ಮೀಂಜ : ಕಾಂಗ್ರೆಸ್ ಸ್ಥಾಪನಾ ದಿನಾಚರಣೆ

ಮಂಜೇಶ್ವರ : ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ 137ನೇ ಸ್ಥಾಪನಾ ದಿನದ ಅಂಗವಾಗಿ ಮೀಂಜ ಮಂಡಲ ಮಟ್ಟದ ಧ್ವಜಾರೋಹಣ ಕಾರ್ಯಕ್ರಮ ಗಾಂಧಿನಗರದಲ್ಲಿ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ ಸೋಮಪ್ಪ ಧ್ವಜಾರೋಹಣ ಗೈದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಸಂಕಬೈಲು ಸತೀಶ್ ಅಡಪ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ, ಮಾಜಿ ಸದಸ್ಯ ಹರ್ಷಾದ್ ವರ್ಕಾಡಿ, ಹಿರಿಯ ಕಾಂಗ್ರೆಸ್ ಮುಖಂಡ ಎಸ್ ಅಬ್ದುಲ್ ಖಾದರ್ ಹಾಜಿ, ದಾಮೋದರ ಮಾಸ್ಟರ್, ಕಾಯಿಂಞಿ ಹಾಜಿ ತಲೇಕಳ, ಪಳ್ಳಿಕುಂಞಿ ಹಾಜಿ, ಇಕ್ಬಾಲ್ ಕಳಿಯೂರು, ಮೊಹಮ್ಮದ್ ಮಾವಿನಕಟ್ಟೆ, ಹನೀಫ್ ಎಚ್.ಎ, ಗಂಗಾಧರ ಕೆ., ಅಝೀಝ್, ಇಮ್ತಿಯಾಝ್, ಅಬ್ದುಲ್ ರಹಿಮಾನ್ ಕೋಳಿಯೂರು, ಅಶ್ರಫ್ ಗಾಂಧಿನಗರ,ಹಮೀದ್ ಮುರತ್ತಣೆ, ಫಿಲೋಮಿನಾ ಮೊಂತೇರೊ, ವಿನೋದ್ ಕುಮಾರ್, ಸಿದ್ದೀಕ್, ಸುಲೈಮಾನ್ ಗಾಂಧೀನಗರ ಮುಂತಾದವರು ಉಪಸ್ಥಿತರಿದ್ದರು. ಬಿ. ಕೆ. ಮೊಹಮ್ಮದ್ ಸ್ವಾಗತಿಸಿ, ಸಿದ್ದೀಕ್ ದೈಗೋಳಿ ವಂದಿಸಿದರು.
Next Story





