ಗ್ಯಾರೇಜ್‍ಗೆ ನುಗ್ಗಿ ಕಳವು
ಉಪ್ಪಿನಂಗಡಿ: ಗ್ಯಾರೇಜೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು 60 ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ 34 ನೆಕ್ಕಿಲಾಡಿ ಗ್ರಾಮದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವ ಗ್ಯಾರೇಜ್‍ನಲ್ಲಿ ನಡೆದಿದೆ.
ಇಲ್ಲಿನ ಕಾರ್ ಕ್ಲಬ್ ಗ್ಯಾರೇಜ್‍ಗೆ ಬುಧವಾರ ನಸುಕಿನ ಜಾವ ಸುಮಾರು 2ಗಂಟೆಯಿಂದ ಬೆಳಗ್ಗಿನ ಜಾವ ಸುಮಾರು 5ರವರೆಗೆ ಗ್ಯಾರೇಜ್‍ನಲ್ಲಿ ಜಾಲಾಡಿ ಸಾಮಗ್ರಿಗಳನ್ನು ಕಳವುಗೈದಿರುವುದು ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈತ ತಾನು ಬಂದ ಕಾರಿನಲ್ಲಿ ಇವುಗಳನ್ನು ತುಂಬಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





