Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತದಲ್ಲಿ 10 ಕೋಟಿ ಭಾರತೀಯರು...

ಭಾರತದಲ್ಲಿ 10 ಕೋಟಿ ಭಾರತೀಯರು ನಿರಾಧಾರರಾಗಲಿದ್ದಾರೆಯೇ?

ಡಾ. ಮಡಭೂಷಿ ಶ್ರೀಧರ್ಡಾ. ಮಡಭೂಷಿ ಶ್ರೀಧರ್31 Dec 2021 11:27 AM IST
share
ಭಾರತದಲ್ಲಿ 10 ಕೋಟಿ ಭಾರತೀಯರು ನಿರಾಧಾರರಾಗಲಿದ್ದಾರೆಯೇ?

ಆಧಾರ್ ಕಾರ್ಡ್-ಮತದಾರರ ಕಾರ್ಡ್ ಲಿಂಕ್ ಮಾಡುವುದರಿಂದ ಯಾರೊಬ್ಬರೂ ಮತದಾನದ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂಬುದು ಅದ್ಭುತ ವಿಷಯ. ಆದರೆ, ಬದುಕುಳಿಯಲು ಅಗತ್ಯವಿರುವ ಎಲ್ಲಾ ಪ್ರಮುಖ ಅಗತ್ಯಗಳನ್ನೂ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿರುವಾಗ, ಆಧಾರ್ ಕಾರ್ಡ್ ಹೊಂದಿರದ 10 ಕೋಟಿ ಜನತೆಯ ಪರಿಸ್ಥಿತಿ ಏನಾಗಲಿದೆ ಎಂಬುದೇ ಇಲ್ಲಿರುವ ಪ್ರಶ್ನೆಯಾಗಿದೆ.

ದೂರು ನೀಡುವವರೂ, ನ್ಯಾಯ ತೀರ್ಮಾನಿಸುವವರೂ ಒಬ್ಬರೇ!

ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ನಿಯಮ ಉಲ್ಲಂಘಿಸಿದ ಬಗ್ಗೆ ಪ್ರಾಧಿಕಾರ ನೀಡುವ ದೂರಿನಡಿ, ಪ್ರಾಧಿಕಾರದ ಅಧಿಕಾರಿ ಅಥವಾ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿ ತನಿಖೆ ನಡೆಸಬೇಕು ಮತ್ತು ದಂಡದ ಮೊತ್ತವನ್ನು ನಿರ್ಧರಿಸಬೇಕು. ತೀರ್ಪು ನೀಡುವ ಅಧಿಕಾರಿ ಸ್ವತಂತ್ರನಲ್ಲ, ಪ್ರಾಧಿಕಾರಕ್ಕೆ ಅಧೀನನಾಗಿರುತ್ತಾನೆ. ಇದರರ್ಥ, ದೂರುದಾರರು ಮತ್ತು ನ್ಯಾಯಾಧೀಶರು ಇಬ್ಬರೂ ಪ್ರಾಧಿಕಾರವೇ ಆಗಿರುತ್ತದೆ. ಇದು ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಪ್ರಾಧಿಕಾರವನ್ನು ರದ್ದುಗೊಳಿಸಲು ಕೇಂದ್ರ ಸರಕಾರಕ್ಕೆ ಹೆಚ್ಚುವರಿ ಅಧಿಕಾರ ನೀಡಲಾಗಿದೆ. ಕ್ರಮ ಕೈಗೊಳ್ಳಬೇಕೆಂಬ ಸದುದ್ದೇಶದಿಂದ ಹೂಡುವ ದಾವೆಯಿಂದ ಎಲ್ಲಾ ಅಧಿಕಾರಿಗಳಿಗೂ ವಿನಾಯಿತಿ ನೀಡಲಾಗಿದೆ.

