ಬೆಂಗ್ರೆ ಪರಿಸರದ ಅಭಿವೃದ್ಧಿ, ಸಮಸ್ಯೆಗಳ ಪರಿಹಾರ ಕುರಿತು ಸಭೆ

ಮಂಗಳೂರು, ಡಿ.30: ಬೆಂಗ್ರೆ ಪರಿಸರದ ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರಗಳ ಕುರಿತು ಶಾಸಕ ವೇದವ್ಯಾಸ್ ಕಾಮತ್ ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಗುರುವಾರ ಸಭೆ ನಡೆಸಿದರು.
ಮಹಾನಗರ ಪಾಲಿಕೆ, ಮೀನುಗಾರಿಕೆ, ಬಂದರು, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಅಬಕಾರಿ, ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಕಾಮತ್, ಈ ಹಿಂದೆ ನೀಡಲಾಗಿರುವ ಹಕ್ಕುಪತ್ರಗಳಿಗೆ ಸರ್ವೆ ನಂಬರ್ ಜೋಡಣೆ, ಬಾಕಿ ಉಳಿದಿರುವ ಹಕ್ಕುಪತ್ರಗಳ ವಿಲೇವಾರಿಯ ಕುರಿತು ಚರ್ಚಿಸಿದರು.
ಬೆಂಗ್ರೆಯಲ್ಲಿ ಈಗಾಗಲೇ ನಿರ್ಧರಿಸಿರುವ ಕಟ್ಟಡದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಲಿದ್ದು, ವೈದ್ಯಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಬಂದರ್ ದಕ್ಕೆ ಮತ್ತು ಫೆರಿಬೋಟ್ ಮೂಲಕ ಪ್ರತಿನಿತ್ಯ ಉದ್ಯೋಗ, ವಿದ್ಯಾಭ್ಯಾಸಕ್ಕಾಗಿ ಪ್ರಯಾಣಿಸುವವರಿಗೆ ಉಂಟಾಗುವ ಸಮಸ್ಯೆಯ ಬಗ್ಗೆ ಸ್ಪಂದಿಸಿದ ಶಾಸಕರು ಸುರಕ್ಷತೆಯ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಕಾರ್ಪೊರೇಟರ್ ಮುನೀಬ್ ಬೆಂಗ್ರೆ, ಸುನಿತಾ, ಮಾಜಿ ಕಾರ್ಪೊರೇಟರ್ ಮೀರಾ ಕರ್ಕೇರಾ, ಬಿಜೆಪಿ ಮುಖಂಡರಾದ ಸುರೇಂದ್ರ ಪಾಂಗಳ, ಗಂಗಾಧರ್ ಸಾಲ್ಯಾನ್, ಲೋಕೇಶ್ ಬೆಂಗ್ರೆ, ಅರವಿಂದ್ ಬೆಂಗ್ರೆ, ಹೇಮಚಂದ್ರ, ಮಹೇಶ್, ಲತೀಶ್, ನಾಗರಾಜ್, ಮಹಜನ ಸಭಾ ಅಧ್ಯಕ್ಷ ಕೇಶವ ಗುರಿಕಾರ, ಮಾಜಿ ಅಧ್ಯಕ್ಷ ಧನಂಜಯ ಪುತ್ರನ್, ಚೇತನ್ ಬೆಂಗ್ರೆ ಮತ್ತಿತರರು ಉಪಸ್ಥಿತರಿದ್ದರು.





