ವೇಣುಮಿತ್ರ ಕಾಸರಗೋಡು ನಿಧನ

ಮಂಗಳೂರು, ಡಿ.30: ಕಿರುತೆರೆ ನಟ, ಹಿರಿಯ ರಂಗಭೂಮಿ ಕಲಾವಿದ, ಕತೆಗಾರ, ಕುದುರೆಮುಖ ಕಂಪೆನಿಯ ನಿವೃತ್ತ ನೌಕರ ವೇಣುಮಿತ್ರ ಕಾಸರಗೋಡು (73) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ನಗರದ ಯೆಯ್ಯಾಡಿಯಲ್ಲಿ ಮನೆ ಮಾಡಿಕೊಂಡಿದ್ದ ಅವರು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡಿದ ’ರಂಗ ಭಾಸ್ಕರ’ ಪ್ರಶಸ್ತಿ ಸಹಿತ ಹಲವು ಗೌರವಗಳಿಗೆ ಭಾಜನರಾಗಿದ್ದರು. ಸಾಗರದೀಪ ಸಿನೆಮಾದಲ್ಲೂ ಬಣ್ಣ ಹಚ್ಚಿ, ಹಿರಿತೆರೆಯಲ್ಲೂ ಸೈ ಎನಿಸಿಕೊಂಡಿದ್ದರು.
Next Story





