ಹೊಸ ವರ್ಷಾಚರಣೆ: ಡಿ.31ರಂದು ಮತ್ತಷ್ಟು ಬಿಗಿ ಕ್ರಮ; ನಗರ ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು, ಡಿ.29: ನೂತನ ವರ್ಷ ಆಚರಣೆ ದಿನವಾದ ಡಿ.31ರಂದು ಕೆಲವು ನಿರ್ಬಂಧಗಳೊಂದಿಗೆ ಬಿಗಿಯಾದ ಕ್ರಮ ಕೈಗೊಳ್ಳಲಾಗುವುದೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಇನ್ನುಮುಂದೆ ಜಂಟಿಯಾಗಿ ನೈಟ್ ಕರ್ಫೂ ಅನುಷ್ಠಾನಗೊಳಿಸಲಿದ್ದು, ಪ್ರಮುಖವಾಗಿ ಒಟ್ಟಿಗೆ ನಾಕಾಬಂಧಿಯನ್ನು ಮಾಡಲಾಗುವುದು ಎಂದರು.
ಮಂಗಳವಾರ ರಾತ್ರಿಯಿಂದ ಆರಂಭವಾದ ನೈಟ್ ಕರ್ಫ್ಯೂಗೆ ಜನರಿಂದ ಉತ್ತಮ ಬೆಂಬಲ ದೊರೆತಿದೆ. ಮುಂದೆಯೂ ಸಹ ಇದೇ ರೀತಿ ಸಹಕಾರ ಇರುತ್ತದೆ ಎಂದು ನನಗೆ ಭರವಸೆ ಇದೆ. ಪೊಲೀಸರು ಸಹ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
Next Story





