ಸಿಎಂ ಬದಲಾವಣೆ ಬಗ್ಗೆ ಮಾತನಾಡಿದರೆ ಕ್ರಮದ ಎಚ್ಚರಿಕೆ: ಶಾಸಕ ಯತ್ನಾಳ್

ಹುಬ್ಬಳ್ಳಿ: ರಾಜ್ಯದಲ್ಲಿ ಯಾವುದೇ ರೀತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ, ಯಾರಾದರೂ ಈ ಬಗ್ಗೆ ಮಾತನಾಡಿದರೆ ವರಿಷ್ಠರು ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದರೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಉಸ್ತುವಾರಿ ಅರುಣಸಿಂಗ್ ಅವರು ನೀಡಿದ್ದಾರೆ ಎಂದು ಹೇಳಿದರು.
ಕೆಲವರು ಬೆಳಗಾವಿ ಅಧಿವೇಶನ ವೇಳೆಯಲ್ಲಿ ಸುವರ್ಣಸೌಧದಲ್ಲಿ ಸಿಎಂ ಬದಲಾವಣೆ ಅಂತೆಲ್ಲ ಓಡಾಡಿದ್ದಾರೆ. ಈಗ ಅವರಿಗೆಲ್ಲ ನಿರಾಶೆಯಾಗಿದೆ. ಯಾರಿಗೆ ಅಂತ ನೇರವಾಗಿ ಹೇಳಲು ಆಗುವುದಿಲ್ಲ ಎಂದು ತಿರುಗೇಟು ನೀಡಿದರು.
Next Story





