Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಕ್ಕಳಿಗೆ ಲಸಿಕೆ, ಬೂಸ್ಟರ್ ಲಸಿಕೆಯ...

ಮಕ್ಕಳಿಗೆ ಲಸಿಕೆ, ಬೂಸ್ಟರ್ ಲಸಿಕೆಯ ಬಗ್ಗೆ ಭಾರತ ಸರಕಾರ ಉತ್ತರಿಸಬೇಕಿರುವ 10 ಪ್ರಶ್ನೆಗಳು

ವಾಸುದೇವನ್ ಮುಕುಂದ್ವಾಸುದೇವನ್ ಮುಕುಂದ್29 Dec 2021 11:09 AM IST
share
ಮಕ್ಕಳಿಗೆ ಲಸಿಕೆ, ಬೂಸ್ಟರ್ ಲಸಿಕೆಯ ಬಗ್ಗೆ ಭಾರತ ಸರಕಾರ ಉತ್ತರಿಸಬೇಕಿರುವ 10 ಪ್ರಶ್ನೆಗಳು

2021ರ ಡಿಸೆಂಬರ್ 25ರಂದು ರಾತ್ರಿ ಸುಮಾರು 10 ಗಂಟೆಗೆ ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಇಲಾಖೆಯು 15ರಿಂದ 18 ವರ್ಷದೊಳಗಿನವರಿಗೆ ಕೋವಿಡ್-19 ಲಸಿಕೆ ಮತ್ತು ಮುಂಚೂಣಿ ಹಾಗೂ ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೆ, ಹಿರಿಯ ನಾಗರಿಕರಿಗೆ(ವೈದ್ಯರ ಪ್ರಮಾಣಪತ್ರ ಇದ್ದರೆ) ಬೂಸ್ಟರ್ ಡೋಸ್ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಿದೆ ಎಂದು ಘೋಷಿಸಿದರು. ಈ ಘೋಷಣೆಗೆ ಇನ್ನಷ್ಟು ಅರ್ಥ ಬರಬೇಕಿದ್ದರೆ ಕೇಂದ್ರ ಆರೋಗ್ಯ ಇಲಾಖೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಈ ಕೆಳಗಿನ 10 ಪ್ರಶ್ನೆಗಳಿಗೆ ಉತ್ತರಿಸಬೇಕಿದೆ:

1. ಡಿಸೆಂಬರ್ 24ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಲಸಿಕೀಕರಣ ಅಭಿಯಾನದ ಮುಖ್ಯಸ್ಥ ವಿನೋದ್ ಕೆ. ಪೌಲ್, ಐಸಿಎಂಆರ್ ಮುಖ್ಯಸ್ಥ ಬಲರಾಂ ಭಾರ್ಗವ ಹಾಗೂ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್, ತಮ್ಮ ನಿರ್ಧಾರಗಳು ವಿಜ್ಞಾನದ ಮಾರ್ಗದರ್ಶನವನ್ನು ಆಧರಿಸಿದೆ ಮತ್ತು ಮಕ್ಕಳ ಲಸಿಕೀಕರಣ ಅಗತ್ಯ ಎಂದು ಪ್ರತಿಪಾದಿಸುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದಿದ್ದರು. ಹಾಗಿದ್ದರೆ ಡಿಸೆಂಬರ್ 24ರ ಸಂಜೆ ಮತ್ತು ಡಿಸೆಂಬರ್ 25ರ ರಾತ್ರಿಯ ನಡುವಿನ ಅವಧಿಯಲ್ಲಿ ವಿಜ್ಞಾನದಲ್ಲಿ ಗಣನೀಯ ಬದಲಾವಣೆ ಆಗಿದೆ ಎಂದು ನಾವು ಭಾವಿಸಬೇಕೇ? ಹೌದಾದರೆ, ನಿಜವಾಗಿಯೂ ಆದ ಬದಲಾವಣೆ ಏನು?