 ‘ಆಧಾರ್: ಹೌ ಎ ನೇಷನ್ ಈಸ್ ಡಿಸೀವ್ಡ್’ (ಆಧಾರ್: ಒಂದು ರಾಷ್ಟ್ರವನ್ನು ವಂಚಿಸಿದ ರೀತಿ) ಎಂಬ ಪಿಬಿ ಜಿಜೀಷ್ ಅವರ ಕೃತಿಯನ್ನು ಸುಪ್ರೀಂಕೋರ್ಟ್‌ನ ಖ್ಯಾತ ನ್ಯಾಯಾಧೀಶ ಜಸ್ಟಿಸ್ ವಿ.ಆರ್. ಕೃಷ್ಣ ಅಯ್ಯರ್ 2011ರ ನವೆಂಬರ್‌ನಲ್ಲಿ ಬಿಡುಗಡೆಗೊಳಿಸಿದ್ದರು. ಆ ಸಂದರ್ಭ ಮಾತನಾಡಿದ್ದ ಅವರು, ಖಾಸಗಿತನಕ್ಕೆ ಧಕ್ಕೆ ತರುವ ಜತೆಗೆ ಜನತೆಯ ಮೂಲಭೂತ ಹಕ್ಕಿಗೆ ತೊಡಕಾಗುವ, ಉಗ್ರ ಬಲಪಂಥೀಯ ರಾಷ್ಟ್ರಗಳಿಗೆ ಮಾತ್ರ ಸರಿಹೊಂದುವ ಆಧಾರ್ ಯೋಜನೆ ಜಾರಿಯಾಗಬಾರದು ಎಂದು ಆಗ್ರಹಿಸಿದ್ದರು.

 ಆದರೆ ಸುಪ್ರೀಂಕೋರ್ಟ್ ಆಧಾರ್ ಕಾಯ್ದೆ 2016ನ್ನು ಸಾಂವಿಧಾನಿಕ ಮತ್ತು ನ್ಯಾಯಸಮ್ಮತ ಎಂದು ಪ್ರಮಾಣೀಕರಿಸಿದೆ. ಭಾರತದಲ್ಲಿ ಓರ್ವ ವ್ಯಕ್ತಿಯ ಬದುಕಿಗೆ ಆಧಾರ್ ಸಂಖ್ಯೆ ಅನಿವಾರ್ಯಗೊಳಿಸಲಾಗುತ್ತಿದೆ. ಆರಂಭದಲ್ಲಿ ಸರಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪುವುದನ್ನು ಖಾತರಿಪಡಿಸಲು ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತಿತ್ತು. ಆದರೆ ಕ್ರಮೇಣ ಜನತೆ ತಮ್ಮ ಹಕ್ಕು ಜಾರಿಗೊಳಿಸಬೇಕಿದ್ದರೆ ಆಧಾರ್ ಕಡ್ಡಾಯವಾಯಿತು, ಇದೀಗ ಮತದಾನದ ಹಕ್ಕು ಚಲಾವಣೆಗೂ ಆಧಾರ್ ಸಂಖ್ಯೆ ಕಡ್ಡಾಯವಾಗಿದೆ. ಯಾವುದಾದರೂ ಕಾರಣದಿಂದ ಆಧಾರ್ ಕಾರ್ಡ್ ಮಾಡಿಸದ ವ್ಯಕ್ತಿ ಇದೀಗ ಮತದಾನದ ಹಕ್ಕಿನಿಂದ ವಂಚಿತನಾಗಲಿದ್ದಾನೆ. ಹೊಸ ಕಾಯ್ದೆಯ ಪ್ರಕಾರ ಆಧಾರ್ ಜೋಡಣೆ ಕಡ್ಡಾಯವಲ್ಲ, ಆದರೆ, ‘‘ಕೇಂದ್ರದ ಸೂಚನೆ ಪ್ರಕಾರ..’’ ಎಂಬ ಸಾಲನ್ನು ಇದರಲ್ಲೂ ಸೇರಿಸಲಾಗಿದೆ. ಆಧಾರ್ ಕಾಯ್ದೆ 2016ರ ಪೀಠಿಕೆಯಲ್ಲಿ ಆಧಾರ್ ಕಾರ್ಡನ್ನು ಕೆಲವು ನಿರ್ದಿಷ್ಟ ಪ್ರಯೋಜನಗಳಿಗೆ(ಸರಕಾರದ ಯೋಜನೆಗಳಿಗೆ) ಮಾತ್ರ ಸೀಮಿತಗೊಳಿಸಲಾಗಿತ್ತು. ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳು ಉದ್ದೇಶಿತ ವಿತರಣೆಗಾಗಿ ದಕ್ಷ, ಪಾರದರ್ಶಕ ಮತ್ತು ಉತ್ತಮ ಆಡಳಿತ ಒದಗಿಸುವ ಉದ್ದೇಶದ ಕಾಯ್ದೆ ಎಂದು ಪೀಠಿಕೆಯಲ್ಲಿ ಉಲ್ಲೇಖಿಸಲಾಗಿದೆ. ಕಾಯ್ದೆಯ ಸೆಕ್ಷನ್ 2(ಎಫ್) ಪ್ರಕಾರ ಪ್ರಯೋಜನ ಎಂದರೆ ‘‘ವ್ಯಕ್ತಿಗಳಿಗೆ ಅಥವಾ ಗುಂಪಿಗೆ ನಗದು ಅಥವಾ ವಸ್ತುವಿನ ರೂಪದಲ್ಲಿರುವ ಯಾವುದೇ ಸೌಕರ್ಯ, ಉಡುಗೊರೆ, ಪುರಸ್ಕಾರ, ಪರಿಹಾರ ಅಥವಾ ಪಾವತಿ. ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿರುವ ಇತರ ಸವಲತ್ತುಗಳೂ ಇದರಲ್ಲಿ ಸೇರಿವೆ.’’

