ತೃಣಮೂಲ ಕಾಂಗ್ರೆಸ್ ನಾಯಕ ಡೆರಿಕ್ ಒಬ್ರಿಯಾನ್ ಗೆ ಕೋವಿಡ್ ಪಾಸಿಟಿವ್
ಕೋಲ್ಕತಾ, ಡಿ. 28: ತನಗೆ ಕೋವಿಡ್ ಸೋಂಕು ತಗುಲಿದೆ. ಪ್ರಸ್ತುತ ಮನೆಯಲ್ಲಿ ಐಸೋಲೇಷನ್ನಲ್ಲಿ ಇದ್ದೇನೆ ಎಂದು ತೃಣಮೂಲ ಕಾಂಗ್ರೆಸ್ ನ ಹಿರಿಯ ನಾಯಕ ಡೆರಿಕ್ ಒಬ್ರಿಯಾನ್ ಮಂಗಳವಾರ ಹೇಳಿದ್ದಾರೆ. ‘‘ನನಗೆ ಕೋವಿಡ್ ಸೋಂಕಿನ ಲಘು ಲಕ್ಷಣ ಕಂಡು ಬಂದಿದೆ. ಮನೆಯಲ್ಲಿ ಐಸೋಲೇಷನ್ಗೆ ಒಳಗಾಗಿದ್ದೇನೆ. ಒಂದು ವೇಳೆ ಕಳೆದ ಮೂರು ದಿನಗಳಿಂದ ನೀವು ನನ್ನ ಸಂಪರ್ಕದಲ್ಲಿ ಇದ್ದರೆ ಹಾಗೂ ಯಾವುದಾದರೂ ರೋಗ ಲಕ್ಷಣಗಳು ಕಂಡು ಬಂದರೆ ದಯವಿಟ್ಟು ವೈದ್ಯಕೀಯ ಸಲಹೆ ಪಡೆಯಿರಿ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.
Next Story