2. ಬೂಸ್ಟರ್ ಡೋಸ್ ಆಗಿ ಮುಂಚೂಣಿ ಕಾರ್ಯಕರ್ತರು, ಆರೋಗ್ಯಕ್ಷೇತ್ರದ ಕಾರ್ಯಕರ್ತರಿಗೆ ಹಾಗೂ ಹಿರಿಯ ನಾಗರಿಕರಿಗೆ ನೀಡುವ ಲಸಿಕೆ ಯಾವುದು? ಒಮೈಕ್ರಾನ್ ರೂಪಾಂತರಿ ವಿರುದ್ಧ ಕೋವ್ಯಾಕ್ಸಿನ್‌ನ ಪರಿಣಾಮಕಾರಿತ್ವ ಅಥವಾ ಪ್ರಯೋಜನದ ಕುರಿತು ಯಾವುದೇ ಅಧ್ಯಯನ ನಡೆದಿಲ್ಲ ಎಂದು ಡಿಸೆಂಬರ್ 24ರಂದು ಪೌಲ್-ಭಾರ್ಗವ -ಭೂಷಣ್ ತ್ರಿಮೂರ್ತಿಗಳು ಹೇಳಿಕೆ ನೀಡಿರುವುದನ್ನು ಪರಿಗಣಿಸಿದರೆ, ಸರಕಾರದ ನಿರ್ಧಾರಕ್ಕೆ ಯಾವ ತಾರ್ಕಿಕತೆ ಇದೆ?

3. ಹದಿಹರೆಯದವರಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕುವ ವಿಷಯದಲ್ಲಿ ಔಷಧ ನಿಯಂತ್ರಣ ಪ್ರಾಧಿಕಾರದ ಅನುಮೋದನೆ ದೊರಕುವವರೆಗೆ ಕಾದು ಭಾರತ ಸರಕಾರ ತನ್ನ ಕಾರ್ಯನೀತಿಯನ್ನು ಬದಲಾಯಿಸಿತೇ? ಯಾಕೆಂದರೆ ಸರಕಾರ ಕಳೆದ ಆಗಸ್ಟ್‌ನಲ್ಲಿ ಹದಿಹರೆಯದವರಿಗೆ ಝೈಡುಸ್ ಕ್ಯಾಡಿಲ್ಲಾದ ಝೈಕೊವಿ-ಡಿ ಲಸಿಕೆಯನ್ನು ಅನುಮೋದಿಸಿದೆ ಮತ್ತು ಮಕ್ಕಳಿಗೆ ಲಸಿಕೆ ನೀಡುವ ಕುರಿತ ಪುರಾವೆಗಳು ಅಂದಿನಿಂದ ಗಣನೀಯವಾಗಿ ಬದಲಾಗಿಲ್ಲ.

4. ಔಷಧ ನಿಯಂತ್ರಕರು ಕೋವ್ಯಾಕ್ಸಿನ್ ಅನ್ನು ಹದಿಹರೆಯದವರಿಗೆ ಅನುಮೋದಿಸಿದ ಬಳಿಕ ಭಾರತ ಸರಕಾರ ತನ್ನ ಕಾರ್ಯನೀತಿಯನ್ನು ಬದಲಾಯಿಸಿದೆಯೇ ಎಂಬುದು ಇನ್ನಷ್ಟು ಆತಂಕಕಾರಿಯಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ- ಔಷಧ ನಿಯಂತ್ರಕರು ಕೊವ್ಯಾಕ್ಸಿನ್‌ಗೆ ಅನುಮೋದನೆ ನೀಡದಿದ್ದರೆ(ಇಂತಹ ನಿರಾಕರಣೆ ಎಷ್ಟು ಅಸಂಭವ ಎಂಬುದು ಬೇರೆ ಮಾತು) ಆಗಲೂ ಮಕ್ಕಳಿಗೆ ಲಸಿಕೆ ಹಾಕುವ ಅಗತ್ಯವಿದೆ ಎಂದು ಸರಕಾರದ ಅಧಿಕಾರಿಗಳು ಹೇಳುತ್ತಿದ್ದರೇ?