 ಮೂಲತಃ ಇದರ ಉದ್ದೇಶ ಗುರುತಿಗಾಗಿ ಮಾತ್ರವಾಗಿತ್ತು. ಸೆಕ್ಷನ್4(3)ರ ಪ್ರಕಾರ, ಆಧಾರ್ ಸಂಖ್ಯೆ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಗುರುತನ್ನು ಸಾಬೀತುಪಡಿಸಲು ಸ್ವಯಂಪ್ರೇರಣೆಯಿಂದ ತಮ್ಮ ಆಧಾರ್ ಸಂಖ್ಯೆಯನ್ನು ಭೌತಿಕವಾಗಿ ಅಥವಾ ಇಲೆಕ್ಟ್ರಾನಿಕ್ ರೂಪದಲ್ಲಿ ದೃಢೀಕರಣ ಅಥವಾ ಆಫ್‌ಲೈನ್ ಪರಿಶೀಲನೆ ಮೂಲಕ ಅಥವಾ ನಿಯಮದಲ್ಲಿ ಸೂಚಿಸಿದ ಇತರ ರೀತಿಯಲ್ಲಿ ಬಳಸಬಹುದಾಗಿದೆ. ಈ ಸ್ವಯಂಪ್ರೇರಣೆ ಕ್ರಮೇಣ ಕಣ್ಮರೆಯಾಗುತ್ತಿದೆ. ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆಯ ವಿವರ ಇರುವ ಯುಐಡಿಎಐ ನೀಡಿದ ಪತ್ರವನ್ನು ಅಧಿಕೃತ, ಮಾನ್ಯವಾದ ದಾಖಲೆಯಾಗಿ ಪರಿಗಣಿಸುವುದಾಗಿ 2010ರ ಡಿಸೆಂಬರ್ 16ರಂದು ಭಾರತ ಸರಕಾರ ಪ್ರಕಟನೆ ಹೊರಡಿಸಿದೆ.

