ಅರಸು ಅವರ ಬದುಕು- ಸಾಧನೆ ಗುರುತಿಸುವ ಕೆಲಸ ಇನ್ನೂ ಆಗಬೇಕಿದೆ: ಸಿದ್ದರಾಮಯ್ಯ
ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ಕ್ಯಾಲೆಂಡರ್ ಬಿಡುಗಡೆ

ಮೈಸೂರು,ಡಿ.28: ಡಿ. ದೇವರಾಜ ಅರಸು ಅವರು ಕರ್ನಾಟಕ ಕಂಡ ಅತ್ಯಂತ ವಿಶಿಷ್ಟ ರಾಜಕಾರಣಿ ಎಂದು ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣ್ಣಿಸಿದರು.
ಮೈಸೂರಿನ ಡಿ. ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯು ಹೊರತಂದಿರುವ ಕ್ಯಾಲೆಂಡರ್ ಅನ್ನು ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಭೂಸುಧಾರಣೆ ಹಾಗೂ ಹಿಂದುಳಿದ ವರ್ಗಗಳಿಗೆ ಅಧಿಕಾರ ಒದಗಿಸುವ ಮೂಲಕ ದೇಶದ ರಾಜಕಾರಣದಲ್ಲೂ ಪ್ರಮುಖ ಸ್ಥಾನ ಗಳಿಸಿರುವ ಅರಸು ಅವರ ಬದುಕು-ಸಾಧನೆಯನ್ನು ನಿಖರವಾಗಿ ಗುರುತಿಸುವ ಕೆಲಸಗಳು ಇನ್ನೂ ಆಗಬೇಕಾಗಿದೆ ಎಂದರು.
ಎಪ್ಪತ್ತರ ದಶಕದಲ್ಲಿ ಏಳು ವರ್ಷ, ಏಳು ತಿಂಗಳು, ಇಪ್ಪತ್ತಮೂರು ದಿನಗಳಷ್ಟು ಸುದೀರ್ಘ ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು 1972ರ ಚುನಾವಣೆಯಲ್ಲಿ ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾಗಿದ್ದರು. ಇದರಿಂದ ಸಂತೋಷಗೊಂಡಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿದೇಶದಿಂದ ತರಿಸಿ ಸರ್ಕಾರಕ್ಕೆ ಕೊಡುಗೆಯಾಗಿ ಮರ್ಸಿಡಿಸ್-ಬೆನ್ಜ್ ನೀಡಿದ್ದರು. ಅರಸು ಸಿಎಂ ಆಗಿದ್ದ ಅವಧಿಯಲ್ಲಿ ಪ್ರತಿನಿತ್ಯ ಈ ಕಾರನ್ನು ಬಳಸುತ್ತಿದ್ದರು. 10 ವರ್ಷಗಳ ಕಾಲ ಮರ್ಸಿಡಿಸ್-ಬೆನ್ಜ್ ಜೊತೆಗೆ ಅರಸು ಓಡಾಡಿದ್ದಾರೆ. ಬಳಿಕ ಹರಾಜು ಪ್ರಕ್ರಿ0iÉುಯಲ್ಲಿ ಅರಸು ಕಾರನ್ನು ಖರೀದಿಸಿ ಅರಸು ಆಪ್ತ ಜಿ.ಎಂ. ಬಾಬು ಅರಸುರ ನೆನಪಿನ ಕಾಣಿಕೆಯಾಗಿ ಕಾಪಾಡುತ್ತಿದ್ದಾರೆ. ಪ್ರತಿವರ್ಷ ಅರಸು ಜನ್ಮದಿನದಂದು ಅರಸು ಕಾರು ವಿಧಾನಸೌಧಕ್ಕೆ ಎಂಟ್ರಿ ಕೊಡುತ್ತೆ. ನಾನು ಸಿಎಂ ಆಗಿದ್ದಾಗ ಇದೇ ಕಾರಿನಲ್ಲಿ ವಿಧಾನಸೌಧ ಸುತ್ತು ಹಾಕಿದ್ದೇ. ಅರಸುರವರ ಬಗ್ಗೆ ಎಷ್ಟೋ ಮಾತನಾಡಿದರೂ ಸಾಲದು ಎಂದು ಅವರು ಸ್ಮರಿಸಿಕೊಂಡರು.
