ಬಾಲಿವುಡ್ ನಿರ್ಮಾಪಕ ವಿಜಯ್ ಗಲಾನಿ ನಿಧನ
ಮುಂಬೈ (ಮಹಾರಾಷ್ಟ್ರ), ಡಿ. 30: ಸಲ್ಮಾನ್ ಖಾನ್ ನಟನೆಯ ವೀರ್ (2010) ಹಾಗೂ ಸೂರ್ಯವಂಶಿ (1992) ಚಲನಚಿತ್ರಗಳ ನಿರ್ಮಾಪಕ ವಿಜಯ್ ಗಲಾನಿ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. ವಿಜಯ್ ಗಲಾನಿ ಅವರು ಕಳೆದ ಕೆಲವು ತಿಂಗಳಿಂದ ಲಂಡನ್ನಲ್ಲಿ ಇದ್ದರು. ರಕ್ತದ ಕ್ಯಾನ್ಸರ್ ಗೆ ಅವರು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ವಿಜಯ್ ಗಲಾನಿ ಅವರು ನಿಧನರಾಗಿರುವುದನ್ನು ‘ವೀರ್’ ಚಿತ್ರದಲ್ಲಿ ಅವರೊಂದಿಗೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಅನಿಲ್ ಶರ್ಮಾ ದೃಢಪಡಿಸಿದ್ದಾರೆ. ಎರಡು ತಿಂಗಳ ಹಿಂದೆ ತಾನು ಅವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ವಿಜಯ್ ಗಲಾನಿ ಅವರು ದೀರ್ಘ ಕಾಲ ಬಾಲಿವುಡ್ನಲ್ಲಿ ನಿರ್ಮಾಪಕರಾಗಿದ್ದರು. ‘ಅಜ್ನಬಿ’, ‘ಅಚಾನಕ್’ ಹಾಗೂ ‘ದಿ ಪವರ್’ ಸೇರಿದಂತೆ ಹಲವು ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು.
Next Story





