Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮುಸ್ಲಿಮರ ಹತ್ಯೆಗೆ ಕರೆ ನೀಡಿದವರ ಬಗ್ಗೆ...

ಮುಸ್ಲಿಮರ ಹತ್ಯೆಗೆ ಕರೆ ನೀಡಿದವರ ಬಗ್ಗೆ ಮೌನ ತಾಳಿದ ಪ್ರಧಾನಿ ಮೋದಿ ವಿರುದ್ಧ ನಾಸಿರುದ್ದೀನ್ ಶಾ ವಾಗ್ದಾಳಿ

"ಅವರಿಗೆ ಇದರಲ್ಲೆಲ್ಲಾ ಒಂದು ರೀತಿಯ ಖುಷಿಯಿದೆ"

ವಾರ್ತಾಭಾರತಿವಾರ್ತಾಭಾರತಿ30 Dec 2021 1:17 PM IST
share
ಮುಸ್ಲಿಮರ ಹತ್ಯೆಗೆ ಕರೆ ನೀಡಿದವರ ಬಗ್ಗೆ ಮೌನ ತಾಳಿದ ಪ್ರಧಾನಿ ಮೋದಿ ವಿರುದ್ಧ ನಾಸಿರುದ್ದೀನ್ ಶಾ ವಾಗ್ದಾಳಿ

ಹೊಸದಿಲ್ಲಿ: ಭಾರತದಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ ಬಲಪಂಥೀಯರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ತಾಳಿರುವ ಮೌನದ ಕುರಿತಂತೆ ಕಿಡಿಕಾರಿರುವ ಹಿರಿಯ ನಟ ನಾಸಿರುದ್ದೀನ್ ಶಾ,  "ಅವರಿಗೆ ಅದರ ಗೊಡವೆಯೇ ಇಲ್ಲ, ಬದಲು ಇಂತಹ  ಕರೆಗಳಿಂದ ಅವರಿಗೊಂದು ಖುಷಿ ದೊರೆಯುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಅವರಿಗೆ (ಪ್ರಧಾನಿ ಮೋದಿ) ಇವುಗಳ ಕುರಿತು ಪರಿವೆಯೇ ಇಲ್ಲ. ಕಾಳಜಿಯಂತೂ ಇಲ್ಲವೇ ಇಲ್ಲ. ಈ ಸಂದರ್ಭದಲ್ಲಿ ಅವರದ್ದು ʼಬೂಟಾಟಿಕೆʼ ಎಂದು ಆರೋಪಿಸಲೂ ಸಾಧ್ಯವಿಲ್ಲ. ಅಹ್ಮದಾಬಾದ್‌ ನ ಕಾರ್ಯಕ್ರಮದ ಕುರಿತು ಇವರು ಒಂದೇ ಒಂದು ಕ್ಷಮೆಯ ಮಾತುಗಳನ್ನಾಡಿಲ್ಲ. ಯಾವುದೇ ವಿಚಾರದ ಕುರಿತೂ ಕ್ಷಮೆ ಕೇಳಲೇ ಇಲ್ಲ. ರೈತರಿಗೆ ಸಂಬಂಧಿಸಿದಂತೆ ಅರೆ ಮನಸ್ಸಿನಿಂದ ಕ್ಷಮೆಯಾಚಿಸಿದ್ದರು. ಇಂತಹಾ ಜನರ ಬಗ್ಗೆ ಒಂದೇ ಒಂದು ಟೀಕೆಯಿಲ್ಲ. ವಾಸ್ತವವಾಗಿ, ಅಂತಹವರನ್ನು ಇವರೇ ಟ್ವಿಟರ್‌ ನಲ್ಲಿ ಫಾಲೋ ಮಾಡುತ್ತಿದ್ದಾರೆ. ಇದರಲ್ಲೆಲ್ಲಾ ಅವರಿಗೆ ಒಂದು ರೀತಿಯ ಖುಷಿಯಿದೆ" ಎಂದು ಶಾ ಹೇಳಿದ್ದಾರೆ.

``ಮುಸ್ಲಿಮರ ಹತ್ಯೆಗೆ ಕರೆ ನೀಡಿದ ಈ ಜನರಿಗೆ ಏನಾಗಬಹುದೆಂಬ ಕುತೂಹಲ ನನಗಿತ್ತು. ಆದರೆ ಅವರಿಗೇನೂ ಆಗದೇ ಇರುವುದು ಅಚ್ಚರಿಯಿಲ್ಲ. ಪುತ್ರ ರೈತರ ಮೇಲೆ ವಾಹನ ಹರಿಸಿದ್ದರೂ ಆ ವ್ಯಕ್ತಿಗೆ (ಕೇಂದ್ರ ಸಚಿವ) ಏನೂ ಆಗಿಲ್ಲ" ಎಂದು ಶಾ ಹೇಳಿದರು.

"ತಾವೇನು ಮಾಡುತ್ತಿದ್ದೇವೆ ಎಂಬುವುದು ಇವರಿಗೆ ತಿಳಿದಿದ್ದರೆ ಎಂದು ನಾನು ಅಚ್ಚರಿಪಡುತ್ತಿದ್ದೇನೆ. ಏಕೆಂದರೆ ಇವರು ಪೂರ್ಣಪ್ರಮಾಣದ ಅಂತರ್ಯುದ್ಧಕ್ಕೆ ಕರೆ ನೀಡುತ್ತಿದ್ದಾರೆ. ನಮ್ಮಲ್ಲಿರುವ 200 ಮಿಲಿಯನ್‌ ಜನರು ಅಷ್ಟು ಸುಲಭದಲ್ಲಿ ನಾಶವಾಗುವುದಿಲ್ಲ. ಆ 200 ಮಿಲಿಯನ್‌ ಮಂದಿ ಮತ್ತೆ ಹೋರಾಡುತ್ತಾರೆ.  ನಾವು ಈ ಮಣ್ಣಿಗೆ ಸೇರಿದವರು. ಅಂತಹ ಯಾವುದೇ ಪ್ರತಿರೋಧ ಚಳವಳಿ ಪ್ರಾರಂಭವಾದರೆ ಅದು ದೊಡ್ಡ ಪ್ರಮಾಣದ ಅನಾಹುತವನ್ನು ಎದುರಿಸಲಿದೆ ಎಂಬುವುದು ನನಗೆ ಖಾತ್ರಿಯಿದೆ" ಎಂದು ಶಾ ಹೇಳಿದ್ದಾರೆ.

"ಮುಸ್ಲಿಮರಲ್ಲಿ ಅಸುರಕ್ಷತೆಯ ಭಾವನೆ ಮೂಡಿಸುವ ಒಂದು ಯತ್ನ ನಡೆಯುತ್ತಿದೆ ಎಂದು ನನಗನಿಸುತ್ತದೆ. ಇದು ಮೇಲಿನವರಿಂದಲೇ ಆರಂಭಗೊಳ್ಳುತ್ತದೆ ಹಾಗೂ ಔರಂಗ್‍ಜೇಬ್, ಮೊಘಲ್ ಆಕ್ರಮಣಕಾರರ ಉಲ್ಲೇಖವಾಗುತ್ತದೆ. ಪ್ರತ್ಯೇಕತಾವಾದವೆಂಬುದು ಆಡಳಿತ ಪಕ್ಷದ ಒಂದು ನೀತಿಯಂತಾಗಿದೆ" ಎಂದು ಅವರು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X