ವಿಚಾರರವಾದಿ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ದೇಶದಲ್ಲಿ ರಾಜಕೀಯ ನಾಯಕರ ಪೈಕಿ ನೆಹರೂ ಕುಟುಂಬದವರನ್ನು ಹೊರತು ಪಡಿಸಿದರೆ ಇನ್ನೊಬ್ಬ ನಾಯಕ ಅಥವಾ ನಾಯಕಿಯ ಬಗ್ಗೆ ದೇವರಾಜ ಅರಸುರವರ ಬರಹಗಳಷ್ಟು ಬೇರೆಯವರ ಬರಹಗಳು ಬಹುಶಃ ಬಂದಿಲ್ಲ. ಕರ್ನಾಟಕದಲ್ಲಿ ಈ ಮಟ್ಟಕ್ಕೆ ದೇಶ ಮತ್ತು ವಿದೇಶಗಳ ವಿದ್ವಾಂಸರ ಗಮನ ಸೆಳೆದ ಇನ್ನೊಬ್ಬ ರಾಜಕಾರಣಿಯನ್ನು ಕಂಡಿಲ್ಲ ಎಂದರು.
ಅರಸು ಅವರ ಕೊಡುಗೆಗಳ ಬಗ್ಗೆ ಸರಿಯಾದ ದಾಖಲಾತಿಯೇ ನಡೆದಿಲ್ಲ . ಇಷ್ಟೆಲ್ಲಾ ಬಳವಳಿ ಬಿಟ್ಟು ಹೋಗಿರುವ ಅರಸು ಅವರ ಒಂದು ಅಧಿಕೃತ ಜೀವನ ಚರಿತ್ರೆ ಇನ್ನೂ ಪ್ರಕಟವಾಗಿಲ್ಲ, ಈಗಿನ ಕೆಲ ನಾಯಕರು ಅಧಿಕಾರ ವಹಿಸಿ ಕೆಲಸ ಪ್ರಾರಂಭಿಸುವುದಕ್ಕೆ ಮೊದಲೇ ಅವರ ಅಧಿಕೃತ ಜೀವನ ಚರಿತ್ರೆ ಮಾರುಕಟ್ಟೆಯಲ್ಲಿರುತ್ತದೆ. ಅರಸುರವರ ದೂರದೃಷ್ಟಿಯ ಸಾಮಾಜಿಕ ಚಿಂತನೆಗಳು ಮತ್ತು ಅವರ ಆಡಳಿತಾವಧಿಯಲ್ಲಿ ನೀಡಿದ ಕೊಡುಗೆಗಳು ಮತ್ತು ಯೋಜನೆಗಳನ್ನು ಹೇಳುತ್ತಾ ಹೋದರೆ ಅವರ ಬಗ್ಗೆ ಗೌರವ ಮುಮ್ಮಡಿಸುತ್ತೆ ಹೀಗಾಗಿ ಕರ್ನಾಟಕ ಕಂಡ ಒಬ್ಬ ಧೀಮಂತ ನಾಯಕ ಅರಸು ಎಂದರು.
ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್‍ಕುಮಾರ್,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್ ರಾಜ್ಯ ಪ್ರಧಾನ ಸಂಚಾಲಕ ಡೈರಿ ವೆಂಕಟೇಶ್, ಕರ್ನಾಟಕ ಪ್ರದೇಶ ಕುರಬರ ಸಂಘದ ಅಧ್ಯಕ್ಷ ಬಿ. ಸುಬ್ರಹ್ಮಣ್ಯ, ಮೈಸೂರು ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ,ಮುಖಂಡರಾದ ರಾಜೇಶ್, ಪವನ್ ಸಿದ್ದರಾಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.