 ಅಸ್ತಿತ್ವದಲ್ಲಿರುವ ಯಾವುದೇ ಗುರುತು ಪತ್ರಗಳನ್ನು ಬದಲಾಯಿಸುವ ಗುರಿಯನ್ನು ಆಧಾರ್ ಹೊಂದಿಲ್ಲ. ಅದು ಪೌರತ್ವದ ಪುರಾವೆಯನ್ನು ರೂಪಿಸುವುದಿಲ್ಲ. ಪೌರತ್ವವನ್ನು ದೃಢಪಡಿಸುವುದಿಲ್ಲ ಅಥವಾ ಹಕ್ಕುಗಳನ್ನು, ಪ್ರಯೋಜನಗಳನ್ನು ಅಥವಾ ಅರ್ಹತೆಗಳನ್ನು ಖಾತರಿಪಡಿಸುವುದಿಲ್ಲ ಎಂದು ಈ ಪ್ರಕಟನೆ ತಿಳಿಸಿತ್ತು. ಬಹು ಉದ್ದೇಶಿತ ರಾಷ್ಟ್ರೀಯ ಗುರುತು ಪತ್ರ ರೂಪಿಸುವ ಬಗ್ಗೆ ಹಲವು ಸಮಿತಿಗಳು ಶಿಫಾರಸು ಮಾಡಿದ್ದವು. ನಂತರದ ದಿನದಲ್ಲಿ ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು(ಎಲ್‌ಪಿಜಿ ಸಂಪರ್ಕ, ಸಬ್ಸಿಡಿ ದರದಲ್ಲಿ ಪಡಿತರ, ನ್ಯಾಯಬೆಲೆ ಅಂಗಡಿಯಿಂದ ಸೀಮೆ ಎಣ್ಣೆ ಪಡೆಯಲು, ಎನ್‌ಎಸ್‌ಎಪಿ ಅಥವಾ ಪಿಂಚಣಿ ಯೋಜನೆಯಡಿ ಪ್ರಯೋಜನ ಪಡೆಯಲು, ಇ-ಸಹಿ, ಡಿಜಿಟಲ್ ಲಾಕರ್ ಅಥವಾ ಇಪಿಎಫ್‌ಒನ ಯುಎಎನ್ ಸಂಖ್ಯೆ, ಸಿಮ್ ಕಾರ್ಡ್ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಅಗತ್ಯವಾದ ವಿಶಿಷ್ಟ ಗುರುತು ಪತ್ರವಾಗಿ ಇದನ್ನು ಬಳಸಲಾಯಿತು.

