ರಸ್ತೆ ಅಪಘಾತ; ಗಾಯಾಳು ದೈಹಿಕ ಶಿಕ್ಷಕಿ ಮೃತ್ಯು
ಉಳ್ಳಾಲ: ಇಲ್ಲಿನ ಠಾಣೆ ವ್ಯಾಪ್ತಿಯ ಸಂಕೋಳಿಗೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಜೋಯ್ ಲ್ಯಾಂಡ್ ಶಾಲೆಯ ದೈಹಿಕ ಶಿಕ್ಷಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ಮೃತ ದೈಹಿಕ ಶಿಕ್ಷಕಿಯನ್ನು ಕೊಲ್ಯ ನಿವಾಸಿ ಗುಲಾಬಿ(54) ಎಂದು ಗುರುತಿಸಲಾಗಿದೆ.
ಅವರು ಬುಧವಾರ ಬೆಳಗ್ಗೆ ಅಂಗಡಿಗೆಂದು ನಡೆದುಕೊಂಡು ಹೋಗುತ್ತಿದ್ದ ವೇಳೆ ಎದುರು ಕಡೆಯಿಂದ ಬಂದ ವಾಹನ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story