ಮಂಗಳೂರು: ಸುಹಾನ ಮೇಕಪ್ ಸ್ಟೋರ್ ಶುಭಾರಂಭ

ಮಂಗಳೂರು, ಡಿ.29: ನಗರದ ಮಾರ್ಕೆಟ್ ರಸ್ತೆಯ ಸೋನಾ ಟವರ್ಸ್‌ನ ನೆಲ ಅಂತಸ್ತಿನಲ್ಲಿ ‘ಸುಹಾನ ಮೇಕಪ್ ಸ್ಟೋರ್’ ಮಂಗಳವಾರ ಶುಭಾರಂಭಗೊಂಡಿತು.
ದ.ಕ.ಜಿಪಂ ಮಾಜಿ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ ‘ಸುಹಾನ ಮೇಕಪ್ ಸ್ಟೋರ್’ ಉದ್ಘಾಟಿಸಿ ಶುಭ ಹಾರೈಸಿದರು. ಅತಿಥಿಯಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಭಾಗವಹಿಸಿದ್ದರು. ‘ಸುಹಾನ ಮೇಕಪ್ ಸ್ಟೋರ್’ನ ಮಾಲಕ ಮುಹಮ್ಮದ್ ಯಹ್ಯಾ ಮತ್ತಿತರರು ಉಪಸ್ಥಿತರಿದ್ದರು.
ಸುಹಾನ ಮೇಕಪ್ ಸ್ಟುಡಿಯೋ ಆ್ಯಂಡ್ ಅಕಾಡಮಿ ಮಂಗಳೂರು ಇದರ ಘಟಕವಾದ ‘ಸುಹಾನ ಮೇಕಪ್ ಸ್ಟೋರ್’ನಲ್ಲಿ ಅಲಂಕಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್‌ನ ಎಲ್ಲಾ ಶೃಂಗಾರ ಸಾಧನಗಳು ಮತ್ತು ಚರ್ಮ, ತಲೆಗೂದಲಿಗೆ ಸಂಬಂಧಿಸಿದ ಉತ್ಪನ್ನಗಳು ಲಭ್ಯವಿದೆ. ಅದಲ್ಲದೆ ವೃತ್ತಿಪರ ಮೇಕಪ್‌ದಾರರು ಬಯಸುವ ಅಲಂಕಾರಿಕ ಸಾಮಗ್ರಿಗಳು ಕೂಡ ದೊರೆಯುತ್ತದೆ ಎಂದು ಪ್ರಕಟನೆ ತಿಳಿಸಿದೆ.

Next Story