  ಯುಐಡಿಎಐ ವೆಬ್‌ಸೈಟ್ ಪ್ರಕಾರ, ಆಧಾರ್ ಕಾರ್ಡ್ ಹೊಂದಿದವರು ಅಥವಾ ಸೇವೆ ಒದಗಿಸುವವರು ತಮ್ಮ ಆಧಾರ್ ಸಂಖ್ಯೆಯ ಯಥಾರ್ಥತೆಯನ್ನು ಆಧಾರ್ ವೆರಿಫಿಕೇಶನ್ ಸರ್ವಿಸ್(ಎವಿಎಸ್) ಮೂಲಕ ಪರೀಕ್ಷಿಸಬಹುದು. ಜತೆಗೆ, ಈಗಾಗಲೇ ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ ಹೆಸರು ದಾಖಲಾದ ನಿವಾಸಿ ಮತ್ತೊಮ್ಮೆ ಆಧಾರ್‌ಗೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಆಧಾರ್ ಸಂಖ್ಯೆಯನ್ನು ರುಜುವಾತು ಪಡಿಸುವ ಸಂದರ್ಭದ ಬಗ್ಗೆ ಸೆಕ್ಷನ್ 7 ವಿವರಿಸಿದೆ. ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ಕೆಲವು ಪ್ರಯೋಜನಗಳ, ಸಬ್ಸಿಡಿ ಅಥವಾ ಸೇವೆ ಇತ್ಯಾದಿಗಳನ್ನು ಪಡೆಯಬೇಕಿದ್ದರೆ ಆಧಾರ್ ಸಂಖ್ಯೆಯನ್ನು ರುಜುವಾತು ಪಡಿಸಬೇಕು ಎಂದು ಸೆಕ್ಷನ್ 7 ಹೇಳಿದೆ. ಒಂದು ವೇಳೆ ಆಧಾರ್ ಸಂಖ್ಯೆ ನಿರ್ದಿಷ್ಟ ವ್ಯಕ್ತಿಗೆ ಸೇರಿರದಿದ್ದಲ್ಲಿ ಆಗ ಆ ವ್ಯಕ್ತಿ ಸರಕಾರದ ಯೋಜನೆಗಳ ಪ್ರಯೋಜನ ಪಡೆಯಲು ಗುರುತಿಸುವ ಇತರ ಪರ್ಯಾಯ ಮತ್ತು ಕಾರ್ಯಸಾಧ್ಯ ವಿಧಾನವನ್ನು ಒದಗಿಸಬೇಕು ಎಂದಿದೆ. ಇದರ ಪ್ರಕಾರ, ಓರ್ವ ವ್ಯಕ್ತಿ ಆಧಾರ್ ಸಂಖ್ಯೆ ಒದಗಿಸದಿದ್ದರೆ ಆತನಿಗೆ ಸರಕಾರದ ಪ್ರಯೋಜನ ನಿರಾಕರಿಸಬಾರದು. ಆದರೆ ಪ್ರಾಯೋಗಿಕವಾಗಿ ಆಧಾರ್ ಇಲ್ಲದ ವ್ಯಕ್ತಿ ಎಲ್ಲಾ ಸೌಕರ್ಯ, ಪ್ರಯೋಜನ ಮತ್ತು ಹಕ್ಕುಗಳನ್ನು ಕಳೆದುಕೊಳ್ಳುತ್ತಾನೆ.

ಆಧಾರ್ ಸಂಖ್ಯೆ:

ಸೆಕ್ಷನ್ 2(ಎ) ಪ್ರಕಾರ ಆಧಾರ್ ಸಂಖ್ಯೆ ಎಂದರೆ, ಸೆಕ್ಷನ್ 3 ಸಬ್‌ಸೆಕ್ಷನ್(3)ರ ಅಡಿ ವ್ಯಕ್ತಿಗಳಿಗೆ ಒದಗಿಸಲಾದ ಗುರುತಿನ ಸಂಖ್ಯೆ ಮತ್ತು ಅದೇ ಸೆಕ್ಷನ್‌ನ ಸಬ್‌ಸೆಕ್ಷನ್(4)ರಡಿ ಒದಗಿಸಲಾದ ಯಾವುದೇ ಪರ್ಯಾಯ ವಾಸ್ತವ ಗುರುತನ್ನು ಒಳಗೊಂಡಿರುತ್ತದೆ. ಈ ಗುರುತು ಪತ್ರ ದೃಢೀಕರಣಕ್ಕೆ ಅಗತ್ಯ ಎಂದು ಸೆಕ್ಷನ್ 2(ಸಿ) ಉಲ್ಲೇಖಿಸಿದೆ.

