ದ.ಕ. ಜಿಲ್ಲಾ ಕಾಂಗ್ರೆಸ್‌ನಿಂದ 137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಮಂಗಳೂರು, ಡಿ.28: ಭಾರತ ರಾಷ್ಟ್ರೀಯ ಕಾಂಗ್ರೆಸ್ ಕೇವಲ ಒಂದು ರಾಜಕೀಯ ಪಕ್ಷ ಮಾತ್ರವಲ್ಲ. ಅದೊಂದು ಆಂದೋಲನ. ಅಧಿಕಾರ ಪಡೆಯಲು ಕಾಂಗ್ರೆಸ್ ಹುಟ್ಟಿಕೊಂಡಿದ್ದಲ್ಲ. ಬಡವರ, ದೀನ ದಲಿತರ, ಪರಿಶಿಷ್ಟ ಜಾತಿ-ಪಂಗಡಗಳ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಆಶಾ ಕಿರಣವಾಗಿ ಕಾಂಗ್ರೆಸ್ ಹುಟ್ಟಿಕೊಂಡಿತು ಎಂದು ವಿಧಾನ ಪರಿಷತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಕೆ.ಹರೀಶ್ ಕುಮಾರ್ ಹೇಳಿದರು.
137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಈ ದೇಶದ ಇತಿಹಾಸ ಕಂಡ ಪ್ರಮುಖ ರಾಜಕೀಯ ಪಕ್ಷ. ಜನಪರತೆಯ ಆಧಾರದ ಮೇಲೆ ಎಲ್ಲ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಾ ಸಮಾನ ಅವಕಾಶಗಳನ್ನು ಕಾಂಗ್ರೆಸ್ ನೀಡಿದೆ. ಸ್ವಾತಂತ್ರ್ಯದ ನಂತರದಲ್ಲಿ ಅತ್ಯಂತ ಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಎಐಸಿಸಿ ಕಾರ್ಯದರ್ಶಿಗಳಾದ ಐವನ್ ಡಿಸೋಜ, ಪಿ.ವಿ ಮೋಹನ್, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುರೇಶ್ ಬಳ್ಳಾಲ್, ಸದಾಶಿವ ಉಳ್ಳಾಲ್ ಶಶಿಧರ್ ಹೆಗ್ಡೆ, ವಿಶ್ವಾಸ್ ದಾಸ್, ಸವಾದ್ ಸುಳ್ಯ, ಶುಭೋದಯ ಆಳ್ವ, ಲಾರೆನ್ಸ್ ಡಿಸೋಜ, ಜೆ.ಅಬ್ದುಲ್ ಸಲೀಂ, ಸದಾಶಿವ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ಪದ್ಮನಾಭ ನರಿಂಗಾನ, ಅಪ್ಪಿ, ಶೈಲಜಾ ಅಮರ್ ನಾಥ್, ಮಹಾಬಲ ಮಾರ್ಲ, ಅಬ್ದುರ್ರವೂಫ್, ನವೀನ್ ಡಿಸೋಜ, ಅನಿಲ್ ಕುಮಾರ್, ವಿವೇಕ್ ರಾಜ್ ಪೂಜಾರಿ, ಅಶ್ರಫ್ ಬಜಾಲ್, ಯು.ಎಚ್. ಇಬ್ರಾಹೀಂ ವಿಟ್ಲ, ಮಲ್ಲಿಕಾ ಪಕಳ, ಗಣೇಶ್ ಪೂಜಾರಿ, ಸಂತೋಷ್ ಕುಮಾರ್ ಶೆಟ್ಟಿ, ನಝೀರ್ ಬಜಾಲ್, ನೀಜ್ ಚಂದ್ರಪಾಲ್, ಟಿ.ಕೆ. ಸುಧೀರ್, ಉಮ್ಮರ್ ಫಾರೂಕ್, ಹಯಾತುಲ್ ಖಾಮಿಲ್, ಸಿ.ಎಂ. ಮುಸ್ತಫಾ, ಚೇತನ್ ಬೆಂಗ್ರೆ, ರಮಾನಂದ ಪೂಜಾರಿ, ಪ್ರಕಾಶ್ ಆಲ್ವಿನ್, ಫಯಾಝ್ ಅಮ್ಮೆಮ್ಮಾರ್, ಸೌಹಾನ್ ಎಸ್ಕೆ, ನಮಿತಾ ಡಿ.ರಾವ್, ಸಬಿತಾ ಮಿಸ್ಕಿತ್, ರುಬಿನಾ, ರಝಾಕ್ ಕುಕ್ಕಾಜೆ, ಸಂಶುದ್ದೀನ್ ಬಂದರ್, ಟಿ.ಕೆ ಶೈಲಜಾ, ಇಲ್ಯಾಸ್ ಕಡಬ, ಉದಯ ಆಚಾರಿ, ಯೋಗಿಶ್ ಕುಮಾರ್, ಅಬೂಬಕ್ಕರ್ ಕುದ್ರೋಳಿ, ಕವಿತಾ ವಾಸು, ಮಲ್ಲಿಕಾರ್ಜುನ ಕೋಡಿಕಲ್, ಹಬೀಬ್ ಕಣ್ಣೂರ್, ಚಂದ್ರಕಲಾ ರಾವ್, ಪ್ರವಿತ್ರಾ ಕರ್ಕೇರಾ, ಗೀತಾ ಅತ್ತಾವರ, ಮುಹಮ್ಮದ್ ಬಪ್ಪಳಿಗೆ, ಅಬ್ದುಲ್ ಸಲೀಂ ಮಕ್ಕ, ರಾಘವೇಂದ್ರ ರಾವ್, ದಿನೇಶ್ ರಾವ್, ಶ್ರೀಧರ್ ದಡ್ಡಲಕಾಡು, ಚಂದ್ರಹಾಸ್ ಪೂಜಾರಿ ಕೋಡಿಕಲ್, ಶರತ್ ಹೊಗೈ ಬಜಾರ್ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕಾಧ್ಯಕ್ಷ ಶಾಹುಲ್ ಹಮೀದ್ ಸ್ವಾಗತಿಸಿ, ವಂದಿಸಿದರು.







