ಮೋದಿಯ ಸಾಧನೆ-ವೈಫಲ್ಯಗಳನ್ನು ವಸ್ತುನಿಷ್ಠವಾಗಿ ವ್ಯಾಖ್ಯಾನಿಸುವ ಕೃತಿ

ಈ ಸಂಕಲನದ ಅನೇಕ ಲೇಖನಗಳಲ್ಲಿ ಹಿಂದೂ ಧರ್ಮದ ತಿರುಳನ್ನು ದಯಾನಂದ ‘ವೃತಾಚರಣೆಗಳನ್ನು ಆಧರಿಸಿದ ಧರ್ಮ’ (ritualism) ಎಂದು ಗುರುತಿಸುತ್ತಾರೆ. ಎಂದರೆ, ಹಿಂದೂಗಳು ಮಾಡುವ ಅನೇಕಾನೇಕ ವ್ರತಗಳು ಸತ್ಯ-ಅಸತ್ಯ, ಶ್ರೇಷ್ಠ-ಕನಿಷ್ಠ, ಪುಣ್ಯ-ಪಾಪ ಇತ್ಯಾದಿಗಳನ್ನು ಕುರಿತ ಅವರ ನಂಬಿಕೆಗಳನ್ನು ಬಲಪಡಿಸುತ್ತವೆ; ಹಾಗೂ ಈ ನಂಬಿಕೆಗಳು ಆಯಾಯ ವ್ರತಗಳನ್ನು ಹೆಚ್ಚು ಪ್ರಭಾವಶಾಲಿಯನ್ನಾಗಿ ಮಾಡುತ್ತವೆ. ಭಾರತೀಯ ಸಮಾಜವನ್ನು ‘ಹಿಂದೂ ವ್ರತಾಚರಣೆಯನ್ನು ಆಧರಿಸಿದ ಸಮಾಜ’ (‘Hindu Ritualism -based nation') ಎಂದು ಲೇಖಕರು ಗುರುತಿಸುತ್ತಾರೆ-ಪ್ರಾಚೀನ ಹಾಗೂ ಸಾಂಪ್ರದಾಯಿಕ ವ್ರತಾಚರಣೆಗಳೇ ರೂಪಿಸಿದ ಧರ್ಮಾತೀತ ಸಮಾಜ.
discovery of indiaಈ ಹಿನ್ನೆಲೆಯಲ್ಲಿ, ಈ ಲೇಖನವು ನೆಹರೂ ಅವರಿಂದ ಪ್ರಾರಂಭಿಸಿ, ಇಂದಿನ ತನಕ ದೇಶವನ್ನಾಳಿದ ಪ್ರಧಾನಿಗಳ ಚಾರಿತ್ರ ಹಾಗೂ ಅವರ ವೈಚಾರಿಕ ನಿಲುವುಗಳನ್ನು ಹಾಗೂ ದೇಶದ ಮೇಲಾದ ಅವುಗಳ ಪರಿಣಾಮವನ್ನು ವಿವರಿಸುತ್ತದೆ. ‘‘ನೆಹರೂ ಒಬ್ಬ ರಾಜಕೀಯ ಪಟುವಾದರೂ, ವಿದ್ವಾಂಸರಾಗಿ ಮಾನವೀಯತೆಯ ಹರಿಕಾರರಾಗಿ ಈ ದೇಶದ ಚರಿತ್ರೆಯನ್ನು ತಮ್ಮ ಕೃತಿಗಳಲ್ಲಿ (ನಿದರ್ಶನ: ) ಮುಂದಿನ ಜನಾಂಗಕ್ಕೆ ತೆರೆದಿಟ್ಟರು... ಅವರಿಗೆ ‘ಸೋಷಲಿಸ್ಟ್’ ರಾಜಕೀಯ ಚಿಂತನೆಯಲ್ಲಿ ಗಾಢ ನಂಬಿಕೆ ಇದ್ದುದರಿಂದ, ದೇಶದ ಸಂಪನ್ಮೂಲದ ಕ್ರೋಡೀಕರಣದಿಂದ ಸರಕಾರದ ಕಾರ್ಯಕ್ರಮವಾಗಿ ಭಾರೀ ಕಾರ್ಖಾನೆಗಳನ್ನು ಸ್ಥಾಪಿಸಿದರು.’’