ಬೆಂಗಳೂರು: ಡಿ.30, 3ರಂದು ನಗರದ ವಿವಿಧಡೆ ವಿದ್ಯುತ್ ವ್ಯತ್ಯಯ
ಬೆಂಗಳೂರು ನಗರ
ಬೆಂಗಳೂರು, ಡಿ.29: ನಗರದ ವಿವಿಧ ಪ್ರದೇಶಗಳಲ್ಲಿ ಡಿ.30 ಮತ್ತು 31ರಂದು ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಬೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.
ಡಿ.30ರಂದು ನಗರದ ದಕ್ಷಿಣ ವಲಯದ ಜೆಪಿ ನಗರ, ಪುಟ್ಟೇನಹಳ್ಳಿ, ಸಂಗಮ್ ಸರ್ಕಲ್, ಜೆಪಿ ನಗರ 1ನೇ ಹಂತ, ಬನಶಂಕರಿ 2ನೇ ಹಂತ, ಅಂಬೇಡ್ಕರ್ ನಗರ, ಉತ್ತರಹಳ್ಳಿ ಮುಖ್ಯ ರಸ್ತೆ, ಕ್ರಾಸ್, ಡಾಲರ್ ಲೇಔಟ್, ಮುನಿರೆಡ್ಡಿ ಲೇಔಟ್, ಚಿಕ್ಕಲಸಂದ್ರ ಬಸ್ ನಿಲ್ದಾಣ, ಸಿದ್ದಾಪುರ, ಈಜಿಪುರ, ಮಾರತಹಳ್ಳಿ, ಸಂಜಯನಗರ, ಮಂಜುನಾಥ ನಗರ, ಅಶ್ವಥ್ ನಗರ ಮತ್ತು ಕೆಆರ್ಬಿ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಉತ್ತರ ವಲಯದ ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲನಿ, ಯಶವಂತಪುರ, ಅಂಬೇಡ್ಕರ್ ನಗರ, ಮಾಡೆಲ್ ಕಾಲನಿ, ಕೆಎನ್ ಎಕ್ಸ್ಟೆನ್ಷನ್, ಎಲ್ಎನ್ ಕಾಲನಿ, ಸಿದ್ದಾರ್ಥ ಸ್ಲಂ, ರಾಮಚಂದ್ರಾಪುರ ಗ್ರಾಮ, ಆದಿತ್ಯ ನಗರ, ಎಂಎಸ್ ಪಾಳ್ಯ, ಅಕ್ಷಯನಗರ, ದೊಡ್ಡಬೇಟಹಳ್ಳಿ, ಮಾರುತಿ ನಗರ, ವಿದ್ಯಾರಣ್ಯಪುರ ಭಾಗ, ಬಸವಸಮಿತಿ ನಂಜಪ್ಪ ಸರ್ಕಲ್, ತಿಂಡ್ಲು ಗ್ರಾಮ, ಅಮೃತಹಳ್ಳಿ, ಜಕ್ಕೂರು, ಆನಂದನಗರ, ಎಸ್ಬಿಎಂ ಕಾ¯ನಿ, ಕುಂತಿ ಗ್ರಾಮ, ಹೆಬ್ಬಾಳ, ವಿನಾಯಕನಗರ, ಶೆಟ್ಟಿಹಳ್ಳಿ ಮತ್ತು ಮಲ್ಲಸಂದ್ರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದ ಪಶ್ಚಿಮ ವಲಯದ ಉತ್ತರಹಳ್ಳಿ ರಸ್ತೆ, ಕೋನಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಪಟಂಗಿರಿ, ಬಿಎಚ್ಇಎಲ್ ಲೇಔಟ್, ಶ್ರುಸ್ತಿ ನಗರ, ಹೊಸಹಳ್ಳಿ ರಸ್ತೆ, ಗಂಟಕನದೊಡ್ಡಿ, ಅಪೂರ್ವ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದ ಪೂರ್ವ ವಲಯದ ಜೋಗುಪಾಳ್ಯ ಮುಖ್ಯ ಚಾನಲ್ ರಸ್ತೆ, ಇಲ್ಪೆ ತೋಪು, ವೆಂಕಟೇಶ್ವರ ಲೇಔಟ್, ಬಿಳೇಶಿವಾಲೆ ಮತ್ತು ಕಾಫಿ ಬೋರ್ಡ್ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಡಿ.31ರಂದು ನಗರದ ದಕ್ಷಿಣ ವಲಯದ ಆರ್ಬಿಐ ಲೇಔಟ್, ಯಾದವ್ ಫಾರ್ಮ್, ಸಿದ್ದನ ಲೇಔಟ್, ಕರೆಸಂದ್ರ ಬನಶಂಕರಿ 2ನೇ ಹಂತ, ಕಿಡ್ನಿ ಫೌಂಡೇಶನ್, ಆರ್ಕೆ ಲೇಔಟ್, ಜೆಪಿ ನಗರ 5ನೇ ಹಂತ, ಕೆಆರ್ ಲೇಔಟ್, ವೆಂಕಟಾದ್ರಿ ಲೇಔಟ್, ದೊರೆಸಾನಿಪಾಳ್ಯ, ಚಿಕ್ಕಲಸಂದ್ರ, ಅಶ್ವಿನಿ ಲೇಔಟ್ ಮತ್ತು ಕೆಆರ್ಬಿ ಲೇಔಟ್ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಉತ್ತರ ವಲಯದ ಮತ್ತಿಕೆರೆ, ಎಸ್ಬಿಎಂ ಕಾಲನಿ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲನಿ, ಬಂಡೆಪ್ಪ ಗಾರ್ಡನ್, ಟಾಟಾನಗರ, ದೇವಿ ನಗರ, ಲೊಟ್ಟೆಗೋಳಹಳ್ಳಿ, ಎಲ್ಕೆಆರ್ ನಗರ, ಜಕ್ಕೂರು ಮುಖ್ಯರಸ್ತೆ, ಬಾಗಲೂರು ಮುಖ್ಯರಸ್ತೆ, ವಿನಾಯಕನಗರ ಮತ್ತು ದ್ವಾರಕಾನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಪಶ್ಚಿಮ ವಲಯದ ಕಮಲಾನಗರ ಮುಖ್ಯರಸ್ತೆ, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಟಿಆರ್ ನಗರ, ಕೆಇಬಿ ಕ್ವಾರ್ಟರ್ಸ್ ಬಳಿ, ಬಾಲಶಾಪಲ್ಲಿಯ ರಸ್ತೆ, ವಿದ್ಯಾಪೀಠ ರಸ್ತೆ, ಟಿಜಿ ಪಾಳ್ಯ ಮುಖ್ಯರಸ್ತೆ, ವಿದ್ಯಾಮಾನ ನಗರ, ಎಸ್ಎಲ್ವಿ ಕೈಗಾರಿಕಾ ಪ್ರದೇಶ, ಪೊಲೀಸ್ ಕ್ವಾರ್ಟರ್ ಹೊಸಹಳ್ಳಿ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಕುವೆಂಪು ಮುಖ್ಯರಸ್ತೆ, ಗಂಗಾನಗರ, ಮಲ್ಲತ್ತಳ್ಳಿ ಲೇಔಟ್, ಎಸ್ಐಆರ್ಎಂವಿ ಲೇಔಟ್ 5ನೇ ಬ್ಲಾಕ್, ಎಸ್ಐಆರ್ ಎಂವಿ ಲೇಔಟ್ 3ನೇ ಬ್ಲಾಕ್, ಕೆಂಗೇರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದ ಪೂರ್ವ ವಲಯ ನಾಗವಾರ ಪಾಳ್ಯ ರಸ್ತೆ, ಎನ್ಬಿಸಿ ಲೇಔಟ್ ಮತ್ತು ಬನ್ನಪ್ಪ ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.