ದಾಂಪತ್ಯಕ್ಕೆ ಕಾಲಿರಿಸಿದ ಅಥ್ಲೀಟ್ ಪೂವಮ್ಮ
![ದಾಂಪತ್ಯಕ್ಕೆ ಕಾಲಿರಿಸಿದ ಅಥ್ಲೀಟ್ ಪೂವಮ್ಮ ದಾಂಪತ್ಯಕ್ಕೆ ಕಾಲಿರಿಸಿದ ಅಥ್ಲೀಟ್ ಪೂವಮ್ಮ](https://www.varthabharati.in/sites/default/files/images/articles/2021/12/29/319440-1640791272.jpeg)
ಮಂಗಳೂರು, ಡಿ.29: ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಹಾಗೂ ಒಲಂಪಿಯನ್, ಕರ್ನಾಟಕದ ಅಥ್ಲೀಟ್ ಎಂ.ಆರ್. ಪೂವಮ್ಮ ಕೇರಳದ ಅಥ್ಲೀಟ್ ಜಿತಿನ್ ಜೊತೆ ಬುಧವಾರ ಮಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ನಗರ ಹೊರ ವಲಯದ ಅಡ್ಯಾರ್ ಗಾರ್ಡನ್ನ ವಿ.ಕೆ.ಶೆಟ್ಟಿ ಸಭಾಂಗಣದಲ್ಲಿ ಕೊಡವ ಸಾಂಪ್ರದಾಯಿಕ ಶೈಲಿಯಲ್ಲಿ ವಿವಾಹ ನೆರವೇರಿತು. ಪೂವಮ್ಮ ಅವರ ತಂದೆ ಮಚ್ಚೆಟ್ಟಿರ ಜಿ.ತಮ್ಮಯ್ಯ (ರಾಜು), ತಾಯಿ ಜಾನಕಿ ಮತ್ತು ಜಿತಿನ್ ಅವರ ತಾಯಿ ಜಾನ್ಸಿ ಸಹಿತ ಕುಟುಂಬಸ್ಥರು, ಬಂಧುಮಿತ್ರರು, ಕ್ರೀಡಾಪಟುಗಳು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.
ಕೊಡಗು ಮೂಲದ 31 ವರ್ಷದ ಪೂವಮ್ಮ 2014ರಲ್ಲಿ ಇಂಚೋನ್ ಏಷ್ಯಾಡ್ನಲ್ಲಿ 1 ಚಿನ್ನ, 1 ಕಂಚು ಮತ್ತು 2018ರ ಜಕಾರ್ತ ಏಷ್ಯಾಡ್ನಲ್ಲಿ 2 ಚಿನ್ನ ಪದಕ ಗೆದ್ದಿದ್ದರು. ಜ.1ರಂದು ಪೂವಮ್ಮರ ಪತಿ ಜಿತಿನ್ ಅವರ ಊರು ಕೇರಳದ ತ್ರಿಶೂರಿನಲ್ಲಿ ಮತ್ತೊಂದು ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ.
Next Story