ಪ್ರತಿಯೊಬ್ಬ ನಿವಾಸಿಯ ಹಕ್ಕು: ಕಾಯ್ದೆಯ ಸೆಕ್ಷನ್ 3ರ ಪ್ರಕಾರ ‘ಜನಸಂಖ್ಯಾ ಮಾಹಿತಿ ಮತ್ತು ಬಯೊಮೆಟ್ರಿಕ್ ಮಾಹಿತಿಯನ್ನು ಒದಗಿಸುವ ಮೂಲಕ ಪ್ರತಿಯೊಬ್ಬ ನಿವಾಸಿಯೂ ಆಧಾರ್ ಸಂಖ್ಯೆ ಪಡೆಯುವ ಹಕ್ಕು ಹೊಂದಿದ್ದಾನೆ.’ ಸೆಕ್ಷನ್ 3ರ ಉಪವಿಭಾಗವು ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ಈ ಹಕ್ಕನ್ನು ಸೀಮಿತಗೊಳಿಸುವ ಹಕ್ಕನ್ನು ಕೇಂದ್ರ ಸರಕಾರಕ್ಕೆ ಒದಗಿಸಿದೆ. ಅನಾಮಧೇಯರಿಗೆ ಈ ಹಕ್ಕನ್ನು ಸರಕಾರ ಅಥವಾ ಅಧಿಕಾರಿಗಳು ನಿರಾಕರಿಸಬಹುದು. ಕಾಯ್ದೆಯಲ್ಲಿ ಸ್ವಯಂಪ್ರೇರಣೆ ಎಂಬ ಪದವಿದೆ.. ಆದರೆ ಈ ಪದದ ಮೊದಲು ‘ಇರಬಹುದು’ ಎಂಬ ಪ್ರತ್ಯಯವಿದೆ. ಕಾನೂನಿನ ಭಾಷೆಯಲ್ಲಿ ‘ಇರಬಹುದು’ ಎಂಬ ಪದಕ್ಕೆ ಅರ್ಥ ‘ಏನೂ ಇಲ್ಲ’ ಎಂದೂ ಭಾವಿಸಬಹುದು.

ಮಾಹಿತಿಯ ಭದ್ರತೆ:

ಬಯೊಮೆಟ್ರಿಕ್ ಮಾಹಿತಿ ಸೂಕ್ಷ್ಮ ವೈಯಕ್ತಿಕ ಮಾಹಿತಿಯೆಂದು ಪರಿಗಣಿಸಬೇಕು ಎಂದು ಸೆಕ್ಷನ್ 30 ಹೇಳುತ್ತದೆ. ಸೆಕ್ಷನ್ 33ಎ ಪ್ರಕಾರ, ಕಾಯ್ದೆಯ ನಿಯಮವನ್ನು ಪಾಲಿಸಲು ವಿಫಲವಾದರೆ ಅಂತಹ ಸಂಸ್ಥೆಗೆ 1 ಕೋಟಿ ರೂ.ವರೆಗೆ ದಂಡವನ್ನು ಸೂಚಿಸಲಾಗಿದೆ. ನಿರಂತರ ವೈಫಲ್ಯಕ್ಕೆ ಹೆಚ್ಚುವರಿಯಾಗಿ 10 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.

ಆಧಾರ್ ಕಾರ್ಡ್‌ಗೆ ಅರ್ಜಿ ಹಾಕಿದರೂ ಕಾರ್ಡ್ ನಿರಾಕರಿಸಲ್ಪಟ್ಟವರಿಗೆ ಯಾವುದೇ ಪರಿಹಾರ ಇಲ್ಲ. ಎಲ್ಲಾ ನಿವಾಸಿಗಳಿಗೆ ಹಕ್ಕು ಇದೆ ಎಂದು ಕಾಯ್ದೆ ಹೇಳಿದರೂ, ಅರ್ಜಿ ತಿರಸ್ಕರಿಸಲ್ಪಟ್ಟರೆ ಯಾರಿಗೆ ದೂರು ನೀಡಬೇಕು ಎಂಬ ಅಂಶವನ್ನು ಕಾಯ್ದೆಯಲ್ಲಿ ಸೇರಿಸಲಾಗಿಲ್ಲ. ನ್ಯಾಯನಿರ್ಣಯ ಅಧಿಕಾರಿಗಳ ನೇಮಕಕ್ಕೆ ಅಥವಾ ಅವರ ಆದೇಶಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೂ ಪ್ರಾಧಿಕಾರ ದೂರು ನೀಡಿದರೆ ಮಾತ್ರ ಇದು ಸಾಧ್ಯ. ವ್ಯಕ್ತಿಯ ದೂರನ್ನು ಇಲ್ಲಿ ಪರಿಗಣಿಸಲಾಗುವುದಿಲ್ಲ. ಈ ಕಾಯ್ದೆಯ ಪ್ರಕಾರ ಜನಸಾಮಾನ್ಯರಿಗೆ ದೂರು ನೀಡಲು ಅವಕಾಶವಿಲ್ಲ. ಆಧಾರ್ ಸಂಖ್ಯೆ ನೀಡಲು ನಿರಾಕರಿಸಿದ ಅಧಿಕಾರಿಯ ಮೇಲೆ ಯಾವುದೇ ಹೊಣೆಗಾರಿಕೆ ಇರುವುದಿಲ್ಲ.

