ಶಿರಾ ನಗರಸಭೆ ಚುನಾವಣೆ: ಅತಂತ್ರ ಫಲಿತಾಂಶ

ಶಿರಾ : ಶಿರಾ ನಗರಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು, 30 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದೆ.
ಜೆಡಿಎಸ್ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಓರ್ವ ಎಂ ಎಲ್.ಎ., ಓರ್ವ ಕೇಂದ್ರ ಮಂತ್ರಿ ಹೊಂದಿದ್ದರು ಬಿಜೆಪಿ ಕೇವಲ 4 ಸ್ಥಾನಗಳನ್ನು ಪಡೆದಿದೆ. 8 ಮಂದಿ ಪಕ್ಷೇತರರು ಆಯ್ಕೆಯಾಗಿದ್ದು, ಇವರಲ್ಲಿ ಬಹುತೇಕರು ವಿವಿಧ ಪಕ್ಷಗಳ ವಿರುದ್ಧ ಬಂಡಾಯ ವಾಗಿ ಸ್ಪರ್ಧಿಸಿದ್ದವರೇ ಆಗಿದ್ದಾರೆ.
ಸ್ಪಷ್ಟ ಬಹುಮತಕ್ಕೆ 16 ಸ್ಥಾನಗಳ ಅಗತ್ಯವಿದ್ದು, ಕಾಂಗ್ರೆಸ್ ಪಕ್ಷಕ್ಕೆ ಆರು ಸ್ಥಾನಗಳ ಅಗತ್ಯವಿದೆ. ಒಂದು ವೇಳೆ ಜೆಡಿಎಸ್ - ಬಿಜೆಪಿ ಒಂದಾದರೂ ಪಕ್ಷೇತರರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜೆಡಿಎಸ್ ತೆಗೆದುಕೊಳ್ಳುವ ತೀರ್ಮಾನ ಬಹಳ ಮುಖ್ಯ ವಾಗಿದೆ.
Next Story