5. ಕೊವ್ಯಾಕ್ಸಿನ್ ಉತ್ಪಾದಿಸುವ ಬಯೋಟೆಕ್ ಸಂಸ್ಥೆಯ ಪ್ರಕಾರ, 15-18 ವರ್ಷದವರಿಗೆ ಹಾಗೂ ಹಿರಿಯ ನಾಗರಿಕರಿಗೆ ಒಂದೇ ರೀತಿಯಲ್ಲಿ ಪರಿಣಾಮಬೀರುವಂತೆ ಲಸಿಕೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಹಾಗಾದರೆ ಇದು (ಹದಿಹರೆಯದವರಿಗೆ ಲಸಿಕೀಕರಣ) ಸಂಸ್ಥೆಯ ಉತ್ಪಾದನೆ ಮತ್ತು ಪೂರೈಕೆ ಪ್ರಕ್ರಿಯೆಯಲ್ಲಿ ಯಾವ ರೀತಿ ಬದಲಾವಣೆಗೆ ಕಾರಣವಾಗಬಹುದು? ಈಗ ಇರುವ ಲಸಿಕೆಯ ದಾಸ್ತಾನಿನಿಂದಲೇ 2022ರ ಜನವರಿ 3ರಿಂದ ಹದಿಹರೆಯದವರಿಗೆ ಲಸಿಕೆ ಪೂರೈಸಲಾಗುತ್ತದೆಯೇ?

6. 15-18 ವರ್ಷದವರಿಗೆ ಭಾರತದಲ್ಲಿ ನಡೆಸಿದ 2 ಮತ್ತು 3ನೇ ಹಂತದ ಪರೀಕ್ಷಾ ಪ್ರಯೋಗದ ವರದಿಯನ್ನು ಭಾರತ್ ಬಯೋಟೆಕ್ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಿದೆ ಎಂದು ವರದಿಯಾಗಿದೆ. ಈ ಅಂಕಿಅಂಶ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆಯೇ? ಅಥವಾ ಸಾವಿರಾರು ಹದಿಹರೆಯದವರಿಗೆ ಲಸಿಕೆ ನೀಡಿದ ಬಳಿಕ ಈ ವರದಿ ಪ್ರಕಟವಾಗುವುದನ್ನು ಕಾಯಬೇಕೇ?

7. 12-18 ವರ್ಷದವರಿಗೆ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದಿಸಿದ ಇತರ ಲಸಿಕೆ ಎಂದರೆ ಝೈಡುಸ್ ಕ್ಯಾಡಿಲ್ಲಾದ ಝೈಕೊವಿ-ಡಿ ಲಸಿಕೆ. ಈ ಲಸಿಕೆಯ 2, 3ನೇ ಹಂತದ ಪ್ರಯೋಗದ ವರದಿಯೂ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿಲ್ಲ. ಯಾಕೆ?

8. ಹದಿಹರೆಯದವರಿಗೆ ನೇರವಾಗಿ ಲಸಿಕೆ ಪಡೆಯಬಹುದಾದರೆ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ವೈದ್ಯರ ಪ್ರಮಾಣಪತ್ರದ ಅಗತ್ಯವೇನಿದೆ? ನಿಮಗೆ ವಯಸ್ಸಾದಂತೆ, ವಿಶೇಷವಾಗಿ 60 ವರ್ಷ ದಾಟಿದಾಗ ಸಾರ್ಸ್-ಸಿಒವಿ-2ರ ಪರಿಣಾಮ ಕೆಟ್ಟದಾಗುತ್ತದೆ, ಆದರೆ, ಸೌಮ್ಯ ಅಥವಾ ತೀವ್ರವಾಗಿರಲಿ, ಕಾಯಿಲೆಯ ಹರಡುವಿಕೆ ಅಪ್ರಾಪ್ತ ವಯಸ್ಕರಲ್ಲಿ ಅತೀ ಕನಿಷ್ಠವಾಗಿರುತ್ತದೆ ಎಂದು ವೈಜ್ಞಾನಿಕ ಪುರಾವೆ ಹೇಳಿದೆ. ತೀವ್ರವಾದ ರೋಗವನ್ನು ತಡೆಯುತ್ತದೆ ಎಂಬುದು ಲಸಿಕೆಯ ಪ್ರಾರಂಭಿಕ ಮಾಹಿತಿಯಾಗಿದೆ ಮತ್ತು ಕೊರೋನ ಸಂಬಂಧಿತ ನಿಯಮವನ್ನು ಉತ್ತಮ ರೀತಿಯಲ್ಲಿ ರೂಪಿಸಿ ಜಾರಿಗೊಳಿಸುವ ಮೂಲಕ ಪ್ರಸಾರವನ್ನು ತಡೆಯಬಹುದು ಎಂಬುದನ್ನು ಗಮನಿಸಬೇಕಾಗಿದೆ.

