮತ್ತು ಸಮಾಜ ಸೇವೆಯೇ ಕಾರ್ಯಕರ್ತರ ಗುರಿಯಾಗಬೇಕು ಎಂದು ಹೇಳಿದರು.
ಉಳ್ಳಾಲ ನಗರಸಭಾ ಸದಸ್ಯರಾದ ಖಲೀಲ್ ಉಳ್ಳಾಲ , ಸತ್ಯನಾರಾಯಣ ಚಿಮ್ಟಿಕಲ್ಲು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂಧರ್ಭದಲ್ಲಿ ಫೈಝಲ್ ಮೊಹಮ್ಮದ್, ಮೊಹಮ್ಮದ್ ಆಸಿಫ್, ಹಿತೈಷ್ ರೈ, ಲಿಖಿತ್ ರಾಜ್, ಸತ್ತಾರ್ ಬಂದರ್, ಶಿವ ಸಾಲ್ಯಾನ್, ಮಾಸ್ ಆಸಿಫ್ ಇಕ್ಬಾಲ್ , ರಾಶ್ ಬ್ಯಾರಿ, ಫ್ರಾನ್ಸಿಸ್ ಫೆರ್ನಾಂಡಿಸ್, ಮೋಹನ್ ಕೊಲ್ಲಮೊಗ್ರ, ಪ್ರದೀಪ್, ಸೌರಬ್, ಕೌಶಿಕ್, ಸುಮಿತ್ ಸುವರ್ಣ ನಝೀರ್ ಖಂದಕ್, ಅಲ್ತಾಫ್ ತುಂಬೆ, ಶಫೀಕ್ ಉಳ್ಳಾಲ, ಬಿಲಾಲ್, ತಮೀಮ್ ಉಪಸ್ಥಿತರಿದ್ದರು.
ಜೆಡಿಎಸ್ ಮುಖಂಡ ರತೀಶ್ ಕರ್ಕೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸವಾಝ್ ಬಂಟ್ವಾಳ ವಂದಿಸಿದರು.






.jpeg)


.jpeg)