2021ರ ನವೆಂಬರ್ 30ರಂದು ಪರಿಷ್ಕರಿಸಲಾದ ಆಧಾರ್ ಅಂಕಿ-ಅಂಶಗಳ ಪ್ರಕಾರ 136 ಕೋಟಿ ಜನಸಂಖ್ಯೆಯಲ್ಲಿ 126,37,56,100 ಜನರಿಗೆ ಮಾತ್ರ ಆಧಾರ್ ಸಂಖ್ಯೆ ನೀಡಲಾಗಿದೆ. ಇದು ಗಮನಾರ್ಹ ಪ್ರಗತಿ. ಆದರೆ ಉಳಿದ 10 ಕೋಟಿ ಜನರ ಪಾಡೇನು? ಇವರಿಗೆ ಆಧಾರ್ ಕಾರ್ಡ್ ದೊರಕಿಲ್ಲ. ಅರ್ಜಿ ಹಾಕದಿರುವುದು, ಅರ್ಜಿಯನ್ನು ತಿರಸ್ಕರಿಸಿರುವುದು ಅಥವಾ ಅರ್ಜಿಯ ಪರಿಶೀಲನೆ ಬಾಕಿ ಇರುವುದು ಇದಕ್ಕೆ ಕಾರಣವಾಗಿರಬಹುದು. 18 ವರ್ಷ ಮೀರಿದವರು ಮತದಾರರ ಗುರುತು ಪತ್ರ ಪಡೆಯಲು ಅರ್ಹರಾಗುತ್ತಾರೆ. 18 ವರ್ಷ ವಯಸ್ಸಿನ ಜನಸಂಖ್ಯೆಯ ಶೇ. 99.75 ರಷ್ಟು ಮಂದಿ ಆಧಾರ್ ಪಡೆದಿದ್ದಾರೆ. ಆಧಾರ್ ಕಾರ್ಡ್-ಮತದಾರರ ಕಾರ್ಡ್ ಲಿಂಕ್ ಮಾಡುವುದರಿಂದ ಯಾರೊಬ್ಬರೂ ಮತದಾನದ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂಬುದು ಅದ್ಭುತ ವಿಷಯ.

ಆದರೆ, ಬದುಕುಳಿಯಲು ಅಗತ್ಯವಿರುವ ಎಲ್ಲಾ ಪ್ರಮುಖ ಅಗತ್ಯಗಳನ್ನೂ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿರುವಾಗ, ಆಧಾರ್ ಕಾರ್ಡ್ ಹೊಂದಿರದ ಆ 10 ಕೋಟಿ ಜನತೆಯ ಪರಿಸ್ಥಿತಿ ಏನಾಗಲಿದೆ ಎಂಬುದೇ ಇಲ್ಲಿರುವ ಪ್ರಶ್ನೆಯಾಗಿದೆ.

ಕೃಪೆ: (countercurrents.org)

share
ಡಾ. ಮಡಭೂಷಿ ಶ್ರೀಧರ್
ಡಾ. ಮಡಭೂಷಿ ಶ್ರೀಧರ್
Next Story
X