-ಈ ಧಾಟಿಯಲ್ಲಿಯೇ ದಯಾನಂದ ನೆಹರೂ ಶಿಕ್ಷಣಕ್ಕೆ ಕೊಟ್ಟ ಮಹತ್ವ, ನೆರೆಯ ರಾಜ್ಯಗಳೊಂದಿಗೆ ಕ್ಷೇಮದಿಂದಿರಲು ಅವರು ಘೋಷಿಸಿದ ಪಂಚಶೀಲ ನೀತಿ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ದಾಖಲಿಸುತ್ತಾರೆ. ಆನಂತರ ಇಂದಿರಾ ಗಾಂಧಿಯವರ ಆಡಳಿತ ದೃಢತೆ, ಇಡೀ ವ್ಯವಸ್ಥೆಯ ಮೇಲೆ ಅವರಿಗಿದ್ದ ಹಿಡಿತ ಇತ್ಯಾದಿಗಳನ್ನು ವಿವರಿಸಿ, ಲೇಖಕರು ಬಳಿಕ ಹೇಗೆ ಇಂದಿರಾ ಗಾಂಧಿ ಅವರು ಸರ್ವಾಧಿಕಾರಿಯಾದರು ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಎಮರ್ಜೆನ್ಸಿಯನ್ನು ಘೋಷಿಸಿದರು ಮತ್ತು ಆ ಕಾರಣದಿಂದಲೇ ಅಧಿಕಾರ ಕಳೆದುಕೊಂಡರು ಎಂಬುದನ್ನು ವಿವರಿಸುತ್ತಾರೆ. ರಾಜೀವ ಗಾಂಧಿಯವರು ‘‘ಯುವ ಪೀಳಿಗೆಯ ಕನಸಿನ ವ್ಯಕ್ತಿಯಾಗಿದ್ದರು’’ ಮತ್ತು ಅವರು ದೇಶದುದ್ದಕ್ಕೂ ಸ್ಥಾಪಿಸಿದ ಸಂಪರ್ಕ ಜಾಲ, ಮತದಾನದ ವಯಸನ್ನು 18ಕ್ಕೆ ಇಳಿಸಿದುದು, ಇತ್ಯಾದಿ ಸಾಧನೆಗಳನ್ನು ವಿವರಿಸುತ್ತಾರೆ. ವಾಜಪೇಯಿ ಅವರು ಆರೆಸ್ಸೆಸ್ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದರೂ ಸುಸಂಸ್ಕೃತರಾಗಿದ್ದರು: ‘‘ಸಾರ್ವಜನಿಕ ಚುನಾವಣೆಯಲ್ಲಿ ಎಂದೂ ವೈಯಕ್ತಿಕ ಟೀಕೆಗಳಿಂದ’’ ಇತರರನ್ನು ನೋಯಿಸಿದವರಲ್ಲ... ದೇಶಕ್ಕೆ ಅವರ ಕೊಡುಗೆ ರಾಷ್ಟ್ರೀಯ ಹೆದ್ದಾರಿಗಳು’’ ಎಂದು ಲೇಖಕರು ಅವರನ್ನು ಶ್ಲಾಘಿಸುತ್ತಾರೆ. ಆನಂತರ ಲೇಖಕರು ಮೆಚ್ಚುವ ಪ್ರಧಾನಿಯೆಂದರೆ ಮನಮೋಹನ ಸಿಂಗ್. ‘‘ಮೇಧಾವಿತನದ ಅಂತರ್‌ರಾಷ್ಟ್ರೀಯ ಮಟ್ಟದ ಶಾಸ್ತ್ರಜ್ಞರಾದ ಮನಮೋಹನ ಸಿಂಗ್ ಸದ್ದು ಗದ್ದಲವಿಲ್ಲದೆ ಹಿಂದಿನ ಲಿಬರಲ್ ಅರ್ಥನೀತಿಯನ್ನು ಮುಂದುವರಿಸಿದರು. ವಿವಿಧ ಸ್ತರಗಳಲ್ಲಿ ಕೃಷಿ, ಬ್ಯಾಂಕಿಂಗ್, ಪಬ್ಲಿಕ್ ಫಿನಾನ್ಸಿಂಗ್, ಶಿಕ್ಷಣ(ಖಾಸಗಿಕರಣ), ಲೇಬಲ್, ಗೃಹಯೋಜನೆ, ಪಿಂಚಣಿ ಮೊದಲಾದ ಕ್ಷೇತ್ರಗಳಲ್ಲಿ ಗೊತ್ತಿಗೆ ಬರುವಷ್ಟು ಸಾಧನೆ ಮಾಡಿದ್ದರು’’(ಪು.69) ಎಂದು ದಾಖಲಿಸುತ್ತಾರೆ.
ದಯಾನಂದ ದೀರ್ಘವಾಗಿ ಹಾಗೂ ಮುಕ್ತವಾಗಿ ವಿಶ್ಲೇಷಿಸಿರುವುದು ನರೇಂದ್ರ ಮೋದಿಯವರ ಸಾಧನೆಗಳನ್ನು ಹಾಗೂ ವೈಚಾರಿಕ ನಿಲುವುಗಳನ್ನು. ‘‘ಈಗ ದೇಶ ಬದಲಾಗಿದೆ, ಆಗುತ್ತಲಿದೆ. ಮುಖ್ಯವಾಗಿ ರಾಜಕೀಯ ಬಿರುಗಾಳಿ ಸುಮಾರು ಐದು ವರ್ಷಗಳಿಂದ(2014ರಿಂದ ಮುಂದೆ) ಅಲ್ಲೋಲ ಕಲ್ಲೋಲ ಉಂಟು ಮಾಡಿದೆ’’ ಎಂದು ಪ್ರಾರಂಭಿಸಿ ನಂತರ ಮೋದಿಯವ ಸಾಧನೆ ವೈಫಲ್ಯಗಳನ್ನು ವಸ್ತುನಿಷ್ಠವಾಗಿ ವ್ಯಾಖ್ಯಾನಿಸುತ್ತಾರೆ. ‘‘2014ರಲ್ಲಿ ಪ್ರಧಾನಿ ಪೀಠಗ್ರಹಣ ಮಾಡಿದವರು ಗುಜರಾತ್ ಮಣ್ಣಿನವರು, ವಲ್ಲಭಭಾಯ್ ಪಟೇಲ್ ನಾಡಿನವರು, ಅಪ್ಪಟ ‘ಹಿಂದುತ್ವ’ ಗುಂಗಿನ ದಿಟ್ಟ ನಿಲುವಿನ ಅಪರೂಪದ ವ್ಯಕ್ತಿ- ಶ್ರೀ ನರೇಂದ್ರ ಭಾಯ್ ಮೋದಿಯವರು’’ ಎಂದು ಇಂದಿನ ಪ್ರಧಾನಿಯವರ ಪರಿಚಯ ಮಾಡಿಕೊಟ್ಟ ನಂತರ, ಅವರ ಕರ್ತೃತ್ವ ಶಕ್ತಿ, ಸಂಘಟನಾ ಚಾತುರ್ಯ, ‘ಮೋದಿ ಮಾಡೆಲ್’ ಅಭಿವೃದ್ಧಿಯ ಚಿಂತನೆ ಅವರ ವಾಕ್ಝರಿ, ದೇಶ ರಕ್ಷಣೆಗಾಗಿ ಅವರು ಸೇನೆಗೆ ಬಲ ತುಂಬಿದುದು, ಇತ್ಯಾದಿಗಳನ್ನು ತುಂಬಾ ಮೆಚ್ಚುಗೆಯಿಂದ ದಯಾನಂದ ದಾಖಲಿಸುತ್ತಾರೆ. ಆದರೆ, ಆನಂತರ ಮೋದಿ ಅವರ ನಿಲುವುಗಳ ಬಗ್ಗೆ ತಮ್ಮದೇ ಆದ ತೀವ್ರ ಸಂಶಯವನ್ನು ಓದುಗರ ಮುಂದಿಡುತ್ತಾರೆ. ಈ ಸಂಶಯಗಳು ಮತ್ತು