ಸುಳ್ಳಿನ ಜಾತ್ರೆ ಮಾಡುವ ಬದಲು ಸತ್ಯ ಶೋಧನೆ ಮಾಡಿಕೊಳ್ಳಿ: ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ''ಈಗ ಸುಳ್ಳಿನ ಜಾತ್ರೆ ಮಾಡುವ ಬದಲು ಸತ್ಯ ಶೋಧನೆ ಮಾಡಿಕೊಳ್ಳಿ'' ಎಂದು ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, 'ಸುಳ್ಳು ಕಾಂಗ್ರೆಸ್ ಮನೆ ದೇವರು ಎಂಬುದಕ್ಕೆ ಇಲ್ಲೊಂದು ಸಾಕ್ಷಿಯಿದೆ. ಮೇಕೆದಾಟು ಪಾದಯಾತ್ರೆಗೆ ಹೊರಟಿರುವ ಕಾಂಗ್ರೆಸ್ ನೀರಿನ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಬೆಂಗಳೂರು ನಗರದ ಶೇ.60 ರಷ್ಟು ನೀರಿನ ಪೂರೈಕೆ ಈಗಲೂ ಅಂತರ್ಜಲವನ್ನು ಆಧರಿಸಿದೆಯಂತೆ. ಈಗ ಕಾವೇರಿಯನ್ನು ಹರಿಸುವುದಕ್ಕೆ ಹೊರಟಿದ್ದಾರೆ. ಎಂಥಹ ಸುಳ್ಳು!' ಎಂದು ಬಿಜೆಪಿ ವ್ಯಂಗ್ಯವಾಡಿದೆ.
'ರಾಜ್ಯದಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇದಾದ ಬಳಿಕ ಜೆಡಿಎಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿದರು. ಆಗ ಇದೇ ಭ್ರಷ್ಟಾಧ್ಯಕ್ಷ ಡಿ.ಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದರು. ಆಗೇಕೆ
ಕಾಂಗ್ರೆಸ್ ನಾಯಕರಿಗೆ ಮೇಕೆದಾಟು ಕಾಳಜಿ ಇರಲಿಲ್ಲ? ಈಗ #ಸುಳ್ಳಿನಜಾತ್ರೆ ಮಾಡುವ ಬದಲು ಸತ್ಯ ಶೋಧನೆ ಮಾಡಿಕೊಳ್ಳಿ' ಎಂದು ಹೇಳಿದೆ.
'ಮೇಕೆದಾಟು ಯೋಜನೆ ವಿಳಂಬಕ್ಕೆ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರೇ ನೇರ ಕಾರಣ. ನೀರಾವರಿ ಮಂತ್ರಿಯಾಗಿದ್ದ ಎಂ.ಬಿ. ಪಾಟೀಲ್ ಅವರಿಗೆ ಯೋಜನೆಯ ಶ್ರೇಯಸ್ಸು ಸಿಗಬಹುದೆಂಬ ಕಾರಣಕ್ಕೆ ಡಿಪಿಆರ್ ಸಕಾಲದಲ್ಲಿ ಒಪ್ಪಿಗೆಯಾಗದಂತೆ ಡಿಕೆಶಿ ನೋಡಿಕೊಂಡರು. ಈಗ ಕಾವೇರಿ ನಮ್ಮ ಹಕ್ಕು ಎಂಬ ಸುಳ್ಳಿನಜಾತ್ರೆ ಆರಂಭಿಸಿದ್ದಾರೆ' ಎಂದು ಬಿಜೆಪಿ ಟ್ವೀಟ್ ಮಾಡಿದೆ.
ರಾಜ್ಯದಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇದಾದ ಬಳಿಕ ಜೆಡಿಎಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿದರು.
— BJP Karnataka (@BJP4Karnataka) December 29, 2021
ಆಗ ಇದೇ ಭ್ರಷ್ಟಾಧ್ಯಕ್ಷ @DKShivakumar ಜಲಸಂಪನ್ಮೂಲ ಸಚಿವರಾಗಿದ್ದರು.
ಆಗೇಕೆ @INCKarnataka ನಾಯಕರಿಗೆ ಮೇಕೆದಾಟು ಕಾಳಜಿ ಇರಲಿಲ್ಲ?
ಈಗ #ಸುಳ್ಳಿನಜಾತ್ರೆ ಮಾಡುವ ಬದಲು ಸತ್ಯ ಶೋಧನೆ ಮಾಡಿಕೊಳ್ಳಿ.







