ಬೆಂಗಳೂರು: ಸೋಪ್ ಬಾಕ್ಸ್ ಗಳಲ್ಲಿದ್ದ 80 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಜಪ್ತಿ
ನೈಜೀರಿಯಾ ಮೂಲದ ಮೂವರು ಆರೋಪಿಗಳ ಬಂಧನ

photo: @ips_patil
ಬೆಂಗಳೂರು, ಡಿ.29: ಹೊಸ ವರ್ಷದ ಪಾರ್ಟಿಗಳಿಗೆ ಸರಬರಾಜು ಮಾಡಲು ಸೋಪ್ ಬಾಕ್ಸ್ ಗಳಲ್ಲಿ ಅಡಗಿಸಿ ಶೇಖರಿಸಿದ್ದ 80 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಬಸಿಲ್, ಚಾಲ್ರ್ಸ್, ಸಿಲ್ವಿಸ್ಟರ್ ಬಂಧಿತ ಆರೋಪಿಗಳಾಗಿದ್ದು, ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ವ್ಯಾಪಾರಿ ವೀಸಾದಡಿಯಲ್ಲಿ ಭಾರತಕ್ಕೆ ಬಂದ ಆರೋಪಿಗಳು ಮುಂಬೈನಲ್ಲಿ ಡ್ರಗ್ ಖರೀದಿಸಿ ನಗರಕ್ಕೆ ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದರು. ಮುಂಬೈನಲ್ಲಿ ಖರೀದಿಸಿಕೊಂಡು ಹೊಸ ವರ್ಷದ ಪಾರ್ಟಿಗಳಿಗೆ ಹೆಚ್ಚಿನ ಬೆಲೆಗೆ ಸರಬರಾಜು ಮಾಡಲು ಬಾಗಲೂರಿನ ಮನೆಯೊಂದರಲ್ಲಿ ಸೋಪ್ ಬಾಕ್ಸ್ ಗಳಲ್ಲಿ ಡ್ರಗ್ಸ್ ಸಂಗ್ರಹಿಸಿಟ್ಟ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿಯ ನಾರ್ಕೋಟಿಕ್ ವಿಂಗ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 80 ಲಕ್ಷ ಮೌಲ್ಯದ 400 ಗ್ರಾಂ ಎಂಡಿಎಂಎ, 40 ಗ್ರಾಂ ಕೊಕೇನ್, 400 ಗ್ರಾಂ ಹ್ಯಾಷಿಷ್ ಆಯಿಲ್ ಫಿಯಾಮಾ ಸೋಪ್ ಬಾಕ್ಸ್ಗಳು, ತೂಕದ ಯಂತ್ರ, ಐದು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
Continuing the drive against drugs, CCB Anti Narcotics Wing arrest 3 foreign drug peddlers..came on Buisness Visa & indulged in drug trafficking..seized Cocaine, Ecstacy, Hashish..concealed it in soap boxes..case under Foriegners Act & NDPS.. @CPBlr @BlrCityPolice pic.twitter.com/zS0sm4Dnsy
— Sandeep Patil IPS (@ips_patil) December 29, 2021