ಪ್ರಶ್ನೆಗಳು ಕಳೆದ ಎರಡು ಮೂರು ವರ್ಷಗಳಲ್ಲಿ ಅನೇಕ ಅರ್ಥಶಾಸ್ತ್ರಜ್ಞರು ಸಾರ್ವಜನಿಕ ವೇದಿಕೆಗಳಲ್ಲಿ ಎತ್ತಿರುವ ಸಂಶಯಗಳು ಹಾಗೂ ಪ್ರಶ್ನೆಗಳೇ. ಡಿಮಾನಿಟೈಸೇಷನ್‌ನಿಂದ ಏನು ಸಾಧಿಸಲು ಸಾಧ್ಯವಾಯಿತು? ‘ಸಬ್ ಕೆ ಸಾಥ್, ಸಬ್ ಕಾ ವಿಕಾಸ್’ ಆಗುತ್ತಿದೆಯೇ?
ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿಲ್ಲವೇ? ಕಳೆದ ಎಂಟೊಂಬತ್ತು ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಪ್ರಧಾನಿಯವರು ಏಕೆ ನಿರ್ಲಕ್ಷಿಸುತ್ತಿದ್ದಾರೆ? ಇತ್ಯಾದಿ.
ಆದರೆ, ದಯಾನಂದ ಅವರ ನಿಜವಾದ ಆತಂಕವಿರುವುದು ಮೋದಿ ಅವರ ರಾಜಕೀಯ-ಧಾರ್ಮಿಕ ನಿಲುವುಗಳಲ್ಲಿ, ಈ ಆತಂಕವನ್ನು ಅವರು ಅನೇಕ ಲೇಖನಗಳಲ್ಲಿ ಭಿನ್ನ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. ತಮ್ಮ ‘‘ನಂಬಿಕೆ, ತರ್ಕ....’’ ಲೇಖನದಲ್ಲಿ ತಮ್ಮ ಆತಂಕವನ್ನು ಹೀಗೆ ತೋಡಿಕೊಂಡಿದ್ದಾರೆ:
‘‘ಇಂದು ರೂಪುಗೊಂಡಿರುವ ರಾಜಕೀಯ ವ್ಯವಸ್ಥೆ -ಹಿಂದೂ ನಂಬಿಕೆಗಳ ‘ಹಿಂದುತ್ವ’ಕ್ಕೆ ಇಡೀ ದೇಶವನ್ನು ಒಳಪಡಿಸಿ ‘ritualistic sovereignty’ಯನ್ನು ಭೌಗೋಳಿಕವಾಗಿ ಇಡೀ ರಾಷ್ಟ್ರದ ಜನತೆಯಲ್ಲಿ ಜಾಗೃತಗೊಳಿಸುವ ಕಾರ್ಯಕ್ಕೆ, ನಮ್ಮ ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲ್ಲಿ ಸರಕಾರದ ಗದ್ದುಗೆ ಹಿಡಿದಿರುವ ಪಕ್ಷ ಮಾಡಲು ಪಣ ತೊಟ್ಟಿದೆ... ಇಲ್ಲಿಯ ಇತರ ಧಾರ್ಮಿಕ ಜನ ಸಮುದಾಯಗಳು ತಮ್ಮದೇ ಆದ ಅಪನಂಬಿಕೆಯ ಮಂಜಿನ ತೆರೆಯಲ್ಲಿ ದುಸುಮುಸುಗುಟ್ಟಿ ಬದುಕುತ್ತಿವೆ’’ (ಪು.9).
