ಸುಡಾನ್: ಚಿನ್ನದ ಗಣಿ ದುರಂತದಲ್ಲಿ ಮೃತರ ಸಂಖ್ಯೆ 39ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ
ಖರ್ಟೌಮ್, ಡಿ.28: ಸುಡಾನ್ನ ವೆಸ್ಟ್ ಕೊರ್ಡೊಫನ್ ಪ್ರಾಂತದ ಚಿನ್ನದ ಗಣಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಟ 38 ಮಂದಿ ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಫುಜಾ ಗ್ರಾಮದಲ್ಲಿರುವ ಈ ಗಣಿ ನಿಷ್ಕ್ರಿಯಗೊಂಡಿತ್ತು. ಇದರ ಕಾವಲಿಗೆ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿತ್ತು. ಭದ್ರತಾ ಸಿಬಂದಿ ಇರದಿದ್ದ ಸಂದರ್ಭ ಗಣಿಯೊಳಗೆ ಇಳಿದ ಸ್ಥಳೀಯರು ಚಿನ್ನಕ್ಕಾಗಿ ಹುಡುಕಾಟ ನಡೆಸುತ್ತಾರೆ. ಕಳೆದ ವಾರಾಂತ್ಯದ ರಜೆ ಸಂದರ್ಭ ಸ್ಥಳೀಯರು ಸುರಕ್ಷತಾ ಕ್ರಮ ಅನುಸರಿಸದೆ ಗಣಿಯಲ್ಲಿ ಚಿನ್ನಕ್ಕಾಗಿ ಅಗೆಯುತ್ತಿದ್ದ ಸಂದರ್ಭ ಗಣಿಯ ಗೋಡೆ ಕುಸಿದಿದೆ ಎಂದು ಸುಡಾನ್ನ ಖನಿಜ ಸಂಪನ್ಮೂಲ ಸಂಸ್ಥೆಯ ವಕ್ತಾರ ಇಸ್ಮಾಯಿಲ್ ಟಿಸೌ ಹೇಳಿದ್ದಾರೆ.
ಇತರ ಹಲವರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಸ್ಥಳದಲ್ಲಿ ಇನ್ನೂ ಕೆಲವವರು ಮಣ್ಣಿನಡಿ ಸಿಲುಕಿರುವ ಸಾಧ್ಯತೆಯಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story