9. ಒಂದು ವೇಳೆ ಹೆತ್ತವರು ಲಸಿಕೀಕರಣಕ್ಕೆ ವಿರೋಧಿಸಿದರೆ ಮತ್ತು ಮಕ್ಕಳು ಒಪ್ಪಿದರೆ ಅಥವಾ ಮಕ್ಕಳು ವಿರೋಧಿಸಿ ಹೆತ್ತವರು ಒಪ್ಪಿದರೆ ಆಗ ಏನಾಗುತ್ತದೆ? ಅಥವಾ ಹೆತ್ತವರಲ್ಲಿ ಒಬ್ಬರು ಒಪ್ಪಿ ಮತ್ತೊಬ್ಬರು ವಿರೋಧಿಸಿದರೆ? ಮಗುವು ಪ್ರಸ್ತಾಪಿಸಿದ ವಿಷಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಬೌದ್ಧಿಕ ಮಟ್ಟವನ್ನು ತಲುಪಿದಾಗ, 16 ವರ್ಷಕ್ಕಿಂತ ಕೆಳಗಿನ ಅಪ್ರಾಪ್ತ ವಯಸ್ಕರು ವೈದ್ಯಕೀಯ ಚಿಕಿತ್ಸೆ ಪಡೆಯಬೇಕೇ ಎಂಬುದನ್ನು ನಿರ್ಧರಿಸುವ ಹಕ್ಕನ್ನು ಪೋಷಕರು ಕಳೆದುಕೊಳ್ಳುತ್ತಾರೆ ಎಂಬ ನಿಯಮವನ್ನು ಬ್ರಿಟನ್ ಅನುಸರಿಸುತ್ತಿದೆ.

10. ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಲಸಿಕೆ ಉತ್ಪಾದಿಸುವ ಸಂಸ್ಥೆಗಳ ಪ್ರತಿನಿಧಿಗಳು ಹೇಳುತ್ತಿರುವುದಕ್ಕೆ ವಿರುದ್ಧವಾದ ಲಸಿಕೆ ಕಾರ್ಯಕ್ರಮ ವಿಸ್ತರಣೆ ಬಗ್ಗೆ ಪ್ರಧಾನಿ ಯಾಕೆ ಘೋಷಿಸಬೇಕು? ಅಲ್ಲದೆ, ಪತ್ರಕರ್ತರು, ಸ್ವತಂತ್ರ ತಜ್ಞರು ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ಸಮರ್ಥರಾಗಿರುವ ಅಧಿಕಾರಿಗಳ ಬದಲು ಪ್ರಧಾನಿಯವರು ಆರೋಗ್ಯಕ್ಷೇತ್ರಕ್ಕೆ ಸಂಬಂಧಿಸಿದ ಘೋಷಣೆ ಯಾಕೆ ಮಾಡಬೇಕು?

(ಇದಕ್ಕೆ ಉತ್ತರ ಏನೆಂದು ನಮಗೆ ತಿಳಿದಿರಬಹುದು, ಆದರೂ ನಾವು ಕೇಳಬೇಕು).

ಕೃಪೆ: thewire.in

share
ವಾಸುದೇವನ್ ಮುಕುಂದ್
ವಾಸುದೇವನ್ ಮುಕುಂದ್
Next Story
X