agitation ಲೇಖನ ಅವರ ಆತಂಕವನ್ನು ಇನ್ನೂ ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ‘‘ಅವರು (ನಮ್ಮ ಈಗಿನ ಪ್ರಧಾನಿಯವರು) ನಿಧಾನವಾಗಿ ದೇಶದ ಆಗು ಹೋಗುಗಳಿಗೆ ಸ್ಪಂದಿಸುವಾಗ, ಭಾಜಪದ ಸಿದ್ಧಾಂತದಂತೆ ‘ಹಿಂದೂ ರಾಷ್ಟ್ರ’ ಕಲ್ಪನೆಯ ನಿಲುವಿಗೆ ಬದ್ಧರಾಗಿರುವುದು ಗೊತ್ತೇ ಆಗಿದೆ. ಈ ಪರಿಕಲ್ಪನೆ ಇತರ ಧರ್ಮೀಯರಲ್ಲಿ ಗೊಂದಲ, ತಲ್ಲಣ ಹಾಗೂ ಭಯದಿಂದ ಹೆಚ್ಚು ಗಟ್ಟಿಯಾಗುತ್ತಿದೆ. ಇಂತಹ ಮನಃಸ್ಥಿತಿ ಅವರಲ್ಲಿ ರೂಪದಲ್ಲಿ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಂಡುಬರುತ್ತಿದೆ.
However, 'hindu ritualism based-nation' (Hindu Rashtra) has been the agenda of the BJP and its reality appears to be a powerful assertion and now, it is politically underway in the leadership of Narendra Modi" (0.29)
ಈ ಬಗೆಯ ‘ಒಂದು ರಾಷ್ಟ್ರ’ ರಾಜಕೀಯ ನೀತಿಯೊಡನೆ, ಇತ್ತೀಚೆಗೆ ಪ್ರಜಾಪ್ರಭುತ್ವದ ಅಡಿಗಲ್ಲಾದ ಚುನಾವಣೆಗಳೂ ತಮ್ಮ ಉದ್ದೇಶಗಳನ್ನು ಮರೆತಂತಿವೆ. ‘‘ಜನತೆಯನ್ನು ಮೊದಲು ಜಾತಿಯ ಆಮಿಷ, ಆಮೇಲೆ ಅದಕ್ಕೆ ಧರ್ಮದ ಟೋಪಿಯಿಟ್ಟು, ಹಣವಿಟ್ಟು, ಹೆಚ್ಚು ಮತ ಪಡೆಯುವ ಸಾಹಸವೀರರು ಚುನಾವಣೆಗೆ ನಿಲ್ಲುತ್ತಾ ಬಂದಿದ್ದಾರೆ. ಹಾಗೆಯೇ ಅನೇಕರು ಗೆಲ್ಲುತ್ತಲೂ ಇದ್ದಾರೆ.’’ (ಪು.79),
‘‘ನಮ್ಮ ನಾಗರಿಕತೆ ಎಡವಿದೆ, ಸಂಸ್ಕೃತಿ ಸಂಪ್ರದಾಯದಲ್ಲಿ ಸೆರೆಯಾಗಿದೆ. ಒಟ್ಟಿನಲ್ಲಿ ಬಾಳು ಹದಗೆಟ್ಟಿದೆ’’ ಎಂಬ ವಿಷಾದಪೂರ್ವಕ ತೀರ್ಮಾನದೊಡನೆ ದಯಾನಂದ ಈ ಲೇಖನವನ್ನು ಮುಗಿಸುತ್ತಾರೆ.







