ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ವತಿಯಿಂದ ಡಾ. ಯು.ಬಿ. ರಾಜಲಕ್ಷ್ಮೀಗೆ ಅಭಿನಂದನೆ

ಕಾರ್ಕಳ: ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಕಾರ್ಕಳದ ಸ್ಥಾಪಕ ಕಾರ್ಯದರ್ಶಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಡಾ. ಯು.ಬಿ. ರಾಜಲಕ್ಷ್ಮಿ ಅವರನ್ನು ಜಾಗೃತಿ ಬಳಗದ ವತಿಯಿಂದ ಎಸ್.ವಿ.ಟಿ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನಿಸಲಾಯಿತು. ರಾಜಲಕ್ಷ್ಮಿ ಅವರ ಬರಹ ಹಾಗೂ ವೃತ್ತಿ ಜೀವನದ ಕುರಿತು ಮಾತನಾಡಿದ ಶ್ಯಾಮಲಾ ಕುಮಾರಿ ಬೇವಿಂಜೆ ಮಾತನಾಡಿದರು.
ಜಾಗೃತಿ ಬಳಗದ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸದಸ್ಯೆ ಕಸ್ತೂರಿ ಕಾರಂತ್, ಸುಮತಿ ಕಾರ್ಕಳ, ಜಾಗೃತಿ ಬಳಗದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಶರಣ್ಯ ಬೆಳವಾಯಿ ಪ್ರಾರ್ಥಿಸಿದರು. ಶೈಲಜಾ ಹೆಗ್ಡೆ ಸ್ವಾಗತಿಸಿ, ಮನೋರಮಾ ರೈ ಕಾರ್ಯಕ್ರಮ ನಿರೂಪಿಸಿದರು. ಇಂದಿರಾ ವಂದಿಸಿದರು.
Next Story





